ಶಾರ್ಜಾ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಮುಂಬೈಗೆ ದೊಡ್ಡ ಗೆಲುವು ತಂದುಕೊಟ್ಟ ಇಶಾನ್ ಕಿಶನ್ರನ್ನು ನಂಬಿಕಾರ್ಹ ಹುಡುಗ ಎಂದಿದ್ದು, ಆತನ ಸಾಮರ್ಥ್ಯ ಮೇಲೆ ಎಂದಿಗೂ ತಾವೂ ನಂಬಿಕೆ ಕಳೆದುಕೊಂಡಿರಲಿಲ್ಲ ಎಂದು ಮುಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಮುಂಬರುವ ಟಿ-20 ವಿಶ್ವಕಪ್ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಇಶಾನ್ ಕಿಶನ್ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್ಗಳ ನೆರವಿನಿಂದ ಅಜೇಯ 50 ರನ್ಗಳಿಸಿ ರಾಯಲ್ಸ್ ನೀಡಿದ್ದ 91 ರನ್ಗಳ ಗುರಿಯನ್ನು 8.2 ಓವರ್ಗಳಲ್ಲಿ ಮುಗಿಸಲು ನೆರವಾಗಿದ್ದರು.
"ನಮಗೆ ಎರಡು ಪಾಯಿಂಟ್‌ಗಳು ನಮಗೆ ಬಹಳ ನಿರ್ಣಾಯಕವಾಗಿದ್ದವು. ನಾವು ಅವರನ್ನು (ರಾಜಸ್ಥಾನ ರಾಯಲ್ಸ್) 90 ರನ್‌ಗಳಿಗೆ ಆಲೌಟ್ ಮಾಡಿದ್ದೆವು. ಹಾಗಾಗಿ ಆ ಗುರಿಯನ್ನು ಬೇಗ ಮುಗಿಸಲು ನಮಗೆ ಅವಕಾಶವಿತ್ತು. ಅಲ್ಲದೇ ಹಾಗೆ ಬೇಗ ಪಂದ್ಯವನ್ನು ವಶಪಡಿಸಿಕೊಳ್ಳುವುದು ಬಹಳ ಮುಖ್ಯ ಕೂಡ ಆಗಿತ್ತು. ಆದ್ದರಿಂದ ನಾವು ಮೈದಾನಕ್ಕೆ ಬಂದು ಮುಕ್ತವಾಗಿ ಬ್ಯಾಟ್ ಮಾಡಬೇಕಾಗಿತ್ತು.
ಅದರಂತೆಯೇ ನಾವು ಉತ್ತಮವವಾಗಿ ಆರಂಭಿಸಿದ್ದೆವು. ಮೊದಲ ಓವರ್‌ನಲ್ಲಿ 14-15 ರನ್ ಗಳಿಸಿದ್ದೆವು ಮತ್ತು ರನ್ - ರೇಟ್ ಅನ್ನು ಕ್ರಮವಾಗಿ ಪಡೆಯುವ ಆಲೋಚನೆಯನ್ನು ಹೊಂದಿದ್ದೆವು. ಕೊನೆಗೆ ನಮ್ಮಯೋಜನೆಯಂತೆ ಆಯಿತು. ಇದು ನಮಗೆ ಒಂದು ಪರಿಪೂರ್ಣ ಪಂದ್ಯವಾಗಿತ್ತು "ಎಂದು ರೋಹಿತ್ ಪಂದ್ಯದ ನಂತರ ಹೇಳಿದ್ದಾರೆ.
ಇಶಾನ್ ಒಂದೆರಡು ಪಂದ್ಯಗಳ ನಂತರ ಆಡುತ್ತಿದ್ದ. ಹಾಗಾಗು ನಾನೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧನಾಗಿದ್ದೆ. ನಮಗೆ ಅವನ ಸಾಮರ್ಥ್ಯ ಗೊತ್ತಿದೆ. ಆತ ಕೆಲವು ಸಮಯ ಕ್ರೀಸ್ನಲ್ಲಿ ಕಳೆಯುವುದನ್ನು ನಾವು ಬಯಸಿದ್ದೆವು ಮತ್ತು ಅದನ್ನು ಯತವತ್ತಾಗಿ ಇಶಾನ್ ಮಾಡಿದ ಎಂದು ತಿಳಿಸಿದರು.
ಇದನ್ನು ಓದಿ:IPL: ಹಳೆಯ ಬ್ಯಾಟಿಂಗ್ ವಿಡಿಯೋ ನೋಡಿ ಫಾರ್ಮ್ಗೆ ಮರಳಿದೆ- ಇಶಾನ್ ಕಿಶನ್