ETV Bharat / sports

ಕಿವೀಸ್​ ನಡುವಿನ ಫೈನಲ್​ ಪಂದ್ಯಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜು, ಐಷಾರಾಮಿ ಸ್ಟೇಡಿಯಂನ ಒಳಾಂಗಣ ನೋಟ

author img

By

Published : Jan 30, 2023, 4:46 PM IST

ಮೂರನೇ ಟಿ-20 ಪಂದ್ಯಕ್ಕೆ ಸಜ್ಜಾದ ಅಹಮದಾಬಾದ್‌ ನರೇಂದ್ರ ಮೋದಿ ಕ್ರೀಡಾಂಗಣ - ಮೊಟೆರಾದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್‌ನ ಒಳಾಂಗಣ ನೋಟ - 1,10,000 ಕುಳಿತು ನೋಡಬಹುದಾದ ಬೃಹತ್​ ಐಷಾರಾಮಿ ಕ್ರೀಡಾಂಗಣ.

narendra-modi-stadium-ahmedabad
ನರೇಂದ್ರ ಮೋದಿ ಕ್ರೀಡಾಂಗಣ

ಅಹಮದಾಬಾದ್‌ (ಗುಜರಾತ್​): ಭಾರತ ನ್ಯೂಜಿಲ್ಯಾಂಡ್​​​​ ನಡುವಿನ ಟಿ20 ಸರಣಿ ಸಮಬಲವಾಗಿದ್ದು, ಮೂರನೇ ಪಂದ್ಯ ಸೀರೀಸ್​ ಗಲುವಿಗೆ ಫೈನಲ್ ಆಗಿದೆ. ತವರು ನೆಲದಲ್ಲಿ 12 ಸರಣಿಗಳನ್ನು ಗೆದ್ದಿರುವ ಭಾರತದ ದಾಖಲೆಯನ್ನು ಮುರಿಯಲು ಕಿವೀಸ್​ ಪಡೆ ಸನ್ನದ್ಧವಾಗಿದೆ. ಮೂರನೇ ಪಂದ್ಯ ಅಹಮದಾಬಾದ್‌ನ ಸಬರಮತಿ ನದಿಯ ದಡದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೆಬ್ರವರಿ 1 ರಂದು ನಡೆಯಲಿದೆ.

narendra modi stadium ahmedabad
ಮನರಂಜನೆಯ ಉದ್ದೇಶದಿಂದ ಕ್ರೀಡಾಂಗಣದೊಳಗಿನ ಚಿತ್ರ ಮಂದಿರ

ಲಖನೌನಲ್ಲಿ ನಿನ್ನೆ ನಡೆದ ಎರಡನೇ ಟಿ20 ಪಂದ್ಯದಲ್ಲಿ ಕಷ್ಟ ಪಟ್ಟು ದಡ ಸೇರಿದೆ. ಬ್ಲಾಕ್​ಕ್ಯಾಪ್ಸ್​ ನೀಡಿದ 100 ರನ್​ಗಳ ಗುರಿಯನ್ನು ಸಾಧಿಸಲು 19.5 ಬಾಲ್​ಗಳನ್ನು ಎದುರಿಸಿದ ತಂಡ 4 ವಿಕೆಟ್​ ಸಹ ಕಳೆದು ಕೊಂಡಿತ್ತು. ಅಂತಿಮವಾಗಿ ಉಪನಾಯಕ ಸೂರ್ಯಕುಮಾರ್​ ಯಾದವ್​ ಮತ್ತು ನಾಯಕ ಹಾರ್ದಿಕ್​ರ ಬ್ಯಾಟಿಂಗ್​ನಿಂದ ದಡ ಸೇರಿತು. ಈ ಮೂಲಕ ಸರಣಿಯಲ್ಲಿ ಭಾರತ 1-1 ರಿಂದ ಸಮಬಲ ಸಾಧಿಸಿತು.

ನರೇಂದ್ರ ಮೋದಿ ಸ್ಟೇಡಿಯಂ ಅಂತಿಮ ಫೈಟ್​: ಭಾರತ ಪ್ರವಾಸದಲ್ಲಿರುವ ನ್ಯೂಜಿಲ್ಯಾಂಡ್​ ​ ಏಕದಿನ ಸರಣಿಯಲ್ಲಿ ಕ್ಲೀನ್​ಸ್ಪೀಪ್​ ಆಗಿ ಮುಖ ಬಂಗ ಅನುಭವಿಸಿತ್ತು. ಹೀಗಾಗಿ ಟಿ-20 ಸರಣಿ ಮೇಲೆ ಕಣ್ಣಿಟ್ಟಿರುವ ಸ್ಯಾಂಟ್ನರ್​ ಪಡೆ ನಾಡಿದ್ದಿನ ಪಂದ್ಯದ ಗೆಲುವಿಗಾಗಿ ಹವಣಿಸುತ್ತಿದೆ. ತವರಿನಲ್ಲಿ 13ನೇ ಸರಣಿ ಗೆಲ್ಲುವ ತವಕದಲ್ಲಿ ಮೆನ್​ ಇನ್​ ಬ್ಲೂ ಇದೆ.

narendra modi stadium ahmedabad
ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್‌ನ ಈಜುಕೊಳ

ಕ್ರಿಡಾಂಗಣದ ವಿಶೇಷತೆ ಮತ್ತು ಒಳಾಂಗಣ ನೋಟ: ಅಹಮದಾಬಾದ್‌ನ ಸಬರಮತಿ ನದಿಯ ದಡದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣವು ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಒಂದಾಗಿದೆ. ನರೇಂದ್ರ ಮೋದಿ ಸ್ಟೇಡಿಯಂ ಗುಜರಾತ್‌ನ ಅಹಮದಾಬಾದ್‌ನ ಮೊಟೆರಾದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್‌ನಲ್ಲಿದೆ. ಈ ಕ್ರೀಡಾಂಗಣವು ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ.

narendra modi stadium ahmedabad
ಆಟಗಾಗರಿಗೆ ಸ್ನೂಕರ್​ ಆಟದ ವ್ಯವಸ್ಥೆ

ಈ ಕ್ರಿಡಾಂಗಣದ ಒಳಗೆ ಆಟಗಾರರಿಗೆ ಎಲ್ಲ ಸೌಲಭ್ಯವೂ ಇದೆ. ಆಗಾರರ ಫಿಟ್​ನೆಸ್​ ದೃಷ್ಟಿಯಿಂದ ಜಿಮ್ ಕೂಡ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ಪ್ಲೇಯರ್​ಗಳ ಮನರಂಜನೆಯ ಉದ್ದೇಶದಿಂದ ಇದರೊಳಗೆ ಥಿಯೇಟರ್​ ವ್ಯವಸ್ಥೆಯೂ ಇದೆ. ಇದರಲ್ಲಿ ನೆಚ್ಚಿನ ಚಲನ ಚಿತ್ರಗಳನ್ನು ಆಟಗಾರರು ಒಟ್ಟಿಗೆ ಕುಳಿತು ವೀಕ್ಷಿಸ ಬಹುದಾಗಿದೆ. ಅಲ್ಲದೇ ಟೇಬಲ್​ ಟೆನಿಸ್​ ಮತ್ತು ಸ್ನೂಕರ್ ನಂತರ ಒಳಾಂಗಣ ಆಟದ ವ್ಯವಸ್ಥೆಯೂ ಇಲ್ಲಿದೆ. ​

narendra modi stadium ahmedabad
ಆಟಗಾರರಿಗಾಗಿ ಮಾಡಲಾಗಿರುವ ಜಿಮ್​ ವ್ಯವಸ್ಥೆ

ಈ ಕ್ರೀಡಾಂಗಣವನ್ನು 24 ಫೆಬ್ರವರಿ 2020 ರಂದು ಮಾಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉದ್ಘಾಟಿಸಿದರು. 24 ಫೆಬ್ರವರಿ 2021 ರಂದು ಕ್ರಿಡಾಂಗಣವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್‌ ಎಂದು ಕರೆದು ಕ್ರಿಕೆಟ್​ ಸ್ಟೇಡಿಯಂಗೆ ನರೇಂದ್ರ ಮೋದಿ ಹೆಸರಿಡಲಾಯಿತು. ಇದು ಬರೋಬ್ಬರಿ 63 ಎಕರೆಯಲ್ಲಿದ್ದು, ಕ್ರಿಕೆಟ್​ನ ಅತೀ ದೊಡ್ಡ ಕ್ರಿಡಾಂಗಣ ಎಂಬ ಖ್ಯಾತಿ ಇದಕ್ಕಿದೆ.

2015 ರಿಂದ 2020 ನಡುವೆ ಈ ಕ್ರಿಡಾಂಗಣವನ್ನು ನವೀಕರಿಸಲಾಯಿತು. ಮರು ನಿರ್ಮಾಣಗೊಂಡ ಕ್ರೀಡಾಂಗಣದಲ್ಲಿ ಮೊದಲು ಭಾರತ ಮತ್ತು ಇಂಗ್ಲೆಂಡ್ ನಡುವೆ ಫೆಬ್ರವರಿ 24 ರಂದು ಪಿಂಕ್​ ಬಾಲ್​ನ ಅಹರ್ನಿಶಿ ಪಂದ್ಯ ನಡೆಯಿತು. ಈ ಕ್ರಿಡಾಂಗಣದಲ್ಲಿ ಬರೋಬ್ಬರಿ 1,10,000 ಜನ ಕುಳಿತು ಕೊಳ್ಳುವ ಸಾಮರ್ಥ್ಯ ಹೊಂಡಿದ್ದು ನಾಲ್ಕು ಪ್ರವೇಶ ದ್ವಾರಗಳಿಂದ ಕೂಡಿದೆ. ಹಾಗೂ ಬರುವ ಪ್ರೇಕ್ಷಕರಿಗೆ ಸುಸಜ್ಜಿತ ಪಾರ್ಕಿಂಗ್​ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಇದನ್ನೂ ಓದಿ: IND vs NZ 2nd T20 : ನಾಯಕ, ಉಪನಾಯಕನ ಆಟಕ್ಕೆ ಒಲಿದ ಜಯ, ಸರಣಿಯಲ್ಲಿ ಸಮಬಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.