ಲಂಡನ್: ಇಂದು 41ನೇ ಜನ್ಮದಿನದ ಸಂಭ್ರಮದಲ್ಲಿರುವ ಭಾರತದ ಮಾಜಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಲಂಡನ್ ಪ್ರವಾಸದಲ್ಲಿದ್ದಾರೆ. ಕುಟುಂಬದೊಂದಿಗೆ ವಿದೇಶಕ್ಕೆ ಭೇಟಿ ನೀಡಿರುವ ಅವರು ವಿಂಬಲ್ಡನ್ ವೀಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಟೆನಿಸ್ ದಿಗ್ಗಜ ರಾಫೆಲ್ ನಡಾಲ್ ಮತ್ತು ಟೇಲರ್ ಫ್ರಿಟ್ಜ್ ನಡುವೆ ನಿನ್ನೆ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯವನ್ನು ಧೋನಿ ಆನಂದಿಸಿದರು.
-
An Indian icon watching on 🇮🇳#Wimbledon | @msdhoni pic.twitter.com/oZ0cNQtpXY
— Wimbledon (@Wimbledon) July 6, 2022 " class="align-text-top noRightClick twitterSection" data="
">An Indian icon watching on 🇮🇳#Wimbledon | @msdhoni pic.twitter.com/oZ0cNQtpXY
— Wimbledon (@Wimbledon) July 6, 2022An Indian icon watching on 🇮🇳#Wimbledon | @msdhoni pic.twitter.com/oZ0cNQtpXY
— Wimbledon (@Wimbledon) July 6, 2022
ಎಂ.ಎಸ್.ಧೋನಿ ಪಂದ್ಯ ನೋಡುತ್ತಿರುವ ಫೋಟೋವನ್ನು ವಿಂಬಲ್ಡನ್ ಅಧಿಕೃತ ಟ್ವಿಟ್ಟರ್ ಖಾತೆ ಹಂಚಿಕೊಂಡಿದೆ. "ಭಾರತ ಕ್ರಿಕೆಟ್ ಐಕಾನ್ ವಿಂಬಲ್ಡನ್ ಟೆನಿಸ್ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ" ಎಂದು ಬರೆದುಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೂ ಕೂಡ ಮಹಿ ಚಿತ್ರವನ್ನು ಟ್ವೀಟ್ ಮಾಡಲಾಗಿದ್ದು, "ಜನ್ಮದಿನದ ಸಂಭ್ರಮದಲ್ಲಿರುವ ಥಾಲಾ ವಿಂಬಲ್ಡನ್ನಲ್ಲಿದ್ದಾರೆ" ಎಂದು ಕ್ಯಾಪ್ಷನ್ ನೀಡಿದೆ.
ಧೋನಿ ಬೂದು ಬಣ್ಣದ ಬ್ಲೇಜರ್ ಮತ್ತು ಬಿಳಿ ಶರ್ಟ್ ಧರಿಸಿ, ಪ್ರೇಕ್ಷಕರ ಸ್ಟ್ಯಾಂಡ್ನಲ್ಲಿ ಕುಳಿತು ರಾಫೆಲ್ ಆಟವನ್ನು ಕಣ್ತುಂಬಿಕೊಂಡಿದ್ದಾರೆ. ಭಾರತದ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಡ ಪ್ರೇಕ್ಷಕರ ಜೊತೆಗೂಡಿ ಪಂದ್ಯವನ್ನು ವೀಕ್ಷಿಸಿದರು.
ಇದನ್ನೂ ಓದಿ: ನಿವೃತ್ತಿಯ ಕೊನೆ ಪಂದ್ಯದಲ್ಲಿ ಸಾನಿಯಾಗೆ ಸೋಲು; ವಿಂಬಲ್ಡನ್ ಹೋರಾಟ ಅಂತ್ಯ