ETV Bharat / sports

MS Dhoni: ಪಿಂಚ್-ಟು-ಜೂಮ್ ಶೈಲಿಯ ವಿಡಿಯೋದಲ್ಲಿ ಧೋನಿಯ ಕ್ರಿಕೆಟ್​ ಪಯಣ..

ಭಾರತದ ಯಶಸ್ವಿ ನಾಯಕ ಮಹೇಂದ್ರ ಸಿಂಗ್​ ಧೋನಿ ವಿಶೇಷ ಕ್ಷಣಗಳನ್ನು ಚಿತ್ರಿಸಿರುವ ಪಿಂಚ್-ಟು-ಜೂಮ್ ವಿಡಿಯೋವನ್ನು ಅಭಿಮಾನಿಯೊಬ್ಬರು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದು, ಅದು ವೈರಲ್​ ಆಗುತ್ತಿದೆ.

ms dhoni journey on pinch to zoom video
ms dhoni journey on pinch to zoom video
author img

By

Published : Jul 10, 2023, 8:03 PM IST

ಭಾರತದ ಮಾಜಿ ನಾಯಕ ಎಂಎಸ್ ಧೋನಿ ವಿಶ್ವದ ಅತ್ಯಂತ ಗೌರವಾನ್ವಿತ ಮತ್ತು ಪ್ರೀತಿಪಾತ್ರ ಕ್ರಿಕೆಟಿಗರಲ್ಲಿ ಒಬ್ಬರು. ಅವರು ತಮ್ಮ ಕ್ರೀಡಾ ಜೀವನದ ಅತ್ಯಂತ ಸ್ಫೂರ್ತಿದಾಯಕ ಪ್ರಯಾಣ ಹೊಂದಿದ್ದಾರೆ. ಜಾರ್ಖಂಡ್ ಮೂಲದ ಅವರು, ರೈಲ್ವೇ ನಿಲ್ದಾಣದಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುವುದರಿಂದ ಹಿಡಿದು ಭಾರತದ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಐಸಿಸಿ ಟ್ರೋಫಿಗಳನ್ನು ಗೆದ್ದು ಯಶಸ್ವಿ ನಾಯಕರಾದರು.

2007ರಲ್ಲಿ ಭಾರತದಲ್ಲಿ ನಡೆದ ಪ್ರಥಮ ಟಿ20 ವಿಶ್ವಕಪ್​ನ ಗೆಲುವಿನ ಮೂಲಕ ಅವರ ನಾಯಕತ್ವದ ಶಕ್ತಿ ಇಡೀ ವಿಶ್ವಕ್ಕೆ ಅನಾವರಣ ಆಗಿತ್ತು. ಮೈದಾನದಲ್ಲಿ ಬ್ಯಾಟರ್​ ಯಾವ ಬಾಲ್​ಗೆ ಯಾವ ಶಾಟ್​ ಆಡುತ್ತಾನೆ ಎಂಬ ಲೆಕ್ಕಾಚಾರವನ್ನು ಮೊದಲೇ ಮಾಡಿ ಬೌಲರ್​ಗೆ ಇದೇ ರೀತಿ ಬಾಲ್​ ಮಾಡು ಎಂದು ಹೇಳಿ ವಿಕೆಟ್​ ಉರುಳಿಸುವ ತಂತ್ರಗಾರಿಕೆ ಇದ್ದ ನಾಯಕ. ವಿಕೆಟ್​ ಹಿಂದೆ ಅತ್ಯಂತ ಚುರುಕಾಗಿ ಸ್ಟಂಪ್​ ಮಾಡಿ ವಿಕೆಟ್​​ ಕಬಳಿಸುತ್ತಿದ್ದ ಕೀಪರ್​​.

ಭಾರತಕ್ಕೆ 2007ರಲ್ಲಿ ಟಿ20 ವಿಶ್ವಕಪ್​, 2011ರಲ್ಲಿ ಏಕದಿನ ವಿಶ್ವಕಪ್​ ಹಾಗೇ 2013 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ನಾಯಕ ಎಂಎಸ್​ ಧೋನಿ. ಅವರ ಕ್ರಿಕೆಟ್​ ಪ್ರಯಾಣದಿಂದ ಪ್ರೇರಿತರಾದ ಅಭಿಮಾನಿಯೊಬ್ಬರು ಧೋನಿ ಅವರ ಜೀವನದ ಪ್ರಮುಖ ಘಟನೆಗಳನ್ನು ವಿವರಿಸುವ ಪಿಂಚ್-ಟು-ಜೂಮ್ ಶೈಲಿಯ ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದಾರೆ.

ಎಂಎಸ್​​ ಧೋನಿ 2004 ರಲ್ಲಿ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು. ಅವರು ಭಾರತ ತಂಡಕ್ಕೆ ಪ್ರವೇಶ ಪಡೆಯುವಾಗ ಭರ್ಜರಿ ಸಿಕ್ಸ್​ ಹಿಟ್ಟರ್​ ಎಂಬುದನ್ನು ಸಾಬೀತು ಮಾಡಿದ್ದರು. ತಂಡ ಎಂತಹ ಕಠಿಣ ಸ್ಥಿತಿಯಲ್ಲಿದ್ದರೂ ಅದನ್ನು ಗೆಲುವಿಗೆ ಕೊಂಡೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದ್ದರು. ಎಷ್ಟೋ ಪಂದ್ಯಗಳನ್ನು ಧೋನಿ ತಮ್ಮ ಏಕಾಂಗಿ ಆಟದಿಂದ ಗೆಲ್ಲಿಸಿಕೊಟ್ಟಿದ್ದಾರೆ. ಬೌಲರ್​ಗಳ ಜೊತೆ ಸೇರಿ 50 ಪ್ಲಸ್​ ಜೊತೆಯಾಟ ಆಡಿದ ದಾಖಲೆಯಲ್ಲಿ ಧೋನಿ ಹೆಸರಿದೆ. 8, 9ನೇ ವಿಕೆಟ್​ ಸಮಯದಲ್ಲಿ ಶತಕಗಳನ್ನು ದಾಖಲಿಸಿದ್ದಾರೆ. ಭಾರತದ ಬೆಸ್ಟ್​ ಫಿನಿಶರ್​​ ಎಂಬ ಪಟ್ಟ ಅವರಿಗಿದೆ. 2011ರಲ್ಲಿ ಅವರ ಹೆಲಿಕಾಪ್ಟರ್​ ಶಾಟ್​ ಮೂಲಕ ಸಿಕ್ಸ್​​ ಗಳಿಸಿ ವಿಶ್ವಕಪ್​ ಎತ್ತಿದ ಕ್ಷಣವನ್ನು ಯಾವ ಕ್ರಿಕೆಟಿಗನು ಮರೆಯಲಾರರು.

ಧೋನಿಯ ಬಲಿಷ್ಠ ಫಾರ್ಮ್ಯಾಟ್ ಏಕದಿನ ಪಂದ್ಯವಾಗಿತ್ತು. ಈ ಸ್ವರೂಪದಲ್ಲಿ 350 ಪಂದ್ಯಗಳಲ್ಲಿ 50.57 ಸರಾಸರಿಯಲ್ಲಿ 10,773 ರನ್ ಕಲೆಹಾಕಿದ್ದಾರೆ. ಅವರು ಭಾರತದ ಪರ 10 ಶತಕ ಮತ್ತು 73 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅವರ ಅತ್ಯತ್ತಮ ಇನ್ನಿಂಗ್ಸ್​ ಅಜೇಯ 183 ರನ್ ಗಳಿಸಿದ್ದಾಗಿದೆ. ವಿಕೆಟ್‌ ಕೀಪರ್-ಬ್ಯಾಟರ್ ಭಾರತದ ಐದನೇ ಅತಿ ಹೆಚ್ಚು ಏಕದಿನ ಸ್ಕೋರರ್ ಆಗಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ 18,426 ರನ್‌ಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ 16ನೇ ಆವೃತ್ತಿಯಲ್ಲಿ ಸಿಎಸ್​ಕೆ ತಂಡ ಮಾಹಿಯ ನಾಯಕತ್ವದಲ್ಲಿ ಐದನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಅತಿ ಹೆಚ್ಚು ಬಾರಿ ಫೈನಲ್​ ಆಡಿದ ತಂಡ ಚೆನ್ನೈ ಎಂಬ ಕೀರ್ತಿಯು ಮಾಹಿಯ ತಂಡಕ್ಕಿದೆ.

ಇದನ್ನೂ ಓದಿ: ಅತಿ ಅಪರೂಪದ ಘಟನೆ 2019ರ ಈ ದಿನ ಸಂಭವಿಸಿತ್ತು.. ಭಾರತದ ಅಭಿಮಾನಿಗಳ ಕಣ್ಣಾಲಿಗಳು ತೇವವಾದ ಕ್ಷಣ ಇಲ್ಲಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.