ETV Bharat / sports

ಮೊದಲ ಎಸೆತದಲ್ಲೇ ಸಿಕ್ಸರ್! ಎಬಿಡಿ ದಾಖಲೆ ಸರಿಗಟ್ಟಿದ ಧೋನಿ; ಟಿ-20 ಕ್ರಿಕೆಟ್​ನಲ್ಲಿ 7 ಸಾವಿರ ರನ್​ ಸರದಾರ - ಎಬಿಡಿ ದಾಖಲೆ ಸರಿಗಟ್ಟಿದ ಧೋನಿ

ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹೊಸದೊಂದು ದಾಖಲೆ ಬರೆದಿದ್ದು, ಈ ಸಾಧನೆ ಮಾಡಿರುವ ಮೊದಲ ವಿಕೆಟ್ ಕೀಪರ್ ಆಗಿ ಹೊರಹೊಮ್ಮಿದ್ದಾರೆ.

Dhoni equals AB de Villiers record
Dhoni equals AB de Villiers record
author img

By

Published : Apr 1, 2022, 10:04 AM IST

Updated : Apr 6, 2022, 8:04 AM IST

ಮುಂಬೈ: ಇಂಡಿಯನ್​ ಪ್ರೀಮಿಯರ್ ಲೀಗ್​​ನ ಹೊಡಿ ಬಡಿ ಆಟದಲ್ಲಿ ದಾಖಲೆ ಮೇಲೆ ದಾಖಲೆ ಮೂಡಿ ಬರಲು ಶುರುವಾಗಿವೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಕ್ಯಾಪ್ಟನ್​, ವಿಕೆಟ್ ಕೀಪರ್ ಬ್ಯಾಟರ್ ಮಹೇಂದ್ರ ಸಿಂಗ್ ಧೋನಿ ಲಖನೌ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಅನೇಕ ದಾಖಲೆ ನಿರ್ಮಾಣ ಮಾಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ(49) ವಿಕೆಟ್ ಪತನಗೊಳ್ಳುತ್ತಿದ್ದಂತೆ ಕ್ರೀಸ್​ಗೆ ಆಗಮಿಸಿದ ಮಹೇಂದ್ರ ಸಿಂಗ್ ಧೋನಿ, ತಾವು ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್​ ದಾಖಲೆ ಸರಿಗಟ್ಟಿದ್ದಾರೆ.

19ನೇ ಓವರ್​ನಲ್ಲಿ ಅತಿ ಹೆಚ್ಚು ಸಿಕ್ಸರ್: ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್​ನ ಇತಿಹಾಸದಲ್ಲೇ 19ನೇ ಓವರ್​​ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. 19ನೇ ಓವರ್​​ನಲ್ಲೇ ಧೋನಿ ಇಲ್ಲಿಯವರೆಗೆ 36 ಸಿಕ್ಸರ್ ಬಾರಿಸಿದ್ದಾರೆ. ಈಗಾಗಲೇ ಈ ದಾಖಲೆ ಎಬಿಡಿ ಹೆಸರಿನಲ್ಲಿದೆ. ಇದಾದ ಬಳಿಕ ವೆಸ್ಟ್ ಇಂಡೀಸ್​ನ ಆಂಡ್ರೂ ರೆಸೆಲ್​ 26, ಕಿರನ್ ಪೊಲಾರ್ಡ್​​ 24 ಹಾಗೂ ಹಾರ್ದಿಕ್ ಪಾಂಡ್ಯಾ 24 ಸಿಕ್ಸರ್​ ಸಿಡಿಸಿದ್ದಾರೆ.

ಇದನ್ನೂ ಓದಿ: ಐಪಿಎಲ್‌ನಲ್ಲಿಂದು ಪಂಜಾಬ್​​​​-ಕೋಲ್ಕತ್ತಾ ಫೈಟ್‌: ಗೆಲುವಿನ ಉತ್ಸಾಹದಲ್ಲಿ ಮಯಾಂಕ್​​-ಶ್ರೇಯಸ್​

ಧೋನಿ ಖಾತೆಯಲ್ಲಿ 7 ಸಾವಿರ ರನ್​!: ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ 6 ಎಸೆತಗಳಲ್ಲಿ ಅಜೇಯ 16ರನ್​ಗಳಿಕೆ ಮಾಡಿರುವ ಧೋನಿ ಟಿ-20 ಕ್ರಿಕೆಟ್​ನಲ್ಲಿ 7 ಸಾವಿರ ರನ್ ಪೂರೈಕೆ ಮಾಡಿದರು. ಈ ಸಾಧನೆ ಮಾಡಿರುವ ಭಾರತದ ಏಳನೇ ಬ್ಯಾಟರ್ ಆಗಿರುವ ಮಹೇಂದ್ರ ಸಿಂಗ್ ಧೋನಿ, ಮೊದಲ ವಿಕೆಟ್ ಕೀಪರ್ ಆಗಿ ಹೊರಹೊಮ್ಮಿದ್ದಾರೆ. ಟೀಂ ಇಂಡಿಯಾ ಪರ ವಿರಾಟ್​ ಕೊಹ್ಲಿ 10,326ರನ್, ರೋಹಿತ್ ಶರ್ಮಾ 9,936ರನ್, ಶಿಖರ್ ಧವನ್​ 8,818ರನ್, ರಾಬಿನ್ ಉತ್ತಪ್ಪ 7,070 ರನ್​ಗಳಿಸಿದ್ದು, ನಂತರದ ಸ್ಥಾನದಲ್ಲಿ ಧೋನಿ ಇದ್ದಾರೆ. ಟಿ20 ಕ್ರಿಕೆಟ್​ನಲ್ಲಿ​ ಅತಿ ಹೆಚ್ಚು ರನ್​ಗಳಿಕೆ ಮಾಡಿರುವ ಪೈಕಿ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದು, 14,321ರನ್​​ಗಳಿಸಿದ್ದಾರೆ.

ವಿಶೇಷವೆಂದರೆ, ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್​ಗಳಿಕೆ ಮಾಡಿರುವ ಬ್ಯಾಟರ್​ಗಳು ಆರಂಭಿಕರಾಗಿ ಕಣಕ್ಕಿಳಿಯುವವರೇ ಇದ್ದಾರೆ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಮಹೇಂದ್ರ ಸಿಂಗ್ ಧೋನಿ ಈ ದಾಖಲೆ ನಿರ್ಮಾಣ ಮಾಡಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.

Last Updated : Apr 6, 2022, 8:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.