ದುಬೈ : ಭಾರತ ಏಕದಿನ ತಂಡ ನಾಯಕಿ ಮಿಥಾಲಿ ರಾಜ್ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆಸೀಸ್ ಸರಣಿಯಲ್ಲಿ ಮಿಂಚಿದ್ದ ಜೂಲನ್ ಗೋಸ್ವಾಮಿ ಬೌಲಿಂಗ್ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
38 ವರ್ಷದ ಮಿಥಾಲಿ ಇತ್ತೀಚೆಗೆ ಮುಗಿದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಕೇವಲ 87 ರನ್ಗಳಿಸಿದ್ದರು. ಈ ಕಳಪೆ ಪ್ರದರ್ಶನವೇ ಅವರನ್ನು 3 ಸ್ಥಾನ ಕಳೆದುಕೊಳ್ಳುವಂತೆ ಮಾಡಿದೆ. ಪ್ರಸ್ತುತ 738 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಲೆಜಲ್ಲೆ ಲೀ(761) ಮತ್ತು ಆಸ್ಟ್ರೇಲಿಯಾದ ಅಲಿಸ್ಸಾ ಹೀಲಿ(750) ಮೊದಲೆರಡು ಸ್ಥಾನದಲ್ಲಿದ್ದಾರೆ.
- — ICC (@ICC) September 28, 2021 " class="align-text-top noRightClick twitterSection" data="
— ICC (@ICC) September 28, 2021
">— ICC (@ICC) September 28, 2021
ಭಾರತ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ ಒಂದು ಸ್ಥಾನ ಮೇಲೇರಿ 6ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಬೆತ್ ಮೂನಿ(8) ಎಂಟು ಸ್ಥಾನ ಮೇಲೇರಿ ಟಾಪ್ 10ಕ್ಕೆ ಎಂಟ್ರಿಕೊಟ್ಟಿದ್ದಾರೆ.
3ನೇ ಏಕದಿನ ಪಂದ್ಯದಲ್ಲಿ 3 ವಿಕೆಟ್ ಪಡೆದು ಆಸ್ಟ್ರೇಲಿಯಾದ 26 ಗೆಲುವಿನ ಓಟವನ್ನು ಅಂತ್ಯಗೊಳಿಸುವಲ್ಲಿ ಸಫಲರಾಗಿದ್ದ ಭಾರತದ ಅನುಭವಿ ಬೌಲರ್ ಜೂಲನ್ ಗೋಸ್ವಾಮಿ 2 ಸ್ಥಾನ ಬಡ್ತಿ ಪಡೆದು 2ನೇ ಶ್ರೇಯಾಂಕ ಪಡೆದಿದ್ದಾರೆ.
ಇನ್ನು, ಇವರು ಆಲ್ರೌಂಡರ್ ಶ್ರೇಯಾಂಕದಲ್ಲೂ 3 ಸ್ಥಾನ ಬಡ್ತಿ ಪಡೆದು ಟಾಪ್ 10ಕ್ಕೆ ಪ್ರವೇಶಿಸಿದ್ದಾರೆ. ಆಸ್ಟ್ರೇಲಿಯಾದ ಜೆಸ್ ಜೊನಾಸೆನ್(760) ಮತ್ತು ಮೇಗನ್ ಶೂಟ್(717) ಕ್ರಮವಾಗಿ ಮೊದಲ ಮತ್ತು 3ನೇ ಸ್ಥಾನದಲ್ಲಿದ್ದಾರೆ.