ETV Bharat / sports

ಒಳ ಸಂಚು ರೂಪಿಸಲು ಇಂಪ್ಯಾಕ್ಟ್​ ಪ್ಲೇಯರ್​ ಪರಿಣಾಮಕಾರಿ: ಮೈಕ್ ಹೆಸ್ಸನ್ - ETV Bharath Kannada news

2023 ರ ಐಪಿಎಲ್​ಗೆ ಕೆಲ ನಿಯಮಗಳಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದ್ದು, ಇದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕ ಮೈಕ್ ಹೆಸ್ಸನ್ ಸ್ವಾಗತಿಸಿದ್ದಾರೆ.

Mike Hesson
ಮೈಕ್ ಹೆಸ್ಸನ್
author img

By

Published : Mar 25, 2023, 7:39 PM IST

ಬೆಂಗಳೂರು: ಐಪಿಎಲ್​ನ್ನು ಇನ್ನಷ್ಟೂ ಕುತೂಹಲಕಾರಿಯಾಗಿ ಮಾಡಲು ಬಿಸಿಸಿಐ ಈ ಬಾರಿಯ ಐಪಿಎಲ್​ನಲ್ಲಿ ಹೊಸ ನಿಯಮವನ್ನು ಪರಿಚಯಿಸಿದೆ. ಈ ನಿಯಮದಂತೆ ಪಂದ್ಯದ ಮಧ್ಯೆ ಇಂಪ್ಯಾಕ್ಟ್​ ಆಟಗಾರರನ್ನು ಆಡಿಸುವ ಅವಕಾಶ ಮಾಡಿಕೊಡಲಾಗಿದೆ. ಅದರಂತೆ ಟಾಸ್​ ನಂತರವೂ ಆಡುವ 11 ರಲ್ಲಿ ಐದು ಆಟಗಾರರನ್ನು ಬದಲಾವಣೆಯ ಆಟಗಾರರಾಗಿ ಮಾಡಿಕೊಳ್ಳುವ ಅವಕಾಶ ಇದೆ.

ಬಿಸಿಸಿಐ 2023ರ ಐಪಿಎಲ್​ನಲ್ಲಿ ಕೆಲ ನಿಯಮಗಳಿಗೆ ಬದಲಾವಣೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕ ಮೈಕ್ ಹೆಸ್ಸನ್ ಉತ್ತಮ ನಿಯಮ ಎಂದು ಬಣ್ಣಿಸಿದ್ದಾರೆ. ಅಲ್ಲದೇ ಇದು ಪಂದ್ಯಾವಳಿಯನ್ನು ಇನ್ನಷ್ಟೂ ಕುತೂಹಲಕಾರಿಯಾಗಿ ಮಾಡಲಿದೆ ಎಂದು ಹೇಳಿದ್ದಾರೆ.

ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಪ್ರಕಾರ, ಎಲ್ಲಾ ಹತ್ತು ತಂಡಗಳು ಟಾಸ್ ಸಮಯದಲ್ಲಿ ಆಡುವ ಹನ್ನೊಂದನ್ನು ಹೊರತುಪಡಿಸಿ ಭಾರತೀಯ ಆಟಗಾರರಾದ ಐದು ಬದಲಿ ಆಟಗಾರರನ್ನು ಗುರುತಿಸಬೇಕಾಗಿದೆ. ಹೆಸರಿಸಲಾದ ಬದಲಿಗಳಲ್ಲಿ, ಒಬ್ಬ ಆಟಗಾರನನ್ನು ಮಾತ್ರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಬಹುದು. ಒಂದು ತಂಡವು ಇನ್ನಿಂಗ್ಸ್‌ನ ಆರಂಭದ ಮೊದಲು ಅಥವಾ ಓವರ್‌ ಮುಗಿದ ನಂತರ ಪ್ರಭಾವಿ ಆಟಗಾರನನ್ನು ತರಬಹುದು. ಬ್ಯಾಟರ್‌ನ ಸಂದರ್ಭದಲ್ಲಿ, ವಿಕೆಟ್ ಪತನದ ಸಮಯದಲ್ಲಿ ಬದಲಾವಣೆಯನ್ನು ಮಾಡಬಹುದು ಅಥವಾ ಬ್ಯಾಟರ್ ಪಂದ್ಯದ ನಡುವೆ ಸ್ವ ನಿವೃತ್ತಿ ಪಡೆದು ಇಂಪ್ಯಾಕ್ಟ್ ಪ್ಲೇಯರ್​ಗೆ ಅವಕಾಶ ಮಾಡಿಕೊಡಬಹುದು.

ಈ ಬಗ್ಗೆ ಮಾತನಾಡಿದ ಮೈಕ್ ಹೆಸ್ಸನ್, "ಹರಾಜಿನ ಮೊದಲು ನಾವು ಇಂಪ್ಯಾಕ್ಟ್ ಪ್ಲೇಯರ್ ಪರಿಚಯಿಸುವ ಬಗ್ಗೆ ಕೇಳಲಾಗಿತ್ತು. ಅದರಂತೆ ನಿಯಮ ತಂದಿದ್ದಾರೆ. ಈ ನೀತಿಯಂತೆ ಆಲ್​ರೌಂಡರ್​ಗಳು ಹೆಚ್ಚು ಅವಕಾಶ ಪಡೆದುಕೊಳ್ಳಲಿದ್ದು, ಕೆಲ ತಂತ್ರಗಳನ್ನು ಪಂದ್ಯದ ನಡುವೆ ಮಾಡಲು ಸಾಧ್ಯೆತೆ ಇದೆ. ನನಗೆ ಇದು ತುಂಬಾ ಇಷ್ಟವಾಗಿದೆ. ಇದು ಸ್ವಲ್ಪ ಒಳಸಂಚು ತಂದಿದೆ ಎಂದು ನಾನು ಭಾವಿಸಿದೆ. ನೀವು ಯಾವಾಗ ಬೇಕಾದರೂ ಆಟಗಾರನನ್ನು ಪರಿಚಯಿಸಬಹುದು. ಇದು ಉತ್ತಮ ಬೆಳವಣಿಗೆಯಾಗಿದೆ. ಮೊದಲು ಬ್ಯಾಟಿಂಗ್​ ಮಾಡುವ ತಂಡ ಬ್ಯಾಟರ್​ನ್ನು ಈ ನಿಯಮದಡಿ ತಂದರೆ ಎದುರಾಳಿ ತಕ್ಕ ಬೌಲರ್​ನ್ನು ಕಣಕ್ಕಿಳಿಸಿ ಯೋಜನೆಯನ್ನು ಅಡಿಮೇಲಾಗಿ ಮಾಡಬಹುದು. ಈ ರೀತಿಯ ಅವಕಾಶ ಪಂದ್ಯವನ್ನು ಇನ್ನಷ್ಟೂ ಕುತೂಹಲ ಮಾಡಲಿದೆ" ಎಂದು ಹೇಳಿದ್ದಾರೆ.

ವೈಡ್​ ಮತ್ತು ನೋಬಾಲ್​ಗೆ ಮೂರನೇ ಅಂಪೈರ್​ ಮೊರೆ ಹೊಗುವ ಬಗ್ಗೆ ಅಭಿಪ್ರಾಯ ಹೇಳಿರುವ ಹಸ್ಸನ್​​ "ಇದನ್ನು ಈಗಾಗಲೇ ಡಬ್ಲ್ಯುಪಿಎಲ್‌ನಲ್ಲಿ ಬಳಸಲಾಗುತ್ತಿದೆ. ಇದು ಉತ್ತಮವಾಗಿ ಬಳಕೆಯಾಗುತ್ತಿದೆ. ಟಿ20 ಮಾದರಿಯ ಪಂದ್ಯದಲ್ಲಿ ಒಂದು ರನ್​ ಕೂಡ ಮಹತ್ವದ್ದು, ಹೀಗಾಗಿ ಇದು ತುಂಬಾ ಅನುಕೂಲ. ಸೊಂಟದ ಎತ್ತರದ ನೋ ಬಾಲ್ ಅಥವಾ ವೈಡ್ ಪ್ಯಾಡ್‌ಗಳನ್ನು ಫ್ಲಿಕ್ ಮಾಡಿದಾಗ ವೈಡ್ ಎಂದು ಕರೆಯಬಹುದೇ ಎಂಬ ಸಂದಿಗ್ಧತೆಯನ್ನು ತೆಗೆದುಹಾಕುತ್ತದೆ. ಎಲ್ಲಾ ಆಟಗಾರರು ಮತ್ತು ಪ್ರೇಕ್ಷಕರು ಸ್ವಲ್ಪ ಒತ್ತಡವನ್ನು ತೆಗೆದುಕೊಳ್ಳಲು ಸಾಧ್ಯವಾದಷ್ಟು ಸರಿಯಾದ ನಿರ್ಧಾರಗಳನ್ನು ಬಯಸುತ್ತಾರೆ" ಎಂದಿದ್ದಾರೆ.

ಏಪ್ರಿಲ್ 2 ರಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಐಪಿಎಲ್ 2023 ಅಭಿಯಾನವನ್ನು ಪ್ರಾರಂಭಿಸಲಿದೆ.

ಆರ್​ಸಿಬಿ ತಂಡ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೋಮ್ಮರ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್.

ಇದನ್ನೂ ಓದಿ: IPL 2023: ಕೆಕೆಆರ್​ಗೆ ಈ ಜಮೈಕನ್​ ಆಟಗಾರನೇ ಬಲ, ದಾಖಲೆಯ ಸ್ಟ್ರೈಕ್​ ರೇಟ್​ ಪ್ಲೇಯರ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.