ಮುಂಬೈ: ಕೋವಿಡ್ 19 ಸಾಂಕ್ರಾಮಿಕದ ಕಾರಣ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಈ ವರ್ಷದ ಮಂಬೈ ಟಿ20 ಲೀಗ್ ಮುಂದೂಡಲು ನಿರ್ಧರಿಸಿದೆ.
ಪ್ರಸ್ತುತ ಪರಿಸ್ಥಿತಿ ಗಣನೆಗೆ ತೆಗೆದುಕೊಂಡು ಮುಂಬೈ ಟಿ20 ಲೀಗ್ ಅನ್ನು ನಡೆಸದಿರಲು ತೀರ್ಮಾನ ಕೈಗೊಂಡಿದ್ದೇವೆ ಎಂದು ಎಂಸಿಎ ಅಧ್ಯಕ್ಷರಾದ ವಿಜಯ ಪಾಟೀಲ್ ತಿಳಿಸಿದ್ದಾರೆ ಎಂದು ಎಂಸಿಎ ಪ್ರಕಟಣೆ ಹೊರಡಿಸಿದೆ.
ಯಂತ್ರೋಪಕರಣಗಳ ಮೇಲಿನ ಹೊರೆ ಕಡಿಮೆ ಮಾಡಲು ಮತ್ತು ಎಲ್ಲರೂ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಇದು ನಮ್ಮ ಮಾರ್ಗವಾಗಿದೆ" ಎಂದು ಎಂಸಿಎ ಹೇಳಿಕೆಯಲ್ಲಿ ತಿಳಿಸಿದೆ.
2018 ಮತ್ತು 2019 ರ ಮುಂಬೈ ಟಿ -20 ಲೀಗ್ ಯಶಸ್ವಿಯಾಗಿ ನಡೆದಿತ್ತು. ಆದರೆ, 2020ರ ಆವೃತ್ತಿ ಕೋವಿಡ್ 19 ನಿಂದ ರದ್ದಾಗಿತ್ತು. ಇದೀಗ 2021 ಆವೃತ್ತಿಯು ಲೀಗ್ ಕೂಡ ಕೋವಿಡ್ನಿಂದಲೇ ಮುಂದೂಡಲ್ಪಟ್ಟಿದೆ. ನಿತ್ಯ 60 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ಪ್ರಸ್ತುತ ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚಿನ ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನು ಓದಿ:ಸೋಲಿಗೆ ನನ್ನ ಮಂದಗತಿಯ ಬ್ಯಾಟಿಂಗ್ ಕಾರಣ ಎಂದು ತನ್ನನ್ನು ತಾನೇ ದೂಷಿಸಿಕೊಂಡ ವಾರ್ನರ್!