ಲಂಡನ್: ಆತಿಥೇಯ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿ ಆಡಲು ಆಂಗ್ಲರ ನಾಡಿನಲ್ಲಿ ಉಳಿದುಕೊಂಡಿರುವ ಟೀಂ ಇಂಡಿಯಾಗೆ ಮೇಲಿಂದ ಮೇಲೆ ಗಾಯದ ಮೇಲೆ ಬರೆ ಬೀಳುತ್ತಿದೆ. ಟೂರ್ನಿ ಆರಂಭಗೊಳ್ಳಲು ಕೇವಲ ಎರಡು ದಿನ ಬಾಕಿ ಇರುವಾಗಲೇ ಮೊದಲ ಟೆಸ್ಟ್ ಪಂದ್ಯದಿಂದ ಆರಂಭಿಕ, ಕನ್ನಡಿಗ ಮಯಾಂಕ್ ಅಗರವಾಲ್ ಹೊರಬಿದ್ದಿದ್ದಾರೆ.
-
NEWS 🚨- Mayank Agarwal ruled out of first Test due to concussion.
— BCCI (@BCCI) August 2, 2021 " class="align-text-top noRightClick twitterSection" data="
The 30-year-old is stable and will remain under close medical observation.
More details here - https://t.co/6B5ESUusRO #ENGvIND pic.twitter.com/UgOeHt2VQQ
">NEWS 🚨- Mayank Agarwal ruled out of first Test due to concussion.
— BCCI (@BCCI) August 2, 2021
The 30-year-old is stable and will remain under close medical observation.
More details here - https://t.co/6B5ESUusRO #ENGvIND pic.twitter.com/UgOeHt2VQQNEWS 🚨- Mayank Agarwal ruled out of first Test due to concussion.
— BCCI (@BCCI) August 2, 2021
The 30-year-old is stable and will remain under close medical observation.
More details here - https://t.co/6B5ESUusRO #ENGvIND pic.twitter.com/UgOeHt2VQQ
ಮೊದಲ ಪಂದ್ಯಕ್ಕಾಗಿ ಮಯಾಂಕ್ ಅಗರವಾಲ್ ನೆಟ್ಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಮೊಹಮ್ಮದ್ ಸಿರಾಜ್ ಎಸೆದ ಚೆಂಡು ಅವರ ತಲೆಗೆ ಬಿದ್ದ ಕಾರಣ ಗಾಯಕ್ಕೊಳಗಾಗಿದ್ದಾರೆ. ನ್ಯಾಟಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ ನೆಟ್ ಸೆಷನ್ ವೇಳೆ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಮಾಹಿತಿ ಶೇರ್ ಮಾಡಿಕೊಂಡಿದೆ. ವೈದ್ಯಕೀಯ ತಂಡ ಈಗಾಗಲೇ ಅವರನ್ನ ಪರೀಕ್ಷೆಗೊಳಪಡಿಸಿದ್ದು, ಸ್ಕ್ಯಾನ್ಗೊಳಗಾಗುವ ಸಾಧ್ಯತೆ ಇದೆ.
ಗಾಯಗೊಂಡಿರುವ ಶುಬ್ಮನ್ ಗಿಲ್, ಅವೇಶ್ ಖಾನ್ ಹಾಗೂ ವಾಷಿಂಗ್ಟನ್ ಸುಂದರ್ ಈಗಾಗಲೇ ಗಾಯಗೊಂಡು ಟೆಸ್ಟ್ನಿಂದ ಹೊರಬಿದ್ದಿರುವ ಬೆನ್ನಲ್ಲೇ ಮತ್ತೋರ್ವ ಆಟಗಾರ ಗಾಯಗೊಂಡಿರುವುದು ಭಾರತಕ್ಕೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಪೃಥ್ವಿ ಶಾ ಹಾಗೂ ಸೂರ್ಯಕುಮಾರ್ ಯಾದವ್ ಬದಲಿ ಆಟಗಾರರಾಗಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾರೆ.
ಆಗಸ್ಟ್ 4ರಿಂದ ಉಭಯ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ಅರಂಭಗೊಳ್ಳಬೇಕಾಗಿದ್ದು, ಇದಕ್ಕೆ ಎರಡು ದಿನ ಬಾಕಿ ಇದ್ದಾಗಲೇ ಅಗರವಾಲ್ ಹೊರಬಿದ್ದಿದ್ದಾರೆ. ತಂಡದ ಪರ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.