ETV Bharat / sports

ಟಿ-20 ವಿಶ್ವಕಪ್ ಟೂರ್ನಿ ಯುಎಇಗೆ ಸ್ಥಳಾಂತರ.. ಸುಳಿವು ನೀಡಿದ ಜಯ್ ಶಾ - ಐಪಿಎಲ್​ ಸೀಸನ್ 14

ಭಾರತದಲ್ಲಿ ಅರ್ಧಕ್ಕೆ ನಿಂತಿರುವ ಐಪಿಎಲ್​ ಯುಎಇಯಲ್ಲಿ ನಡೆಯುವುದು ಖಚಿತವಾಗಿದೆ. ಆದರೆ, ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಸಹ ಯುಎಇ ನೆಲದಲ್ಲೇ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತು ಜಯ್ ಶಾ ಸುಳಿವು ನೀಡಿದ್ದಾರೆ..

-jay-shah
ಜಯ್ ಶಾ
author img

By

Published : Jun 26, 2021, 8:18 PM IST

ನವದೆಹಲಿ : ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದರೂ ಅದರ ಭೀತಿ ಕಡಿಮೆಯಾಗಿಲ್ಲ. ಹೀಗಾಗಿ, ಭಾರತದಲ್ಲಿ ನಡೆಯಬೇಕಿದ್ದ ಟಿ-20 ವಿಶ್ವಕಪ್ ಟೂರ್ನಿ ಯುಎಇಗೆ ಸ್ಥಳಾಂತರವಾಗುವ ಸಾಧ್ಯತೆ ಇದೆ ಎಂದು ಬಿಸಿಸಿಐನ ಕಾರ್ಯದರ್ಶಿ ಜಯ್​​ ಶಾ ಹೇಳಿದ್ದಾರೆ.

ದೇಶದಲ್ಲಿ ಕೋವಿಡ್ ಪರಿಸ್ಥಿತಿಯಿಂದಾಗಿ, ನಾವು ಪಂದ್ಯಾವಳಿಯನ್ನು ಯುಎಇಗೆ ಸ್ಥಳಾಂತರಿಸಬಹುದು. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಆಟಗಾರರ ಆರೋಗ್ಯ ಮತ್ತು ಸುರಕ್ಷತೆಯು ಮುಖ್ಯವಾದದ್ದು, ನಾವು ಶೀಘ್ರದಲ್ಲೇ ಅಂತಿಮ ನಿರ್ಧಾರ ಪ್ರಕಟಿಸಿಸುತ್ತೇವೆ ಎಂದಿದ್ದಾರೆ.

ಈ ನಡುವೆ ಐಪಿಎಲ್​ ಸೀಸನ್ 14 ಯುಎಇಯುಲ್ಲಿಯೇ ಪೂರ್ಣವಾಗಲಿದೆ. ಸೆಪ್ಟೆಂಬರ್ 19ರಂದು ಐಪಿಎಲ್ ಆರಂಭವಾಗುತ್ತಿದ್ದು, ಫೈನಲ್ ಪಂದ್ಯ ಅಕ್ಟೋಬರ್ 15ರಂದು ನಡೆಯಲಿದೆ. ಈ ಟೂರ್ನಿಯ ಬಳಿಕ ಐಸಿಸಿ ಟೂರ್ನಿ ನಡೆಯುವುದು ಖಚಿತವಾಗಿದೆ.

ಆದರೆ, ಐಪಿಎಲ್​ ಪ್ರಾಂಚೈಸಿಗಳು ಜುಲೈ 6ರ ಬಳಿಕ ಯುಎಇಗೆ ತೆರಳುವ ನಿರ್ಧಾರ ಸದ್ಯದಲ್ಲೇ ಅಂತಿಮಗೊಳ್ಳಲಿದೆ. ಅಲ್ಲದೆ ಕೋವಿಡ್ ನಿಯಾಮಾವಳಿಯ ಕಡೆ ಹೆಚ್ಚು ಗಮನ ಹರಿಸಿವೆ. ಆಗಸ್ಟ್ 28 ರಂದು ಪ್ರಾರಂಭವಾಗಬೇಕಿದ್ದ ಸಿಪಿಎಲ್ ಈಗ ಆಗಸ್ಟ್ 26 ಮತ್ತು ಸೆಪ್ಟೆಂಬರ್ 15ರ ನಡುವೆ ಸೇಂಟ್ ಕಿಟ್ಸ್ ಮತ್ತು ನೆವಿಸ್‌ನಲ್ಲಿ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.