ಕೊಲಂಬೋ: ವಿಶ್ವಕ್ರಿಕೆಟ್ ಕಂಡಿರುವ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರಾಗಿದ್ದ ಶ್ರೀಲಂಕಾದ ಲಸಿತ್ ಮಲಿಂಗಾ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಸುಮಾರು 17 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿಗೆ ಪೂರ್ಣ ವಿರಾಮ ನೀಡಿದ್ದಾರೆ.
-
Hanging up my #T20 shoes and #retiring from all forms of cricket! Thankful to all those who supported me in my journey, and looking forward to sharing my experience with young cricketers in the years to come.https://t.co/JgGWhETRwm #LasithMalinga #Ninety9
— Lasith Malinga (@ninety9sl) September 14, 2021 " class="align-text-top noRightClick twitterSection" data="
">Hanging up my #T20 shoes and #retiring from all forms of cricket! Thankful to all those who supported me in my journey, and looking forward to sharing my experience with young cricketers in the years to come.https://t.co/JgGWhETRwm #LasithMalinga #Ninety9
— Lasith Malinga (@ninety9sl) September 14, 2021Hanging up my #T20 shoes and #retiring from all forms of cricket! Thankful to all those who supported me in my journey, and looking forward to sharing my experience with young cricketers in the years to come.https://t.co/JgGWhETRwm #LasithMalinga #Ninety9
— Lasith Malinga (@ninety9sl) September 14, 2021
2014ರಲ್ಲಿ ಶ್ರೀಲಂಕಾ ತಂಡ ವಿಶ್ವಕಪ್ ಗೆದ್ದ ತಂಡದ ಕ್ಯಾಪ್ಟನ್ ಆಗಿದ್ದ ಲಸಿತ್ ಮಲಿಂಗಾ, ಎಲ್ಲ ಮಾದರಿ ಕ್ರಿಕೆಟ್ನಿಂದ 546 ವಿಕೆಟ್ ಪಡೆದುಕೊಂಡಿದ್ದಾರೆ. 2007ರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಐಸಿಸಿ ಕ್ರಿಕೆಟ್ ವಿಶ್ವಕಪ್ನಲ್ಲಿ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದು, ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದ್ದರು.
38 ವರ್ಷದ ಮಲಿಂಗಾ 2011ರಲ್ಲಿ ಟೆಸ್ಟ್ ಕ್ರಿಕೆಟ್ ಹಾಗೂ 2019ರಲ್ಲಿ ಏಕದಿನ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿದ್ದರು. ಆದರೆ ಸದ್ಯ ಟಿ-20 ಕ್ರಿಕೆಟ್ನಲ್ಲಿ ಮಾತ್ರ ಮುಂದುವರೆದಿದ್ದ ವೇಗದ ಬೌಲರ್ ಇದೀಗ ಅದರಿಂದಲೂ ವಿದಾಯ ಪಡೆದುಕೊಂಡಿದ್ದಾರೆ.
ಯೂಟ್ಯೂಬ್ ಚಾನಲ್ನಲ್ಲಿ ನಿವೃತ್ತಿ ಘೋಷಣೆ:
ಮಲಿಂಗಾ ಹೊಂದಿರುವ ಯೂಟ್ಯೂಬ್ ಚಾನಲ್ ಮೂಲಕ ನಿವೃತ್ತಿ ಘೋಷಣೆ ಮಾಡಿರುವ ಅವರು, 17 ವರ್ಷಗಳಲ್ಲಿ ಗಳಿಸಿರುವ ಅನುಭವ ಇನ್ಮುಂದೆ ಅಗತ್ಯವಿಲ್ಲ. ಏಕೆಂದರೆ ನಾನು ಟಿ-20 ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಳ್ಳಲು ನಿರ್ಧಾರ ಮಾಡಿದ್ದೇನೆ. ಆದರೆ ಕ್ರಿಕೆಟ್ ಚೈತನ್ಯ ಹೆಚ್ಚಿಸಲು ಬೆಳೆಯುತ್ತಿರುವ ಯುವ ಪೀಳಿಗೆಗೆ ಯಾವಾಗಲೂ ಬೆಂಬಲ ನೀಡುತ್ತೇನೆ. ಕ್ರಿಕೆಟ್ ಪ್ರೀತಿಸುವ ಪ್ರತಿಯೊಬ್ಬರೊಂದಿಗೆ ನಾನು ಇರುತ್ತೇನೆ ಎಂದಿದ್ದಾರೆ.
-
JUST IN: Lasith Malinga has announced retirement from all forms of cricket. pic.twitter.com/NYrfgpQPqR
— ICC (@ICC) September 14, 2021 " class="align-text-top noRightClick twitterSection" data="
">JUST IN: Lasith Malinga has announced retirement from all forms of cricket. pic.twitter.com/NYrfgpQPqR
— ICC (@ICC) September 14, 2021JUST IN: Lasith Malinga has announced retirement from all forms of cricket. pic.twitter.com/NYrfgpQPqR
— ICC (@ICC) September 14, 2021
ಮಲಿಂಗಾ ಸಾಧನೆ
30 ಟೆಸ್ಟ್ ಪಂದ್ಯಗಳಿಂದ 101 ವಿಕೆಟ್, 226 ಏಕದಿನ ಪಂದ್ಯಗಳಿಂದ 338 ವಿಕೆಟ್, 84 ಟಿ20 ಪಂದ್ಯಗಳಿಂದ 107 ವಿಕೆಟ್ ಪಡೆದುಕೊಂಡಿರುವ ಇವರು, ಐಪಿಎಲ್ನಲ್ಲೂ ಮಿಂಚು ಹರಿಸಿದ್ದಾರೆ. 2009ರಿಂದ 2019ರವರೆಗಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಿರುವ 122 ಪಂದ್ಯಗಳಿಂದ 170 ವಿಕೆಟ್ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಸುಮಾರು 12 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದ ಮಲಿಂಗಾ ಅನೇಕ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.