ETV Bharat / sports

ಐಪಿಎಲ್ ಪ್ಲೇ ಆಫ್ ಪಂದ್ಯಗಳಿಗೆ ಈ ಎರಡು ಸ್ಥಳಗಳು ಆಯ್ಕೆ, ಅಧಿಕೃತ ಘೋಷಣೆ ಬಾಕಿ - Indian premier league

ಮುಂದಿನ ವಾರ ಐಪಿಎಲ್ ಗವರ್ನರ್​ ಕೌನ್ಸಿಲ್ ಸಭೆ ನಡೆಯಲಿದ್ದು, 15ನೇ ಆವೃತ್ತಿಯ ಪ್ಲೇ ಆಫ್ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ. ಈಗಾಗಲೆ ಬಿಡುಗಡೆಯಾಗಿರುವ ವೇಳಾಪಟ್ಟಿಯ ಪ್ರಕಾರ, 70 ಪಂದ್ಯಗಳ ಲೀಗ್​ ಮೇ 22ಕ್ಕೆ ಅಂತ್ಯವಾಗಲಿದೆ. ಕೊನೆಯ ಪಂದ್ಯ ವಾಂಖೆಡೆ ಸ್ಟೇಡಿಯಂನಲ್ಲಿ ಸನ್​ರೈಸರ್ಸ್ ಹೈದರಾಬಾದ್​ ನಡುವೆ ನಡೆಯಲಿದೆ.

Kolkata and Ahmedabad will host IPL 2022 playoff matches: report
ಐಪಿಎಲ್ ಪ್ಲೇ ಆಫ್ ಸ್ಥಳ
author img

By

Published : Apr 13, 2022, 5:48 PM IST

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್​ ಮತ್ತು ಪ್ಲೇ ಆಫ್ ನಡೆಯುವ ಸ್ಥಳಗಳು ಅಂತಿಮವಾಗಿವೆ. ಕೋಲ್ಕತ್ತಾದ ಈಡನ್ ಗಾರ್ಡನ್​ನಲ್ಲಿ ಎಲಿಮಿನೇಟರ್ ಮತ್ತು ಮೊದಲ ಕ್ವಾಲಿಫೈಯರ್ ಪಂದ್ಯಗಳು ಹಾಗೂ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 2ನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯ ನಡೆಯಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಈಗಾಗಲೇ 15ನೇ ಆವೃತ್ತಿಯ ಐಪಿಎಲ್ ಚಾಲ್ತಿಯಲ್ಲಿದೆ. 22 ಪಂದ್ಯಗಳು ಯಶಸ್ವಿಯಾಗಿ ಮುಗಿದಿವೆ. ಇದೀಗ ವರದಿಗಳ ಪ್ರಕಾರ, ಬಿಸಿಸಿಐ ನಾಕೌಟ್ ಪಂದ್ಯಗಳ ಸ್ಥಳ ಮತ್ತು ವೇಳಾಪಟ್ಟಿಯನ್ನು ಅಂತಿಮಗೊಳಿಸಿದ್ದು, ಕೇವಲ ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ ಎನ್ನಲಾಗಿದೆ.

ಮುಂದಿನ ವಾರ ಐಪಿಎಲ್ ಗವರ್ನರ್​ ಕೌನ್ಸಿಲ್ ಸಭೆ ನಡೆಯಲಿದ್ದು, 15ನೇ ಆವೃತ್ತಿಯ ಪ್ಲೇ ಆಫ್ ಬಗ್ಗೆ ಅಧಿಕೃತ ಮಾಹಿತಿಯನ್ನು ಘೋಷಿಸಲಿದೆ ಎನ್ನಲಾಗಿದೆ. ಈಗಾಗಲೆ ಬಿಡುಗಡೆಯಾಗಿರುವ ವೇಳಾಪಟ್ಟಿಯ ಪ್ರಕಾರ 70 ಪಂದ್ಯಗಳ ಲೀಗ್​ ಮೇ 22ಕ್ಕೆ ಅಂತ್ಯವಾಗಲಿದೆ. ಕೊನೆಯ ಪಂದ್ಯ ವಾಂಖೆಡೆ ಸ್ಟೇಡಿಯಂನಲ್ಲಿ ಸನ್​ರೈಸರ್ಸ್ ಹೈದರಾಬಾದ್​ ನಡುವೆ ನಡೆಯಲಿದೆ.

ಪ್ರಸ್ತುತ ಲೀಗ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಆಡಿರುವ 4 ಪಂದ್ಯಗಳಲ್ಲಿ 3 ಗೆಲುವು, ಒಂದು ಸೋಲಿನೊಂದಿಗೆ 6 ಅಂಕ ಪಡೆದು ಅಗ್ರಸ್ಥಾನ ಪಡೆದುಕೊಂಡಿದೆ. ಕೆಕೆಆರ್ ಮತ್ತು ​ಲಖನೌ ಸೂಪರ್ ಜೈಂಟ್ಸ್ 5 ಪಂದ್ಯಗಳಿಂದ 6 ಮತ್ತು ಗುಜರಾತ್​ ಲಯನ್ಸ್ 4 ಪಂದ್ಯಗಳಿಂದ 6 ಮತ್ತು ಆರ್​ಸಿಬಿ 5 ಪಂದ್ಯಗಳಿಂದ 6 ಅಂಕ ಪಡೆದು ಕ್ರಮವಾಗಿ ಮೊದಲ 5 ಸ್ಥಾನ ಪಡೆದುಕೊಂಡಿವೆ.

ಇದನ್ನೂ ಓದಿ:2018ರಲ್ಲಿ 105 ಕೆಜಿ, 2021ರಲ್ಲಿ 78: U-19 ತಂಡದಿಂದ ಹೊರಬಿದ್ದು ವಿಶ್ವಕಪ್‌, IPL ಸಾಧಕನಾದ ತೀಕ್ಷಣ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.