ಬ್ರಿಸ್ಬೇನ್ : ಬೌಂಡರಿ ಲೈನ್ನಲ್ಲಿ ವಿರಾಟ್ ಕೊಹ್ಲಿ ಅವರ ಅದ್ಭುತ ಕ್ಯಾಚ್ ಮತ್ತು ಒಂದು ರನೌಟ್ನಿಂದಾಗಿ ಭಾರತವು ಐಸಿಸಿ T20 ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರು ರನ್‌ಗಳ ಭರ್ಜರಿ ಗೆಲುವನ್ನು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ 187-7 ವಿಕೆಟ್ ಕಳೆದುಕೊಂಡಿತು. ಬಳಿಕ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಬ್ಯಾಟಿಂಗ್ಗೆ ಕೊನೆಯ ಓವರ್ನಲ್ಲಿ 11ರನ್ ಗಳ ಅವಶ್ಯಕತೆ ಇತ್ತು. ಈ ವೇಳೆ ಆಸಿಸ್ ಬ್ಯಾಟರ್ ಪ್ಯಾಟ್ ಕಮಿನ್ಸ್ ಮೊದಲ ಎರಡು ಎಸೆತಗಳಲ್ಲಿ 4 ರನ್ ಗಳಿಸಿದರು. ಬಳಿಕ ದೊಡ್ಡ ಹೊಡೆತಕ್ಕೆ ಮುಂದಾದ ಕಮಿನ್ಸ್ ಬೌಂಡರಿಯಲ್ಲಿ ಕೊಹ್ಲಿಗೆ ಕ್ಯಾಚಿತ್ತು ಪೆವಿಲಿಯನ್ಗೆ ಮರಳಿದರು. ಕೊಹ್ಲಿಯ ಅದ್ಭುತ ಕ್ಯಾಚ್ ಪಂದ್ಯದ ಗತಿಯನ್ನು ಬದಲಿಸಿತು. ಬಳಿಕ ಆಸ್ಟನ್ ಅಗರ್ ರನ್ ಔಟ್ ಆಗುವ ಮೂಲಕ ಪಂದ್ಯ ಭಾರತದ ಕಡೆ ವಾಲಿತು. ಶಮಿಯವರ ಮಾರಕ ಬೌಲಿಂಗ್ ದಾಳಿಗೆ ಆಸ್ಟ್ರೇಲಿಯನ್ ಬ್ಯಾಟರ್ ಗಳು ಪೆವಿಲಿಯನ್ ಪರೇಡ್ ನಡೆಸಿದರು.
-
FREAKIN HELL VIRAT KOHLI YOU BEAST pic.twitter.com/rId18naFJm
— zayn (@ZaynMahmood5) October 17, 2022 " class="align-text-top noRightClick twitterSection" data="
">FREAKIN HELL VIRAT KOHLI YOU BEAST pic.twitter.com/rId18naFJm
— zayn (@ZaynMahmood5) October 17, 2022FREAKIN HELL VIRAT KOHLI YOU BEAST pic.twitter.com/rId18naFJm
— zayn (@ZaynMahmood5) October 17, 2022
ಕೆಎಲ್ ರಾಹುಲ್ ಅವರ ಅದ್ಭುತ ಬ್ಯಾಟಿಂಗ್ ಮತ್ತು ಮೊಹಮ್ಮದ್ ಶಮಿ ಅವರ ಮಾರಕ ಬೌಲಿಂಗ್ ದಾಳಿಗೆ ಭಾರತವು ಆಸ್ಟ್ರೇಲಿಯಾವನ್ನು 180ರನ್ಗೆ ಕಟ್ಟಿಹಾಕಿತು. ಈ ಮೂಲಕ ಭಾರತ ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ. ಜೊತೆಗೆ ಕೊಹ್ಲಿಯವರ ಕ್ಯಾಚ್ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ : ಅಭ್ಯಾಸ ಪಂದ್ಯ: ಗೆಲುವಿನ ದಡದಲ್ಲಿ ಎಡವಿದ ಆಸ್ಟ್ರೇಲಿಯಾ.. ಭಾರತಕ್ಕೆ 6 ರನ್‌ಗಳ ರೋಚಕ ಗೆಲುವು