ದುಬೈ : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಪಾಕಿಸ್ತಾನ ವಿರುದ್ಧ ಅರ್ಧಶತಕ ಬಾರಿಸಿದರೂ ಐಸಿಸಿ ಪುರುಷರ ಟಿ20 ರ್‍ಯಾಂಕಿಂಗ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಿಂದ, ಐದನೇ ಸ್ಥಾನಕ್ಕೆ ಕುಸಿದಿದ್ದಾರೆ. ಟೀಂ ಇಂಡಿಯಾದ ಇನ್ನೊಬ್ಬ ಆಟಗಾರ ಕೆ ಎಲ್ ರಾಹುಲ್ ಕೂಡ 6ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.
-
⚡ Big gains for Aiden Markram, JJ Smit
— ICC (@ICC) October 27, 2021 " class="align-text-top noRightClick twitterSection" data="
🔥 Mohammad Rizwan rises to No.4 among batters
All you need to know about the latest rankings 👉 https://t.co/1sQBCW4KB0 pic.twitter.com/WfPp8XBb5I
">⚡ Big gains for Aiden Markram, JJ Smit
— ICC (@ICC) October 27, 2021
🔥 Mohammad Rizwan rises to No.4 among batters
All you need to know about the latest rankings 👉 https://t.co/1sQBCW4KB0 pic.twitter.com/WfPp8XBb5I⚡ Big gains for Aiden Markram, JJ Smit
— ICC (@ICC) October 27, 2021
🔥 Mohammad Rizwan rises to No.4 among batters
All you need to know about the latest rankings 👉 https://t.co/1sQBCW4KB0 pic.twitter.com/WfPp8XBb5I
ವಿರಾಟ್ ಕೊಹ್ಲಿ 725 ರೇಟಿಂಗ್ ಪಾಯಿಂಟ್ನಿಂದ 5ನೇ ಸ್ಥಾನಕ್ಕೆ ಕುಸಿದರೆ, ರಾಹುಲ್ 684 ಪಾಯಿಂಟ್ಗಳಿಂದ 8ನೇ ಸ್ಥಾನಕ್ಕೆ ಕುಸಿದಿದ್ದಾರೆ. ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಭಾರತ ಮತ್ತು ನ್ಯೂಜಿಲ್ಯಾಂಡ್ ಅದ್ಭುತ ಆಟವಾಡಿದ್ದಾರೆ. ಅವರು ಏಳನೇ ಸ್ಥಾನದಿಂದ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕದಲ್ಲಿ ಮೂರು ಸ್ಥಾನಕ್ಕೆ ಏರಿದ್ದಾರೆ.
ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಕ್ರಮವಾಗಿ 40 ಮತ್ತು 51 ರನ್ ಗಳಿಸಿದ ದಕ್ಷಿಣ ಆಫ್ರಿಕಾ ಬ್ಯಾಟರ್ ಏಡೆನ್ ಮಾರ್ಕ್ರಾಮ್ ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವನ್ನು ಪಡೆದಿದ್ದಾರೆ. ಅವರು ಮೂರು ಸ್ಥಾನ ಏರಿಕೆ ಕಂಡಿದ್ದಾರೆ.
11ನೇ ಶ್ರೇಯಾಂಕದಿಂದ 8ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಇಂಗ್ಲೆಂಡ್‌ನ ಡೇವಿಡ್ ಮಲಾನ್ (831) ಮತ್ತು ಪಾಕಿಸ್ತಾನದ ನಾಯಕ ಬಾಬರ್ ಅಜಮ್ (820) ಪಾಯಿಂಟ್ಗಳಿಂದ ಮೊದಲು ಮತ್ತು 2ನೇ ಸ್ಥಾನದಲ್ಲಿದ್ದಾರೆ.
ಬೌಲರ್ಗಳ ಪೈಕಿ ಬಾಂಗ್ಲಾ ಪರ ಉತ್ತಮ ದಾಳಿ ಮಾಡುತ್ತಿರುವ ಮಹೇದಿ ಹಸನ್ ವೃತ್ತಿಜೀವನದ ಅತ್ಯುತ್ತಮ 12ನೇ ಸ್ಥಾನಕ್ಕೆ ತಲುಪಿದ್ದಾರೆ. ಪಾಕ್ ಬೌಲರ್ ಶಾಹೀನ್ ಅಫ್ರಿದಿ 23ನೇ ಸ್ಥಾನದಿಂದ 11ನೇ ಶ್ರೇಯಾಂಕಕ್ಕೆ ಬಡ್ತಿ ಪಡಿದಿದ್ದಾರೆ. ಪಾಕ್ನ ಇನ್ನೊಬ್ಬ ಬೌಲರ್ ಹ್ಯಾರಿಸ್ ರೌಫ್ 34ನೇ ಸ್ಥಾನಕ್ಕೆ ಏರಿದ್ದಾರೆ. ಆಲ್ರೌಂಡರ್ ವಿಭಾಗದಲ್ಲಿ ಬಾಂಗ್ಲಾದೇಶದ ಸ್ಟಾರ್ ಆಟಗಾರ ಶಕೀಬ್ ಅಲ್ ಹಸನ್ ಅಗ್ರ ಸ್ಥಾನವನ್ನು ಮರಳಿ ಪಡೆದಿದ್ದಾರೆ.