ಮುಂಬೈ: ಸೋಮವಾರ ನ್ಯೂಜಿಲ್ಯಾಂಡ್ ತಂಡದ ವಿರುದ್ಧ 2ನೇ ಟೆಸ್ಟ್ ಪಂದ್ಯವನ್ನು 372 ರನ್ಗಳಿಂದ ಗೆದ್ದನಂತರ ಭಾರತ ಕ್ರಿಕೆಟ್ ತಂಡ ವಾಂಖೆಡೆ ಸ್ಟೇಡಿಯಂನ ಮೈದಾನ ಸಿಬ್ಬಂದಿಗಳಿಗೆ 35 ಸಾವಿರ ರೂಗಳನ್ನು ನೀಡಿದೆ. ಪಂದ್ಯ ಮೂರೇ ದಿನಗಳಲ್ಲಿ ಕೊನೆಗೊಳ್ಳದಂತೆ ಪಿಚ್ ನಿರ್ಮಿಸಿದ್ದಕ್ಕೆ ಮೆಚ್ಚುಗೆಯ ಸಂಕೇತವಾಗಿ ವಿರಾಟ್ - ದ್ರಾವಿಡ್ ಬಳಗ ಸಿಬ್ಬಂದಿಗೆ 35000 ರೂಪಾಯಿಗಳನ್ನು ನೀಡಿದೆ.
ಇದಕ್ಕೂ ಮೊದಲು ಕಾನ್ಪುರದ ಮೊದಲ ಟೆಸ್ಟ್ ಪಂದ್ಯವನ್ನು 5 ದಿನಗಳ ಕಾಲ ನಡೆಯುವಂತಹ ಸ್ಪರ್ಧಾತ್ಮಕ ಪಿಚ್ ಸಿದ್ಧಪಡಿಸಿದ್ದಕ್ಕಾಗಿ ಗ್ರೀನ್ ಪಾರ್ಕ್ ಮೈದಾನ ಸಿಬ್ಬಂದಿಗೆ ಭಾರತದ ಕೋಚ್ ರಾಹುಲ್ ದ್ರಾವಿಡ್ ವೈಯಕ್ತಿಕವಾಗಿ 35 ಸಾವಿರ ರೂ ನೀಡಿದ್ದರು.
ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ 325 ರನ್ಗಳಿಸಿದರೆ, ಇದಕ್ಕುತ್ತರವಾಗಿ ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್ನಲ್ಲಿ 62ಕ್ಕೆ ಆಲೌಟ್ ಆಗಿತ್ತು. 2ನೇ ಇನ್ನಿಂಗ್ಸ್ನಲ್ಲಿ ಭಾರತ 276 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡು ಕಿವೀಸ್ಗೆ ಗೆಲ್ಲಲು 540 ರನ್ಗಳ ಬೃಹತ್ ಗುರಿ ನೀಡಿತ್ತು. ಆದರೆ ಲಾಥಮ್ ಬಳಗ ಕೇವಲ 167ಕ್ಕೆ ಆಲೌಟ್ ಆಗುವ ಮೂಲಕ 332ರನ್ಗಳ ಹೀನಾಯ ಸೋಲು ಕಂಡಿತ್ತು.
ಇದನ್ನೂ ಓದಿ:5 ದಿನ ಕ್ರಿಕೆಟ್ ರಸದೌತಣ ನೀಡಿದ ಪಿಚ್ ತಯಾರಿಸಿದ್ದಕ್ಕೆ ಸಿಬ್ಬಂದಿಗೆ ₹35,000 ನೀಡಿದ ರಾ'ವಾಲ್' ದ್ರಾವಿಡ್!