ಚಿತ್ತಗಾಂಗ್(ಬಾಂಗ್ಲಾದೇಶ): ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಯಾವಾಗ ಆಕ್ರಮಣಕಾರಿಯಾಗಬೇಕು ಮತ್ತು ಯಾವಾಗ ಆಟವನ್ನು ನಿಯಂತ್ರಿಸಬೇಕೆಂಬುದು ಚೆನ್ನಾಗಿ ತಿಳಿದಿದೆ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದರು. ಬಿಸಿಸಿಐ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.
ವಿರಾಟ್ ಆಟ ನೋಡಲು ಅದ್ಭುತವಾಗಿದೆ. ಅವರು ಉತ್ತಮ ಇನ್ನಿಂಗ್ಸ್ ಕಟ್ಟಲು ಸಾಧ್ಯವಾದರೆ, ಅದೇ ನಮಗೆ ಉತ್ತಮ ಸೂಚನೆ. ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ನಂಬಲಾಗದ ಸಾಧನೆ ಹೊಂದಿದ್ದಾರೆ. ಅವರ ದಾಖಲೆಗಳೇ ಮಾತನಾಡುತ್ತವೆ. ಅವರು ಆಡಿದ ಪಂದ್ಯಗಳ ಸಂಖ್ಯೆಯೂ ಅದ್ಭುತವಾಗಿದೆ ಎಂದರು.
ಕೊಹ್ಲಿ ತಮ್ಮ ಹಿಂದಿನ ಲಯಕ್ಕೆ ಹಿಂತಿರುಗಿದ್ದಾರೆಂದು ನಾನು ಭಾವಿಸುತ್ತೇನೆ. ಯಾಕೆಂದರೆ, ನಾನು ನೋಡಿದ ಹಾಗೆ ಅವರು ಕಠಿಣ ಪರಿಶ್ರಮಿ. ಕೊಹ್ಲಿ ಪರಿಶ್ರಮ ಬಹಳಷ್ಟು ಯುವ ಆಟಗಾರರಿಗೂ ಉತ್ತಮ ಪಾಠ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಈಗಾಗಲೇ ನಮ್ಮ ತಂಡ ಹೆಚ್ಚು ಆಕ್ರಮಣಕಾರಿಯಾಗಿದೆ. ಇದನ್ನು ನಾವು ಹೆಚ್ಚಿನ ಫಲಿತಾಂಶಗಳಲ್ಲೂ ನೋಡಿದ್ದೇವೆ. ಇದೀಗ ತಂಡವು ಫಲಿತಾಂಶಗಳಿಗಾಗಿಯೇ ಹೆಚ್ಚು ಆಡುತ್ತಿವೆ. ವಿಶೇಷವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್‌ಗಳನ್ನು ಗಮನದಲ್ಲಿರಿಸಿಕೊಂಡು ಆಟವಾಡುತ್ತಿದ್ದೇವೆ ಎಂದು ರಾಹುಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಾತಿನ ಚಕಮಕಿ ಬೆನ್ನಲ್ಲೇ ಲಿಟ್ಟನ್ ದಾಸ್ ವಿಕೆಟ್ ಕಿತ್ತು ಅಣುಕಿಸಿದ ಸಿರಾಜ್ - ಕೊಹ್ಲಿ: VIDEO