ETV Bharat / sports

ಬಿಸಿಸಿಐ ನೂತನ ಅಧ್ಯಕ್ಷ ರೋಜರ್​ ಬಿನ್ನಿ: ಇವರ ಅಂತಾಷ್ಟ್ರೀಯ ಕಿಕೆಟ್​ ಸಾಧನೆ ಇಲ್ಲಿದೆ - ಈಟಿವಿ ಭಾರತ ಕನ್ನಡ

ರೋಜರ್ ಬಿನ್ನಿ ಮಂಗಳವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) 36 ನೇ ಅಧ್ಯಕ್ಷರಾದರು.

know-who-is-the-new-bcci-president-roger-binny
ಬಿಸಿಐನ ನೂತನ ಅಧ್ಯಕ್ಷ ರೋಜರ್​ ಬಿನ್ನಿ
author img

By

Published : Oct 18, 2022, 9:29 PM IST

ನವದೆಹಲಿ: ಭಾರತ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ರೋಜರ್ ಬಿನ್ನಿ ಅವರು ಮಂಗಳವಾರ ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) 36 ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಸ್ಥಾನವನ್ನು ತುಂಬಲಿದ್ದಾರೆ.

ರೋಜರ್ ಬಿನ್ನಿ ಬಗ್ಗೆ ಒಂದಿಷ್ಟು: ರೋಜರ್ ಬಿನ್ನಿ ಭಾರತದ ಮೊದಲ ಆಂಗ್ಲೋ-ಇಂಡಿಯನ್ ಕ್ರಿಕೆಟಿಗ. ಇವರು ಮೂಲತಃ ಸ್ಕಾಟ್ಲೆಂಡ್‌ನವರು, ನಂತರ ಅವರ ಕುಟುಂಬ ಭಾರತದಲ್ಲಿ ನೆಲೆಸಿತು.

1983 ರ ವಿಶ್ವಕಪ್‌ನಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಆಡುವಾಗ ಬಿನ್ನಿ ಸ್ಮರಣೀಯ ಪ್ರದರ್ಶನ ನೀಡಿದರು. ರೋಜರ್ ಬಿನ್ನಿ 1983 ರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಅವರು ಟೂರ್ನಿಯಲ್ಲಿ ಎಂಟು ಪಂದ್ಯಗಳಲ್ಲಿ ಒಟ್ಟು 18 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಟೂರ್ನಾಮೆಂಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 29ಕ್ಕೆ ನಾಲ್ಕು ವಿಕೆಟ್‌ಗಳು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದು ಅವರ ಏಕದಿನ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವೂ ಆಗಿದೆ.

BCCI President Roger Binny
ಬಿಸಿಐನ ನೂತನ ಅಧ್ಯಕ್ಷ ರೋಜರ್​ ಬಿನ್ನಿ

2000ನೇ ಇಸವಿಯಲ್ಲಿ ಭಾರತದ ಅಂಡರ್ 19 ಕೋಚ್​ ಆಗಿ ನೇಮಕರಾದರು. ಆಗ ಅಂಡರ್-19 ತಂಡದ ನಾಯಕರಾಗಿ ಮೊಹಮ್ಮದ್ ಕೈಫ್ ಇದ್ದರು. ಆ ತಂಡದಲ್ಲಿ ಯುವರಾಜ್ ಸಿಂಗ್, ವೇಣುಗೋಪಾಲ್ ರಾವ್ ಕೂಡ ಇದ್ದರು. ರೋಜರ್ ಬಿನ್ನಿ ಕೋಚ್​ ಆಗಿದ್ದ ವೇಳೆಯೇ 2000ದಲ್ಲಿ ಭಾರತ್ ಅಂಡರ್ 19 ತಂಡ ವಿಶ್ವಕಪ್ ಜಯಿಸಿತು.

1979 ಬೆಂಗಳೂರಿನಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್​ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಒಂದು ವರ್ಷದ ನಂತರ 1980 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್‌ನ ಚೊಚ್ಚಲ ಪಂದ್ಯ ಆಡಿದರು. 1987ರ ವರೆಗೆ ಅಂತರಾಷ್ಟ್ರೀಯ ಕಿಕೆಟ್​ನಲ್ಲಿ ಭಾರತ ಪ್ರತಿನಿಧಿಸಿದರು. ರೋಜರ್ ಬಿನ್ನಿ ಒಟ್ಟು 27 ಟೆಸ್ಟ್ ಮತ್ತು 72 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಬೌಲಿಂಗ್​ನಲ್ಲಿ ಟೆಸ್ಟ್​ ಪಂದ್ಯದಲ್ಲಿ 47 ವಿಕೆಟ್​ ಮತ್ತು 77 ವಿಕೆಟ್ ಏಕದಿನದಲ್ಲಿ ಪಡೆದಿದ್ದಾರೆ. 27 ಟೆಸ್ಟ್​ ಪಂದ್ಯದಲ್ಲಿ 830 ಮತ್ತು 77 ಏಕದಿನ ಪಂದ್ಯದಲ್ಲಿ 629 ರನ್ ಗಳಿಸಿದ್ದಾರೆ.

ರೋಜರ್ ಬಿನ್ನಿ ಅವರ ಮಗ ಸ್ಟುವರ್ಟ್ ಕೂಡ ಭಾರತ ಅಂತರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದು, 2014ರಲ್ಲಿ ಬಾಂಗ್ಲಾದೇಶದ ವಿರುದ್ಧ ಕೇವಲ ನಾಲ್ಕು ರನ್‌ಗಳಿಗೆ ಆರು ವಿಕೆಟ್‌ ಪಡೆದು ಅವಿಸ್ಮರಣೀಯ ಸ್ಪೆಲ್​ ಮಾಡಿದ್ದರು. ಟೆಸ್ಟ್​ನಲ್ಲಿ ಸ್ಟುವರ್ಟ್ 21.56 ಸರಾಸರಿಯಲ್ಲಿ 194 ರನ್ ಗಳಿಸಿ ಮೂರು ವಿಕೆಟ್ ಪಡೆದಿದ್ದರು. ಅದೇ ಸಮಯದಲ್ಲಿ, 14 ಏಕದಿನಗಳಲ್ಲಿ 28.75 ರ ಸರಾಸರಿಯಲ್ಲಿ 230 ರನ್ ಮತ್ತು 20 ವಿಕೆಟ್​ಗಳನ್ನು ಪಡೆದಿದ್ದರು. ಸ್ಟುವರ್ಟ್ ಮೂರು ಟಿ 20 ಗಳಲ್ಲಿ 120.69 ಸರಾಸರಿಯಲ್ಲಿ 35 ರನ್ ಮತ್ತು ಒಂದು ವಿಕೆಟ್ ಹೊಂದಿದ್ದರು. ಸ್ಟುವರ್ಟ್ ಬಿನ್ನಿ ಅವರ ಪತ್ನಿ ಮಾಯಾಂತಿ ಲ್ಯಾಂಗರ್ ಖಾಸಗೀ ಚಾನೆಲ್​ನಲ್ಲಿ ಕ್ರೀಡಾ ನಿರೂಪಕಿಯಾಗಿದ್ದಾರೆ.

ಇದನ್ನೂ ಓದಿ : ಕನ್ನಡಿಗ ರೋಜರ್​ ಬಿನ್ನಿ ಭಾರತ ಕ್ರಿಕೆಟ್​ಗೆ ಬಾಸ್​.. ಬಿಸಿಸಿಐ 36 ನೇ ಅಧ್ಯಕ್ಷರಾಗಿ ಆಯ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.