ವಿಶ್ವಕಪ್ಗೆ ಇನ್ನು ಕೆಲವೇ ಎರಡು ತಿಂಗಳು ಮಾತ್ರ ಬಾಕಿ ಇದೆ. ಈ ವೇಳೆ ಭಾರತಕ್ಕೆ ಸಿಹಿ ಸುದ್ದಿ ಸಿಕ್ಕಿದ್ದು ಮಧ್ಯಮ ಕ್ರಮಾಂಕದ ಬ್ಯಾಟರ್ ಕಮ್ ವಿಕೆಟ್ ಕೀಪರ್ ಕನ್ನಡಿಗ ಕೆ. ಎಲ್. ರಾಹುಲ್ ಮೈದಾನಕ್ಕಿಳಿದು ಅಭ್ಯಾಸ ಮಾಡುವಷ್ಟು ಫಿಟ್ ಆಗಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ನೆಟ್ಸ್ನಲ್ಲಿ ಬ್ಯಾಟಿಂಗ್ ಮತ್ತು ಕೀಪಿಂಗ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ತಂಡಕ್ಕೆ ಕಮ್ ಬ್ಯಾಕ್ ಯಾವಾಗ?: ಐಪಿಎಲ್ ವೇಳೆ ಗಾಯಕ್ಕೆ ತುತ್ತಾದ ಕೆ ಎಲ್ ರಾಹುಲ್ ಇಂಗ್ಲೆಂಡ್ನಲ್ಲಿ ಶಸ್ತ್ರಚಿಕಿತ್ಸೆ ಒಳಗಾಗಿ ನಂತರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿಗೆ ಒಳಗಾಗಿದ್ದರು. ಕೆ ಎಲ್ ರಾಹುಲ್ ಮತ್ತು ಐಪಿಎಲ್ನಲ್ಲಿ ಗಾಯಕ್ಕೆ ತುತ್ತಾದ ಶ್ರೇಯಸ್ ಅಯ್ಯರ್ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಮ್ಬ್ಯಾಕ್ ಮಾಡುತ್ತಾರೆ ಎಂದು ನಂಬಲಾಗಿತ್ತು. ಆದರೆ ಐರ್ಲೆಂಡ್ ವಿರುದ್ಧದ ಸರಣಿಗೆ ಜಸ್ಪ್ರಿತ್ ಬುಮ್ರಾ ಅವರ ನಾಯಕತ್ವದಲ್ಲಿ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಹೀಗಾಗಿ ಕೆ ಎಲ್ ರಾಹುಲ್ ಅವರ ಕಮ್ಬ್ಯಾಕ್ ಯಾವಾಗ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.
-
KL Rahul has started wicketkeeping practice. pic.twitter.com/2iGefgeqc7
— Mufaddal Vohra (@mufaddal_vohra) August 2, 2023 " class="align-text-top noRightClick twitterSection" data="
">KL Rahul has started wicketkeeping practice. pic.twitter.com/2iGefgeqc7
— Mufaddal Vohra (@mufaddal_vohra) August 2, 2023KL Rahul has started wicketkeeping practice. pic.twitter.com/2iGefgeqc7
— Mufaddal Vohra (@mufaddal_vohra) August 2, 2023
ಕೀಪರ್ ಆಗಿ ಮುಂದು ವರೆಯುತ್ತಾರಾ ಕಿಶನ್: ಇಶಾನ್ ಕಿಶನ್ ವೆಸ್ಟ್ ಇಂಡೀಸ್ ಸರಣಿಯಲ್ಲಿ ಸತತ ನಾಲ್ಕು ಅರ್ಧಶತಕದ ಮೂಲಕ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಅಲ್ಲದೇ ಏಕದಿನ ಕ್ರಿಕೆಟ್ನಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ನ್ನು ಸಹ ಕಿಶನ್ ಹೊಂದಿದ್ದಾರೆ. ಹೀಗಾಗಿ ಮುಂಬರುವ ಏಷ್ಯಾಕಪ್ ಮತ್ತು ವಿಶ್ವಕಪ್ನಲ್ಲಿ ವಿಕೆಟ್ ಕೀಪರ್ ಆಗಿ ಕಿಶನ್ ಸ್ಥಾನ ಪಡೆಯುವುದು ಹೆಚ್ಚು ಕಮ್ಮಿ ಖಚಿತ ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗಿರುವಾಗ ಎರಡನೇ ಕೀಪರ್ ಆಗಿ ಕೆ. ಎಲ್ ರಾಹುಲ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ.
ಸಂಪೂರ್ಣ ಫಿಟ್ನೆಸ್ಗೆ ಬಿಸಿಸಿಐ ಅವಕಾಶ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗಾಯಗೊಂಡ ಆಟಗಾರರಿಗೆ ಕಮ್ಬ್ಯಾಕ್ ಮಾಡಲು ಸಂಪೂರ್ಣ ಸಮಯವನ್ನು ನೀಡುತ್ತಿದೆ. ಭಾರತ ತಂಡ ಸತತ ಗಾಯದ ಕಾರಣ ಸಮಸ್ಯೆ ಎದುರಿಸಿದ ಕಾರಣ ತುರ್ತಾಗಿ ತಂಡಕ್ಕೆ ಆಟಗಾರರನ್ನು ಸೇರಿಸುತ್ತಿಲ್ಲ. ಸಂಪೂರ್ಣ ಫಿಟ್ ಆಗುವವರೆಗೂ ಕಾಯುತ್ತಿದೆ. ಜಸ್ಪ್ರಿತ್ ಬುಮ್ರಾ ಅವರು ಸಂಪೂರ್ಣ ಫಿಟ್ ಆಗಿ ನೆಟ್ಸ್ನಲ್ಲಿ ಸತತ 10 ಓವರ್ಗೂ ಹೆಚ್ಚು ಬೌಲ್ನ್ನು ಸಂಪೂರ್ಣ ಕ್ಷಮತೆಯಿಂದ ಮಾಡಲು ಸಾಧ್ಯ ಆಗುವವರೆಗೆ ಕಾದಿದ್ದಾರೆ. ನಂತರ ಅವರನ್ನು ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ನಾಯಕರನ್ನಾಗಿ ಮಾಡಿ ವರ್ಷದ ನಂತರ ತಂಡಕ್ಕೆ ಸೇರಿಸಿಕೊಂಡಿದೆ.
ಇದನ್ನೂ ಓದಿ: Hardik Pandya: ವಿರಾಟ್ ಕೊಹ್ಲಿ ನೀಡಿದ ಸಲಹೆ ನನಗೆ ತುಂಬಾ ಸಹಕಾರಿ ಆಯಿತು: ಹಾರ್ದಿಕ್ ಪಾಂಡ್ಯ