ಅಹ್ಮದಾಬಾದ್ : ಕೋವಿಡ್-19 ಸೋಂಕಿಗೆ ಒಳಗಾಗಿ ಕೆಲವು ಆಟಗಾರರು ವಿಂಡೀಸ್ ಸರಣಿಯಿಂದ ಹೊರಗುಳಿದಿದ್ದಾರೆ. ಹಾಗಾಗಿ, ಆಯ್ಕೆ ಸಮಿತಿ ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೆ ಭಾರತ ತಂಡ ಆರಂಭಿಕರಾಗಿ ಬ್ಯಾಟರ್ ಇಶಾನ್ ಕಿಶನ್ ಮತ್ತು ಸ್ಫೋಟಕ ಬ್ಯಾಟರ್ ಶಾರುಖ್ ಖಾನ್ ಅವರನ್ನು ಸೇರ್ಪಡೆಗೊಳಿಸಿದೆ.
ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಈಗಾಗಲೇ ಇಶಾನ್ ಕಿಶನ್ ಅವರು ತಮ್ಮ ಜೊತೆಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂದು ಖಚಿತಪಡಿಸಿದ್ದರು.
ಇದೀಗ ಬಿಸಿಸಿಐ ಆಯ್ಕೆ ಸಮಿತಿ ಇಬ್ಬರು ಯುವ ಆಟಗಾರರು ಭಾರತ ತಂಡಕ್ಕೆ ಆಯ್ಕೆ ಮಾಡಿದ್ದು, ಮೊದಲ ಪಂದ್ಯದ ಆಯ್ಕೆಗೆ ಲಭ್ಯರಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯ ಮೂಲಕ ತಿಳಿಸಲಿದ್ದಾರೆ.
"ಪ್ರಸ್ತುತ ತಂಡದಲ್ಲಿರುವ ಆಟಗಾರರಲ್ಲಿ ಆರಂಭಿಕ ಸ್ಥಾನಕ್ಕೆ ಇಶಾನ್ ಕಿಶನ್ ನಮ್ಮ ಮುಂದಿರುವ ಏಕೈಕ ಆಯ್ಕೆಯಾಗಿದೆ. ಅವರು ನನ್ನ ಜೊತೆ ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸುತ್ತಾರೆ. ಮಯಾಂಕ್ ಅಗರ್ವಾಲ್ ತಂಡಕ್ಕೆ ಸೇರ್ಪಡೆಯಾಗಿದ್ದರೂ, ಅವರು ಇನ್ನೂ ಐಸೊಲೇಷನ್‌ನಲ್ಲಿದ್ದಾರೆ.
ಅವರು ತಡವಾಗಿ ತಂಡ ಸೇರಿದ್ದರಿಂದ ನಿಯಮಗಳ ಪ್ರಕಾರ 3 ದಿನಗಳ ಕ್ವಾರಂಟೈನ್ನಲ್ಲಿದ್ದಾರೆ. ಅವರು ಇನ್ನೂ ಕ್ವಾರಂಟೈನ್ ಮುಗಿಸಿಲ್ಲ. ಹಾಗಾಗಿ, ಇಂದು ನಡೆಯುವ ಅಭ್ಯಾಸದಲ್ಲಿ ಗಾಯಗೊಳ್ಳದಿದ್ದರೆ, ಇಶಾನ್ ಕಿಶನ್ ಖಂಡಿತ ಇನ್ನಿಂಗ್ಸ್ ಆರಂಭಿಸಲಿದ್ದಾರೆ" ಎಂದು ರೋಹಿತ್ ಹೇಳಿದ್ದಾರೆ.
23 ವರ್ಷದ ಇಶಾನ್ ಕಿಶನ್ ಭಾರತದ ಪರ ಈಗಾಗಲೇ 2 ಏಕದಿನ ಪಂದ್ಯಗಳನ್ನಾಡಿದ್ದಾರೆ. ಅವುಗಳಲ್ಲಿ ಅವರು 59 ರನ್ ಗರಿಷ್ಠ ಸೇರಿದಂತೆ 60 ರನ್ಗಳಿಸಿದ್ದಾರೆ. ಅಲ್ಲದೆ ಆತ ರಾಷ್ಟ್ರೀಯ ತಂಡದ ಪರ 5 ಟಿ20 ಪಂದ್ಯಗಳನ್ನಾಡಿದ್ದು, 113 ರನ್ಗಳಿಸಿದ್ದಾರೆ.
ಇನ್ನು 26 ವರ್ಷದ ತಮಿಳುನಾಡಿನ ಶಾರುಖ್, ಫಿನಿಷರ್ ಆಗಿ ಗುರುತಿಸಿಕೊಂಡಿದ್ದು, ಬಲಗೈ ಬ್ಯಾಟರ್ ಆಗಿದ್ದಾರೆ. ಅವರು 33 ಲಿಸ್ಟ್ ಪಂದ್ಯಗಳಿಂದ 737 ರನ್ಗಳಿಸಿದ್ದಾರೆ.
ಇದನ್ನು ಓದಿ:ನಿವೃತ್ತಿ ಘೋಷಿಸಿ ಹತಾಶನಾಗಿದ್ದ ನನಗೆ ಮತ್ತೆ ಕ್ರಿಕೆಟ್ಗೆ ಮರಳಲು ಸಿಎಸ್ಕೆ-ಧೋನಿ ಕಾರಣ : ಅಂಬಾಟಿ ರಾಯುಡು