ಬೆಂಗಳೂರು: ಭಾರತೀಯ ಬ್ಯಾಟರ್ ಕರುಣ್ ನಾಯರ್ ಎರಡು ದಶಕಗಳ ಕಾಲ ರಾಜ್ಯವನ್ನು ಪ್ರತಿನಿಧಿಸಿದ ನಂತರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ದಿಂದ ಬೇರ್ಪಟ್ಟಿದ್ದಾರೆ. ಬಲಗೈ ಬ್ಯಾಟರ್ ಮುಂಬರುವ ದೇಶೀಯ ಋತುವಿನಲ್ಲಿ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ವಿಸಿಎ) ನೊಂದಿಗೆ ಹೊಸ ಇನ್ನಿಂಗ್ಸ್ ಪ್ರಾರಂಭಿಸುತ್ತಾರೆ, ಅವರು ಭಾರತೀಯ ಡ್ರೆಸ್ಸಿಂಗ್ ಕೋಣೆಗೆ ಹಿಂದಿರುಗುವ ಮಾರ್ಗವನ್ನು ಹುಡುಕುತ್ತಿದ್ದಾರೆ.
-
Karun Nair leaves Karnataka and he is all set to play for Vidharbha in the upcoming Domestic season of India.#Vidharbha #Domesticcricket #Karnataka #KarunNair #Cricket #Wolf777news pic.twitter.com/NCisPLYXBl
— Wolf777News (@Wolf777news) August 27, 2023 " class="align-text-top noRightClick twitterSection" data="
">Karun Nair leaves Karnataka and he is all set to play for Vidharbha in the upcoming Domestic season of India.#Vidharbha #Domesticcricket #Karnataka #KarunNair #Cricket #Wolf777news pic.twitter.com/NCisPLYXBl
— Wolf777News (@Wolf777news) August 27, 2023Karun Nair leaves Karnataka and he is all set to play for Vidharbha in the upcoming Domestic season of India.#Vidharbha #Domesticcricket #Karnataka #KarunNair #Cricket #Wolf777news pic.twitter.com/NCisPLYXBl
— Wolf777News (@Wolf777news) August 27, 2023
ನಾಯರ್ ನಿನ್ನ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘ ಟಪ್ಪಣಿಯ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. 'ಕಳೆದ ಎರಡು ದಶಕಗಳಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೊಂದಿಗೆ ನಾನು ಮಾಡಿದ ಅದ್ಭುತ ಪ್ರಯಾಣಕ್ಕಾಗಿ ನನ್ನ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸಲು ನಾನು ಈ ಅವಕಾಶವನ್ನು ಬಯಸುತ್ತೇನೆ. ನನ್ನ ಕ್ರಿಕೆಟ್ ವೃತ್ತಿಜೀವನದ ಆರಂಭದಿಂದಲೂ, ಕೆಎಸ್‌ಸಿಎ ಮಾರ್ಗದರ್ಶಿ ಶಕ್ತಿಯಾಗಿದೆ ಮತ್ತು ನಾನು ಇಂದಿನ ಆಟಗಾರನನ್ನಾಗಿ ರೂಪಿಸಲು ಸಹಾಯ ಮಾಡಿದೆ. ನಾನು ವಿದರ್ಭ ಕ್ರಿಕೆಟ್ ಅಸೋಸಿಯೇಷನ್‌ನೊಂದಿಗೆ ಹೊಸ ಅಧ್ಯಾಯ ಪ್ರಾರಂಭಿಸುತ್ತಿದ್ದಂತೆ, ನಾನು ಕೆಎಸ್‌ಸಿಎ ಜೊತೆಗಿನ ಸಮಯದಲ್ಲಿ ಸಂಪಾದಿಸಿದ ಅಚ್ಚುಮೆಚ್ಚಿನ ನೆನಪುಗಳು, ಸ್ನೇಹ ಮತ್ತು ಕೌಶಲ್ಯಗಳನ್ನು ನನ್ನೊಂದಿಗೆ ಎಂದಿಗೂ ಇರುತ್ತದೆ. ನನ್ನ ಕ್ರಿಕೆಟ್ ಪಯಣದ ಅವಿಭಾಜ್ಯ ಅಂಗವಾಗಿದ್ದಕ್ಕಾಗಿ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.
31 ವರ್ಷದ ನಾಯರ್ ಅವರು 2013 ರಲ್ಲಿ ಕರ್ನಾಟಕಕ್ಕೆ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದರು. 2013-14 ಮತ್ತು 2014-15 ರಲ್ಲಿ ತಂಡದ ಕೊನೆಯ ಎರಡು ರಣಜಿ ಟ್ರೋಫಿ ಜಯದಲ್ಲಿ ಭಾಗವಾಗಿದ್ದರು. ಬಲಗೈ ಬ್ಯಾಟರ್ ನಾಯರ್ 2014 - 15 ರ ರಣಜಿ ಟ್ರೋಫಿ ಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಅದ್ಭುತ 328 ರನ್ ಗಳಿಸಿ ಕರ್ನಾಟಕವನ್ನು ಗೆಲುವಿಗೆ ಕಾರಣರಾದರು. ವಿದರ್ಭದಲ್ಲಿ ಅವರು 2013-14ರ ಋತುವಿನಲ್ಲಿ ಕರ್ನಾಟಕದೊಂದಿಗೆ ಇದ್ದ ಮಧ್ಯಮ ಕ್ರಮಾಂಕದ ಪ್ರಮುಖ ಗಣೇಶ್ ಸತೀಶ್ ಅವರೊಂದಿಗೆ ಮತ್ತೆ ಜೊತೆಯಾಟ ಆಡಲಿದ್ದಾರೆ. ನಾಯರ್ ಕರ್ನಾಟಕ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 11 ಶತಕ ಮತ್ತು 16 ಅರ್ಧಶತಕಗಳನ್ನು ಗಳಿಸಿದ್ದಾರೆ.
2013 ರಲ್ಲಿ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದ ನಾಯರ್ ಇದುವರೆಗೆ 85 ಪಂದ್ಯಗಳನ್ನು ಆಡಿದ್ದು 48.94 ರ ಸರಾಸರಿಯಲ್ಲಿ ಸುಮಾರು 6,000 ರನ್ ಗಳಿಸಿದ್ದಾರೆ. ಅವರು 15 ಶತಕ ಮತ್ತು 27 ಅರ್ಧಶತಕಗಳನ್ನು ಹೊಂದಿದ್ದಾರೆ. 90 ಲಿಸ್ಟ್ ಎ ಪಂದ್ಯಗಳಲ್ಲಿ 2119 ರನ್ ಗಳಿಸಿದ್ದಾರೆ. ನಾಯರ್ ಅವರು 2016 ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು ಮತ್ತು ಅವರ ವೃತ್ತಿಜೀವನದ ಮೂರನೇ ಪಂದ್ಯದಲ್ಲಿ ತ್ರಿಶತಕ ಗಳಿಸಿದ್ದರು. ಅವರು ಚೆನ್ನೈನಲ್ಲಿ ಅಜೇಯ 303 ರನ್ ಬಾರಿಸುವ ಮೂಲಕ ಗಮನ ಸೆಳೆದಿದ್ದರು, ಟೆಸ್ಟ್ ಕ್ರಿಕೆಟ್‌ನಲ್ಲಿ ವೀರೇಂದ್ರ ಸೆಹ್ವಾಗ್ ನಂತರ ತ್ರಿಶತಕ ಸಿಡಿಸಿದ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ನಾಯರ್ ಹೊಂದಿದ್ದಾರೆ.
ಅವರು ಭಾರತದ 2017ರ ಬಾರ್ಡರ್-ಗವಾಸ್ಕರ್ ಟ್ರೋಫಿ ತಂಡದ ಸದಸ್ಯರಾಗಿದ್ದರು ಮತ್ತು ಮಾರ್ಚ್‌ನಲ್ಲಿ ಧರ್ಮಶಾಲಾದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅವರ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಕರ್ನಾಟಕದ ನಾಯಕರೂ ಆಗಿರುವ ನಾಯರ್ ಅವರು ವಿದರ್ಭಕ್ಕೆ ತೆರಳುವ ಮೊದಲು ಯುಕೆಯಲ್ಲಿ ಕ್ಲಬ್ ಕ್ರಿಕೆಟ್ ಆಡುತ್ತಿದ್ದರು.