ETV Bharat / sports

17 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡರೂ ವಿಶ್ವಕಪ್‌ ಗೆಲ್ಲಿಸಿಕೊಟ್ಟ 'ಹರಿಯಾಣ ಹರಿಕೇನ್' ಕಪಿಲ್ ದೇವ್! ವಿಡಿಯೋ ಸಾಕ್ಷ್ಯಗಳೇ ಇಲ್ಲದ ಐತಿಹಾಸಿಕ ಪಂದ್ಯ

author img

By ETV Bharat Karnataka Team

Published : Oct 2, 2023, 10:33 PM IST

ಭಾರತ ಆತಿಥ್ಯ ವಹಿಸಲಿರುವ 2023ರ ಕ್ರಿಕೆಟ್ ವಿಶ್ವಕಪ್‌ ಉತ್ಸಾಹ ದಿನೇ ದಿನೇ ಹೆಚ್ಚಾಗುತ್ತಿದೆ. ಟೂರ್ನಿಯ ಆರಂಭಕ್ಕೆ ಇನ್ನು 3 ದಿನಗಳು ಮಾತ್ರ ಬಾಕಿ ಇದೆ. ಇಂತಹ ಸಂದರ್ಭದಲ್ಲಿ 1983ರಲ್ಲಿ ಭಾರತ ವಿಶ್ವಕಪ್‌ ಗೆದ್ದ ಅವಿಸ್ಮರಣೀಯ ಪಂದ್ಯವೊಂದರ ಚಿತ್ರಣ ಇಲ್ಲಿದೆ..

Kapil Dev
ಕಪಿಲ್ ದೇವ್

ಹೈದರಾಬಾದ್: ಕೊಲಂಬೊದಲ್ಲಿ ಟೀಂ ಇಂಡಿಯಾ ಮತ್ತು ಶ್ರೀಲಂಕಾ ತಂಡಗಳ ನಡುವೆ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರ ಮಾಂತ್ರಿಕ ಸ್ಪೆಲ್‌ಗೆ ಸಿಂಹಳೀಯ ಬ್ಯಾಟರ್​ಗಳು ತರಗಲೆಗಳಂತೆ ಉದುರಿದರು. ಇಡೀ ತಂಡ ಕೇವಲ 50 ರನ್‌ಗಳಿಗೆ ದಿಢೀರ್ ಕುಸಿಯಿತು. ಕೇವಲ 12 ರನ್ ಗಳಿಸಿ ತಂಡದ ಆರು ಬ್ಯಾಟರ್​ಗಳು ಪೆವಿಲಿಯನ್​ಗೆ ತೆರಳಿದ್ದರು. ನಂತರ ತಂಡ ಪುನರಾಗಮನ ಮಾಡುವಲ್ಲಿ ಸಂಪೂರ್ಣ ವಿಫಲವಾಯಿತು.

ಕ್ರಿಕೆಟ್​ ಇತಿಹಾಸದಲ್ಲಿ ತಂಡವೊಂದು ಹೀಗೆ ದಿಢೀರ್ ಕುಸಿತ ಕಂಡಾಗ ಮೈಕೊಡವಿ ಪುಟಿದೆದ್ದು ನಿಂತ ತಂಡಗಳು ಬೆರಳೆಣಿಕೆಯಲ್ಲಿ ಮಾತ್ರವೇ ಕಾಣಸಿಗುತ್ತವೆ. ಈವರೆಗೆ ಒಟ್ಟು 12 ವಿಶ್ವಕಪ್​ ನಡೆದಿದ್ದು ಈ ಪೈಕಿ ಅಲ್ಪಮೊತ್ತಕ್ಕೆ ತಂಡ ಕುಸಿದಾಗ ಕಮ್​ಬ್ಯಾಕ್​ ಮಾಡಿದ ಅವಿಸ್ಮರಣಿಯ ಪಂದ್ಯದ ಬಗ್ಗೆ ಗೊತ್ತೇ?. ಇಂತಹ ರೋಚಕ ಪಂದ್ಯದ ವಿಡಿಯೋ ಇಂಟರ್ನೆಟ್‌ನಲ್ಲಿ ಲಭ್ಯವಿಲ್ಲ. ಇದೇ ಕಾರಣಕ್ಕೆ ಆ ಮರೆಯಲಾಗದ ಇನ್ನಿಂಗ್ಸ್​ ಅನ್ನು ಇಲ್ಲಿ ಚಿತ್ರಿಸಿದ್ದೇವೆ.

ಸುಮಾರು 40 ವರ್ಷಗಳ ಹಿಂದೆ ಭಾರತ ಕ್ರಿಕೆಟ್​​ ಲೋಕದಲ್ಲಿ ತನ್ನ ದೊಡ್ಡ ಹೆಜ್ಜೆಗುರುತೊಂದನ್ನು ಮೂಡಿಸಿತ್ತು. 20 ಮಾರ್ಚ್​ 1983ರಂದು ಜಗತ್ತಿಗೆ ಭಾರತ ಎಂಬ ಹೊಸ ಚಾಂಪಿಯನ್​ ಕ್ರಿಕೆಟ್‌ ತಂಡದ ಉದಯವಾಗಿತ್ತು. ಬಲಿಷ್ಠ ತಂಡ ಎನಿಸಿಕೊಂಡಿದ್ದ ಮತ್ತು ಸತತ ಎರಡು ಬಾರಿ ಚಾಂಪಿಯನ್​ ಆಗಿ ಬೀಗುತ್ತಿದ್ದ ಕೆರಿಬಿಯನ್ನರಿಗೆ ಊಹಿಸಲೂ ಸಾಧ್ಯವಾಗದಂತೆ ಭಾರತ ಗೆದ್ದು ಕೇಕೆ ಹಾಕಿತ್ತು. ಈ ಗೆಲುವು ಭಾರತದ ಕ್ರಿಕೆಟ್​ ಅಭಿಮಾನಿಗಳಿಗೆ ಎಂದಿಗೂ ಮರೆಯಲಸಾಧ್ಯ. ಆದರೆ, ಈ ಹಂತಕ್ಕೆ ತಂಡ ಪ್ರವೇಶಿಸುವ ಮೊದಲು ಉಂಟಾದ ಒಂದು ಸಂಕಷ್ಟವನ್ನು ಕಪಿಲ್​ ದೇವ್​ ದಾಟಿಸಿದ್ದರು. ಅಂದು ಭಾರತ ಸೋತಿದ್ದರೆ, ಬಹುಶಃ ವಿಶ್ವಕಪ್​ನಿಂದಲೇ ಹೊರಬೀಳುತ್ತಿತ್ತು.

1983ರ ವಿಶ್ವಕಪ್‌ನ 20ನೇ ಪಂದ್ಯ ಭಾರತ ಮತ್ತು ಜಿಂಬಾಬ್ವೆ ನಡುವೆ ನಡೆದಿತ್ತು. ಕಪಿಲ್ ದೇವ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಭಾರತದ ಆರಂಭಿಕ ಜೋಡಿಯಾದ ಸುನಿಲ್ ಗವಾಸ್ಕರ್ ಮತ್ತು ಕ್ರಿಸ್ ಶ್ರೀಕಾಂತ್ ಮೈದಾನಕ್ಕಿಳಿದಿದ್ದರು. ಆದರೆ ಮುಂದಿನ ಕೆಲವೇ ಕ್ಷಣಗಳಲ್ಲಿ ಪಂದ್ಯದ ದಿಕ್ಕು ದಿಸೆಯೇ ಬದಲಾಗಿತ್ತು.

ಕ್ಯಾಪ್ಟನ್ ಕಪಿಲ್ ದೇವ್ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದರು. ಅದಕ್ಕೆಂದೇ ಟಾಸ್ ಗೆದ್ದ ಕಪಿಲ್ ದೇವ್ ಸೀದಾ ಸ್ನಾನಕ್ಕೆ ಹೋಗಿದ್ದರು. ಆದರೆ ಸ್ನಾನ ಮಾಡಿ ಹೊರ ಬರುವಷ್ಟರಲ್ಲಿ ಅರ್ಧದಷ್ಟು ಮಂದಿ ಪೆವಿಲಿಯನ್​ಗೆ ಮರಳಿದ್ದರು.

ಸುನಿಲ್ ಗವಾಸ್ಕರ್ ಮೊದಲ ಓವರ್‌ನಲ್ಲಿಯೇ ರನ್ ಗಳಿಸದೆ ಔಟಾದರು. ಕೆಲವು ಕ್ಷಣಗಳ ನಂತರ ಶ್ರೀಕಾಂತ್ ಕೂಡ ರನ್ ಗಳಿಸದೇ ಪೆವಿಲಿಯನ್‌ಗೆ ಮರಳಿದರು. ಆರಂಭಿಕರಿಬ್ಬರೂ ಔಟಾದ ಬಳಿಕ ಜವಾಬ್ದಾರಿ ಮೊಹಿಂದರ್ ಅಮರನಾಥ್ ಮತ್ತು ಸಂದೀಪ್ ಪಾಟೀಲ್ ಹೆಗಲ ಮೇಲಿತ್ತು. ಇಬ್ಬರೂ ತಮ್ಮ ಖಾತೆಗಳನ್ನು ತೆರೆದರು. ಆದರೆ, ಅಮರನಾಥ್ 5 ರನ್ ಗಳಿಸಿ ಮತ್ತು ಸಂದೀಪ್ ಪಾಟೀಲ್ 1 ರನ್ ಗಳಿಸಿ ಔಟಾದರು. ಅಂದು ಜಿಂಬಾಬ್ವೆಯ ಬೌಲರ್‌ಗಳಾದ ಪೀಟರ್ ರಾಸನ್ ಮತ್ತು ಕೆವಿನ್ ಕರ್ರನ್ ಅವರ ಎಸೆತ ಬೆಂಕಿ ಉಂಡೆಗಳಂತಿದ್ದವು.

ಕಪಿಲ್, ರೋಜರ್ ಬಿನ್ನಿ ನಡುವಿನ ಪಾಲುದಾರಿಕೆ: 17 ರನ್‌ಗಳಿಗೆ 5 ವಿಕೆಟ್‌ಗಳು ಪತನಗೊಂಡ ನಂತರ, ಕಪಿಲ್, ರೋಜರ್ ಬಿನ್ನಿ ಅವರೊಂದಿಗೆ ಎಚ್ಚರಿಕೆಯ ಆಟವಾಡಲು ಪ್ರಾರಂಭಿಸಿದರು. ರೋಜರ್ ಬಿನ್ನಿ ಕೇವಲ 22 ರನ್ ಗಳಿಸಿ ಎಲ್‌ಬಿಡಬ್ಲ್ಯೂ ಆಗಿ ಔಟಾದಾಗ ಇಬ್ಬರೂ ಆರನೇ ವಿಕೆಟ್‌ಗೆ 60 ರನ್ ಸೇರಿಸಲು ಶಕ್ತರಾದರು. ಟೀಂ ಇಂಡಿಯಾದ ಸ್ಕೋರ್ 77ಕ್ಕೆ 6 ವಿಕೆಟ್ ಆಗಿತ್ತು. ಆದರೆ ರವಿಶಾಸ್ತ್ರಿ ಕೇವಲ ಒಂದು ರನ್ ಗಳಿಸಿ ಕಪಿಲ್ ಅವರನ್ನು ತೊರೆದರು. ಈ ಸಂದರ್ಭದಲ್ಲಿ 78 ರನ್‌ಗಳಿಗೆ​ 7 ವಿಕೆಟ್​ ಕಳೆದುಕೊಂಡ ಭಾರತ ತಂಡದ ಸ್ಥಿತಿ ತೀರಾ ಹದಗೆಟ್ಟಿತು.

ನಂತರ ಕಪಿಲ್ ಅವರ ಮಾಂತ್ರಿಕ ಇನ್ನಿಂಗ್ಸ್ ಆರಂಭವಾಯಿತು. ಈ ಸಮಯದಲ್ಲಿ ಟೀಂ ಇಂಡಿಯಾ 100 ರನ್ ಗಳಿಸಲು ಸಾಧ್ಯವಿರಲಿಲ್ಲ. ಟೇಲ್​ ಎಂಡರ್​ಗಳಾದ ಬೌಲರ್​ಗಳು ಕಪಿಲ್​ಗೆ ಸಾಥಿಗಳಾಗಿದ್ದರು. ಆದರೆ ಇನ್ನೊಂದು ತುದಿಯಲ್ಲಿ ನಿಂತ ಕಪಿಲ್‌ ಅವರ ಮನಸ್ಸಿನಲ್ಲಿ ಮತ್ತೇನೋ ನಡೆಯುತ್ತಿತ್ತು. ಮದನ್ ಲಾಲ್ ಜತೆಗೂಡಿ ಕಪಿಲ್ ದೇವ್ ತಂಡದ ಸ್ಕೋರ್ 100ರ ಗಡಿ ದಾಟಿಸಿದರು. ಹಿಂದಿನ ಏಕದಿನ ಪಂದ್ಯಗಳು 60 ಓವರ್‌ಗಳಾಗಿದ್ದು, 35 ಓವರ್‌ಗಳ ನಂತರ ಭೋಜನ ನಡೆಯಿತು. ಊಟದ ವೇಳೆಗೆ ಕಪಿಲ್ ಐವತ್ತು ರನ್ ಪೂರೈಸಿದ್ದರು. ಇದರಲ್ಲಿ ಒಂದೇ ಒಂದು ಬೌಂಡರಿಯೂ ಇರಲಿಲ್ಲ.

ಊಟದ ವೇಳೆ ಕಪಿಲ್ ದೇವ್ ಕೇವಲ 2 ಲೋಟ ಜ್ಯೂಸ್ ಕುಡಿದು ಮತ್ತೆ ಕ್ರೀಸ್​ಗೆ ಮರಳಿದರು. ಮದನ್ ಲಾಲ್ ಕೇವಲ 17 ರನ್ ಗಳಿಸಿ ಔಟಾದರೂ ಕಪಿಲ್​ಗೆ ಉತ್ತಮ ಬೆಂಬಲ ನೀಡಿ ತಂಡದ ಸ್ಕೋರನ್ನು 140ಕ್ಕೆ ಕೊಂಡೊಯ್ದರು. ಇದಾದ ಬಳಿಕ ಕಪಿಲ್ ಜತೆ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಜವಾಬ್ದಾರಿ ವಹಿಸಿಕೊಂಡರು. ಕಿರ್ಮಾನಿ ಸ್ಟ್ರೈಕ್ ಅನ್ನು ಕಪಿಲ್​ಗೆ ಬಿಟ್ಟುಕೊಡುತ್ತಾ ಬಂದರು. ಕಪಿಲ್ ದೇವ್ ಆ ದಿನಗಳಲ್ಲಿ ಟಿ20 ಕ್ರಿಕೆಟ್‌ನ ರೀತಿಯಲ್ಲಿ ಬ್ಯಾಟಿಂಗ್​ ಮಾಡಿದರು. ಕಪಿಲ್ ದೇವ್ ಕಿರ್ಮಾನಿ ಜೊತೆಗೂಡಿ ತಂಡದ ಸ್ಕೋರ್ ಅನ್ನು 60 ಓವರ್‌ಗಳಲ್ಲಿ 266 ರನ್ ಗಳಿಸಿದ್ದರು. ಕಿರ್ಮಾನಿ 56 ಎಸೆತಗಳಲ್ಲಿ 24 ರನ್ ಗಳಿಸಿ ಔಟಾಗದೆ ಉಳಿದರು. ಕಪಿಲ್ ದೇವ್ ಕೇವಲ 138 ಎಸೆತಗಳಲ್ಲಿ 175 ರನ್ ಗಳಿಸಿದರು.

ಮೈದಾನದಲ್ಲಿ 'ಹರಿಕೇನ್' ಅಬ್ಬರ: ಕಪಿಲ್ ದೇವ್ ಅವರನ್ನು ಹರಿಯಾಣ ಚಂಡಮಾರುತ ಎಂದು ಕರೆಯಲಾಗುತ್ತದೆ. ಆ ದಿನ ಅವರಿಗೆ ಈ ಹೆಸರನ್ನೇಕೆ ಇಡಲಾಗಿದೆ ಎಂದು ಕ್ರಿಕೆಟ್ ಜಗತ್ತು ತಿಳಿಯಿತು. ಆ ದಿನ ಮೈದಾನದಲ್ಲಿದ್ದ ಪ್ರೇಕ್ಷಕರು ಅಥವಾ ಆಟಗಾರರು ನಿಜವಾಗಿಯೂ ಬಿರುಗಾಳಿಯನ್ನೇ ಕಂಡರು. ಕಪಿಲ್ ದೇವ್ 138 ಎಸೆತಗಳಲ್ಲಿ 16 ಬೌಂಡರಿ ಮತ್ತು 6 ಸಿಕ್ಸರ್ ಒಳಗೊಂಡ 175 ರನ್ ಗಳಿಸಿದರು.

17 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು 78 ರನ್‌ಗಳಿಗೆ ಅರ್ಧ ತಂಡವನ್ನು ಕಳೆದುಕೊಂಡಿದ್ದ ಟೀಂ ಇಂಡಿಯಾದಕ್ಕೆ ಆಸರೆಯಾದದ್ದು ಹರಿಯಾಣ ಚಂಡಮಾರುತ. ಈ ಚಂಡಮಾರುತ ಮೈದಾನದಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಯಾಗಲು ಪ್ರಾರಂಭಿಸಿತು. ಕಪಿಲ್​ ಬ್ಯಾಟಿಂಗ್ ಅ​ನ್ನು ಅಂದು ಎಲ್ಲರೂ ಕಣ್ಣಿನ ರೆಪ್ಪೆ ಮಿಟುಕಿಸದಂತೆ ನೋಡುತ್ತಿದ್ದರು. ಕಪಿಲ್ ದೇವ್, ಕಿರ್ಮಾನಿ ಜೊತೆಗೂಡಿ ಕೊನೆಯ 100 ರನ್ ಗಳಿಸಿದರು. ಕಪಿಲ್ 50ನೇ ಓವರ್‌ನಲ್ಲಿ ಶತಕ ಪೂರೈಸಿದ್ದರು. ನಂತರ ಕೊನೆಯ 10 ಓವರ್‌ಗಳಲ್ಲಿ 75 ರನ್ ಒಟ್ಟುಗೂಡಿಸಿದ್ದರು.

ವಿಶ್ವಕಪ್ ಇತಿಹಾಸದಲ್ಲಿ ಅತ್ಯುತ್ತಮ ಇನ್ನಿಂಗ್ಸ್: ವಿಶ್ವಕಪ್ ಇತಿಹಾಸದಲ್ಲಿ ಮಾರ್ಟಿನ್ ಗಪ್ಟಿಲ್ ಮತ್ತು ಕ್ರಿಸ್ ಗೇಲ್ ಅವರಂತಹ ಬ್ಯಾಟ್ಸ್‌ಮನ್‌ಗಳು ಸಹ 200 ರನ್ ಗಡಿ ಸ್ಕೋರ್​ ಮಾಡಿದ್ದಾರೆ. ಇತರ ಅನೇಕ ಬ್ಯಾಟ್ಸ್‌ಮನ್‌ಗಳು ಸ್ಕೋರ್‌ಗಳ ವಿಷಯದಲ್ಲಿ ಕಪಿಲ್ ಅವರ ದಾಖಲೆಯನ್ನು ಮುರಿದಿದ್ದಾರೆ. ಆದರೆ ಇಂತಹ ಇನ್ನಿಂಗ್ಸ್​​ ಯಾರೂ ಕೂಡಾ ಈವರೆಗೆ ಆಡಿಲ್ಲ.

ಈ ಇನ್ನಿಂಗ್ಸ್‌ಗೆ ಯಾವುದೇ ವಿಡಿಯೋ ಪುರಾವೆಗಳಿಲ್ಲ. ಟೀಂ ಇಂಡಿಯಾ ಜಿಂಬಾಬ್ವೆಯನ್ನು 31 ರನ್‌ಗಳಿಂದ ಸೋಲಿಸಿತು. ಕಪಿಲ್ ದೇವ್ ಅವರ ಸ್ಮರಣೀಯ ಇನ್ನಿಂಗ್ಸ್‌ಗಾಗಿ ಪಂದ್ಯ ಶ್ರೇಷ್ಠರಾಗಿ ಆಯ್ಕೆಯಾದರು. ಕಪಿಲ್ ಕೂಡ 11 ಓವರ್‌ಗಳಲ್ಲಿ 32 ರನ್ ನೀಡಿ ಒಂದು ವಿಕೆಟ್ ಹಾಗೂ ಒಂದು ಕ್ಯಾಚ್ ಪಡೆದರು. ಆ ದಿನ ಕ್ರೀಡಾಂಗಣದಲ್ಲಿ ಹಾಜರಿದ್ದ ಆಟಗಾರರು ಮತ್ತು ಪ್ರೇಕ್ಷಕರು ಅದೃಷ್ಟವಂತರು. ಏಕೆಂದರೆ ಅವರು ತಮ್ಮ ಕಣ್ಣುಗಳಿಂದ ಮತ್ತೆಂದಿಗೂ ನೋಡದ ದಾಖಲೆಯನ್ನು ಅನುಭವಿಸಿ ಸಂಭ್ರಮಿಸಿದರು. ವಾಸ್ತವವಾಗಿ, 20 ಮಾರ್ಚ್ 1983ರಂದು ಬಿಬಿಸಿ ಪ್ರತಿಭಟನೆ ಇತ್ತು. ಈ ಪಂದ್ಯವನ್ನು ನೇರಪ್ರಸಾರ ಮಾಡಲು ಸಾಧ್ಯವಾಗಲಿಲ್ಲ. ಕಪಿಲ್ ದೇವ್ ಅವರ ಇನ್ನಿಂಗ್ಸ್ ಯಾವಾಗಲೂ ಸ್ಮರಣೀಯ ಕಥೆಗಳು ಮತ್ತು ಕ್ರಿಕೆಟ್‌ನ ಸುವರ್ಣ ಕ್ಷಣಗಳ ಭಾಗವಾಗಿರುತ್ತದೆ.

ಇದನ್ನೂ ಓದಿ: ಕ್ರಿಕೆಟ್‌ ಹಬ್ಬಕ್ಕೆ ಮೂರೇ ದಿನ! ಈ ಬಾರಿ ವಿಶ್ವಕಪ್‌ ಆಡುತ್ತಿರುವ 5 ಹಿರಿಯ ಆಟಗಾರರು ಇವರು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.