ಲಾರ್ಡ್ಸ್: ಜೋ ರೂಟ್ ನಾಯಕತ್ವದಲ್ಲಿ ಇಂಗ್ಲೆಂಡ್ ಅನೇಕ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದು, ಆಸ್ಟ್ರೇಲಿಯಾ ವಿರುದ್ಧದ ಆ್ಯಶಷ್ ಸರಣಿ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡ ಸೋಲು ಕಂಡಿತ್ತು. ಹೀಗಾಗಿ, ಅವರು ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ನಾಯಕತ್ವದಿಂದ ಹೊರಬಂದಿರುವ ರೂಟ್, ಇದೀಗ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅವರಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಸೋಲುವ ತಂಡವನ್ನ ಗೆಲುವಿನ ದಡ ಸೇರಿಸಿದ ರೂಟ್, ಎಲ್ಲರಿಗೂ ಹೀರೋ ಆಗಿದ್ದು, ಅವರಿಗೆ ಪೆವಿಲಿಯನ್ನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಪ್ರೀತಿಯಿಂದ ಅಪ್ಪಿಕೊಂಡು, ತಮ್ಮ ಪ್ರೀತಿ ಹೊರಹಾಕಿದ್ದಾರೆ.
-
A hero's welcome for @Root66! 👏
— England Cricket (@englandcricket) June 5, 2022 " class="align-text-top noRightClick twitterSection" data="
🏴 #ENGvNZ 🇳🇿 pic.twitter.com/V7wa3aJt1a
">A hero's welcome for @Root66! 👏
— England Cricket (@englandcricket) June 5, 2022
🏴 #ENGvNZ 🇳🇿 pic.twitter.com/V7wa3aJt1aA hero's welcome for @Root66! 👏
— England Cricket (@englandcricket) June 5, 2022
🏴 #ENGvNZ 🇳🇿 pic.twitter.com/V7wa3aJt1a
ಇದನ್ನೂ ಓದಿ: ಇಂಗ್ಲೆಂಡ್ಗೆ ಜಯ ತಂದಿಟ್ಟ 'ಜೋ ರೂಟ್'.. ಈ ರೀತಿಯಾಗಿ ಟ್ವೀಟ್ ಮಾಡಿದ ಚಿದಂಬರಂ!
ಎರಡನೇ ಇನ್ನಿಂಗ್ಸ್ನಲ್ಲಿ ಅಜೇಯ 115ರನ್ಗಳಿಕೆ ಮಾಡಿದ ರೂಟ್, ಪೆವಿಲಿಯನ್ ಕಡೆ ಹೋಗುತ್ತಿದ್ದಂತೆ ತಂಡದ ಎಲ್ಲ ಆಟಗಾರರು, ಸಹ ಸಿಬ್ಬಂದಿ ಹಾಗೂ ಕೋಚ್ ಅವರಿಗೆ ರಾಜ ಮರ್ಯಾದೆ ನೀಡಿದ್ದು, ಪ್ರೀತಿಯ ಅಪ್ಪುಗೆ ನೀಡಿದ್ದಾರೆ. ಮಹತ್ವದ ಪಂದ್ಯದಲ್ಲಿ ಮೈದಾನದಲ್ಲಿ ಗಟ್ಟಿಯಾಗಿ ನಿಂತು, ಬ್ಯಾಟ್ ಮಾಡಿರುವ ರೂಟ್ಗೆ ಅತ್ಯುತ್ತಮ ಪ್ರಶಂಸೆ ವ್ಯಕ್ತವಾಗಿದೆ.
ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ನೀಡಿದ್ದ 277ರನ್ಗಳ ಗುರಿ ಬೆನ್ನಟ್ಟಿದೆ ಇಂಗ್ಲೆಂಡ್ ಕೇವಲ 4 ವಿಕೆಟ್ನಷ್ಟಕ್ಕೆ 69ರನ್ಗಳಿಕೆ ಮಾಡಿ, ಸಂಕಷ್ಟದಲ್ಲಿತ್ತು. ಈ ವೇಳೆ ಮೈದಾನಕ್ಕಿಳಿದ ಮಾಜಿ ಕ್ಯಾಪ್ಟನ್ ರೂಟ್, ಬೆನ್ ಸ್ಟೋಕ್ಸ್ ಹಾಗೂ ಬೆನ್ ಫೋಕ್ಸ್ ಜೊತೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ, 5 ವಿಕೆಟ್ಗಳ ಗೆಲುವಿಗೆ ಕಾರಣವಾದರು.