ರಾವಲ್ಪಿಂಡಿ (ಪಾಕಿಸ್ತಾನ): ಪಾಕಿಸ್ತಾನ ಪ್ರವಾಸದಲ್ಲಿರುವ ಇಂಗ್ಲೆಂಡ್ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಜೋ ರೂಟ್ ಎಡಗೈನಲ್ಲಿ ಬ್ಯಾಟ್ ಮಾಡಿದರು. ರಾವಲ್ಪಿಂಡಿಯ ಡೆಡ್ ಪಿಚ್ ಬ್ಯಾಟರ್ಗಳಿಗೆ ಸಹಕಾರಿಯಾಗಿರುವುದನ್ನು ಗುರುತಿಸಿಕೊಂಡ ರೂಟ್ ಎಡಗೈ ಆಟಗಾರನ ರೀತಿ ನಿಂತು ಬಾಲ್ ಎದುರಿಸಿದರು. ಅವರ ಈ ಪ್ರಯೋಗಾತ್ಮಕ ಆಟ ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿದೆ.
ಬಲಗೈ ಬ್ಯಾಟರ್ ಎಡಗೈನಲ್ಲಿ ಅಡುವುದು ತುಂಬಾ ಕಷ್ಟವಾಗುತ್ತದೆ ಮತ್ತು ಟೈಮಿಂಗ್ನ ಸಮಸ್ಯೆ ಆಗುತ್ತದೆ. ಆದರೆ ಲೀಲಾಜಾಲವಾಗಿ ಬಾಲ್ ಬ್ಯಾಟ್ ಕನೆಕ್ಟ್ ಮಾಡಿದ್ದಾರೆ. ಸಾಮಾನ್ಯವಾಗಿ ಎ ಬಿ ಡಿವಿಲಿಯರ್ಸ್, ಸೂರ್ಯಕುಮಾರ್ ಯಾದವ್ ಮತ್ತು ಮ್ಯಾಕ್ಸ್ವೆಲ್ ಒಮ್ಮೆಗೆ ಎಡಕ್ಕೆ ತಿರುಗಿ ಬ್ಯಾಟ್ ಬೀಸುತ್ತಾರೆ. ಆದರೆ ರೂಟ್ ಎಡಗೈ ಬ್ಯಾಟರ್ನಂತೆಯೇ ಕ್ರೀಸ್ನಲ್ಲಿ ನಿಂತು ಬ್ಯಾಟ್ ಬೀಸಿದ್ದಾರೆ.
ಎರಡು ಬೌಲ್ನ್ನು ಮಾತ್ರ ಎಡಗೈ ಮುಂದೆ ಬಳಸಿ ಆಡಿದರು. ಒಂದು ಚೆಂಡನ್ನು ಸ್ಕ್ವೇರ್ ಲೆಗ್‌ಗೆ ಸ್ವಿಪ್ ಮಾಡಿದರು. ಮುಂದಿನ ಎಸೆತದಲ್ಲಿ ನಸೀಮ್ ಶಾ ಮಿಡ್ ವಿಕೆಟ್‌ನಲ್ಲಿ ಡ್ರಾಪ್ ಮಾಡಿದರು. ಮತ್ತೆ ಬಲಗೈ ಬ್ಯಾಟರ್ ರೀತಿ ನಿಂತು ಬ್ಯಾಟ್ ಮಾಡಿರು. ರೂಟ್ 73ರನ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ಹೋದರು.
ರೂಟ್ ಎಡಗೈಯಲ್ಲಿ ಬ್ಯಾಟ್ ಮಾಡಿದ್ದು ವೈರಲ್ ಆದ ರೀತಿಯಲ್ಲೇ ಔಟ್ ಆಗಿ ಹೋದದ್ದು ಸಹ ವೈರಲ್ ಆಗಿದೆ. 73 ರನ್ಳಿಸಿದ್ದ ವೇಳೆ ಲೆಗ್ ಕಡೆಗೆ ವೈಡ್ ಆಗಿ ಬಂದ ಎಸೆತವನ್ನು ಬ್ಯಾಕ್ ಸೈಡ್ಗೆ ಸ್ವೀಪ್ ಮಾಡಲು ಹೋಗಿ ಕ್ಯಾಚ್ ಕೊಟ್ಟರು. ರೂಟ್ ಬ್ಯಾಟ್ನಿಂದ ಬಂದ ಈ ಬಾಲಿಶವಾದ ಶಾಟ್ ಕೂಡ ವೈರಲ್ ಆಗುತ್ತಿದೆ. ಫೀಲ್ಡರ್ ಇದ್ದಲ್ಲಿಗೆ ಸ್ವೀಪ್ ಮಾಡಿ ಕ್ಯಾಚ್ ಕೊಟ್ಟಂತೆ ಇದೆ ಎಂದು ಟ್ವಿಟ್ಟಿಗರು ಹಾಸ್ಯ ಮಾಡಿದ್ದಾರೆ.
-
Joe Root simply bats left handed. Remarkable pic.twitter.com/CXUr3dLCS8
— Will Macpherson (@willis_macp) December 4, 2022 " class="align-text-top noRightClick twitterSection" data="
">Joe Root simply bats left handed. Remarkable pic.twitter.com/CXUr3dLCS8
— Will Macpherson (@willis_macp) December 4, 2022Joe Root simply bats left handed. Remarkable pic.twitter.com/CXUr3dLCS8
— Will Macpherson (@willis_macp) December 4, 2022
ನಾಲ್ಕನೇ ದಿನದ ಪಂದ್ಯ: ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ನಲ್ಲಿ 264ರನ್ ಗೆ ಡಿಕ್ಲೇರ್ ಮಾಡಿ ಪಾಕಿಸ್ತಾನಕ್ಕೆ ಗೆಲುವಿಗೆ 343 ಗುರಿ ನೀಡಿತ್ತು. 4ನೇ ದಿನದ ಅಂತ್ಯಕ್ಕೆ ಪಾಕಿಸ್ತಾನ 80 ರನ್ಗೆ 2 ವಿಕೆಟ್ ಕಳೆದುಕೊಂಡಿದೆ. ಇಮಾಮ್ ಉಲ್ ಹಕ್ (43*) ಮತ್ತು ಸೌದ್ ಶಕೀಲ್ (24*) ಕ್ರೀಸ್‌ನಲ್ಲಿದ್ದಾರೆ.
ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ 35.5 ಓವರ್‌ಗಳಲ್ಲಿ 264/7 ಡಿಕ್ಲೇರ್ ಮಾಡಿಕೊಂಡಿತು. ಹ್ಯಾರಿ ಬ್ರೂಕ್ 65 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 87 ರನ್ ಗಳಿಸಿದರು. ಜೋ ರೂಟ್ (73) ಮತ್ತು ಝಾಕ್ ಕ್ರಾಲಿ (50) ಕೂಡ ಅರ್ಧಶತಕಗಳಲ್ಲಿ ಗಳಿಸಿದರು. ಇದರೊಂದಿಗೆ ಪಂದ್ಯದಲ್ಲಿ ಇಂಗ್ಲೆಂಡ್ 342 ರನ್ ಮುನ್ನಡೆ ಸಾಧಿಸಿದ್ದು, ಆತಿಥೇಯರಿಗೆ 343 ರನ್ ಗುರಿ ನೀಡಿದೆ.
ಇದನ್ನೂ ಓದಿ: ಕ್ಯಾಚ್ ಕೈಚೆಲ್ಲಿ ಪಂದ್ಯ ಕಳೆದುಕೊಂಡ ಭಾರತ: ಫೀಲ್ಡಿಂಗ್ ವೈಫಲ್ಯ ಎಂದ ಕಾರ್ತಿ