ಮುಂಬೈ: ಮುಂದಿನ ವರ್ಷ ಏಷ್ಯಾಕಪ್‌ಗಾಗಿ ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಮತ್ತು ತಟಸ್ಥ ಸ್ಥಳಕ್ಕಾಗಿ ಒತ್ತಾಯಿಸುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಮುನ್ನ 2023ರಲ್ಲಿ 50 ಓವರ್‌ಗಳ ಮಾದರಿ ಏಷ್ಯಾಕಪ್ ಪಾಕಿಸ್ತಾನದಲ್ಲಿ ನಡೆಯಲಿದೆ. ನಾವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ನಿರ್ಧರಿಸಿದ್ದೇವೆ. ನಾವು ತಟಸ್ಥ ಸ್ಥಳದಲ್ಲಿ ಆಡುತ್ತೇವೆ ಎಂದು ಇಲ್ಲಿ ನಡೆದ ಬಿಸಿಸಿಐಯ ವಾರ್ಷಿಕ ಸಾಮಾನ್ಯ ಸಭೆ (AGM) ನಂತರ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಜಯ್ ಶಾ ಹೇಳಿದರು.
-
Jay Shah confirms India won't travel to Pakistan for Asia Cup 2023
— ANI Digital (@ani_digital) October 18, 2022 " class="align-text-top noRightClick twitterSection" data="
Read @ANI Story | https://t.co/4rI55Olxnj#JayShah #Pakistan #India #AsiaCup2023 #AsiaCup pic.twitter.com/bnc4p7Q5Tr
">Jay Shah confirms India won't travel to Pakistan for Asia Cup 2023
— ANI Digital (@ani_digital) October 18, 2022
Read @ANI Story | https://t.co/4rI55Olxnj#JayShah #Pakistan #India #AsiaCup2023 #AsiaCup pic.twitter.com/bnc4p7Q5TrJay Shah confirms India won't travel to Pakistan for Asia Cup 2023
— ANI Digital (@ani_digital) October 18, 2022
Read @ANI Story | https://t.co/4rI55Olxnj#JayShah #Pakistan #India #AsiaCup2023 #AsiaCup pic.twitter.com/bnc4p7Q5Tr
ಈ ಬಾರಿ ಆತಿಥೇಯ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ ಕಾರಣ ಏಷ್ಯಾಕಪ್ನ್ನು ಯುಎಇಯಲ್ಲಿ ನಡೆಯಿತು. 2012-13 ರಿಂದ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಆಡಿಲ್ಲ. ಐಸಿಸಿ ನಡೆಸುವ ಟೂರ್ನಮೆಂಟ್ಗಳಲ್ಲಿ ಮಾತ್ರ ಮುಖಾಮುಖಿ ಆಗುತ್ತವೆ. ಯುಎಇಯಲ್ಲಿ ನಡೆದ ಏಷ್ಯಾ ಕಪ್ನಲ್ಲಿ ಭಾರತ ಪಾಕಿಸ್ತಾನ ಮುಖಾಮುಖಿಯಾಗಿತ್ತು. ಟಿ 20 ವಿಶ್ವ ಕಪ್ನಲ್ಲಿ ಅಕ್ಟೋಬರ್ 23ರಂದು ಮೆಲ್ಬೋರ್ನ್‌ನಲ್ಲಿ ಆಡಲಿದೆ.
ಇದನ್ನೂ ಓದಿ : T20 World cup: ಚುಟುಕು ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಸೇರಿ ಮಹತ್ವದ ಮಾಹಿತಿ