ಸೆಂಚುರಿಯನ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ನೂತನ ಮೈಲುಗಲ್ಲು ತಲುಪಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ವಿದೇಶಗಳಲ್ಲಿ 100 ವಿಕೆಟ್ ಪಡೆದ ದಾಖಲೆಗೆ ಬುಮ್ರಾ ಪಾತ್ರರಾಗಿದ್ದಾರೆ.
ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಿನ ಮೊದಲ ಟೆಸ್ಟ್‌ನ 4ನೇ ದಿನವಾದ ಬುಧವಾರ ಜಸ್ಪ್ರೀತ್ ಈ ಸಾಧನೆ ಮಾಡಿದರು. ವಾನ್ ಡೆರ್ ಡಸೆನ್ ವಿಕೆಟ್ ಪಡೆಯುತ್ತಿದ್ದಂತೆ ಬುಮ್ರಾ ಈ ಸಾಧನೆ ಮಾಡಿದರು. 28ರ ಹರೆಯದ ವೇಗಿ ಒಟ್ಟಾರೆ 25 ಟೆಸ್ಟ್ ಪಂದ್ಯಗಳಿಂದ 105 ವಿಕೆಟ್ ಕಬಳಿಸಿದ್ದು, ಅದರಲ್ಲಿ 101 ಬಲಿಗಳು ವಿದೇಶಗಳಲ್ಲೇ ಲಭಿಸಿರುವುದು ವಿಶೇಷವಾಗಿದೆ. 2018ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಬುಮ್ರಾ 25ರಲ್ಲಿ 23 ಪಂದ್ಯಗಳನ್ನು ಭಾರತದಿಂದಾಚೆಗೆ ಆಡಿದ್ದಾರೆ.
-
Stumps on day four in Centurion 🏏
— ICC (@ICC) December 29, 2021 " class="align-text-top noRightClick twitterSection" data="
Late strikes from Jasprit Bumrah turns the tide in India's favour but South African skipper Dean Elgar stands tall. #WTC23 | https://t.co/qi2EfKhLHp pic.twitter.com/ezBYqfFszZ
">Stumps on day four in Centurion 🏏
— ICC (@ICC) December 29, 2021
Late strikes from Jasprit Bumrah turns the tide in India's favour but South African skipper Dean Elgar stands tall. #WTC23 | https://t.co/qi2EfKhLHp pic.twitter.com/ezBYqfFszZStumps on day four in Centurion 🏏
— ICC (@ICC) December 29, 2021
Late strikes from Jasprit Bumrah turns the tide in India's favour but South African skipper Dean Elgar stands tall. #WTC23 | https://t.co/qi2EfKhLHp pic.twitter.com/ezBYqfFszZ
ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಬಿಗುವಿನ ದಾಳಿ ನಡೆಸಿದ ಬುಮ್ರಾ, ಅಂತಿಮ ಅರ್ಧ ಗಂಟೆ ಅವಧಿಯಲ್ಲಿ ಎರಡು ವಿಕೆಟ್ ಕಬಳಿಸಿ ಭಾರತದ ಮೇಲುಗೈಗೆ ಕಾರಣರಾದರು. ಬುಮ್ರಾ ಹಾಕಿದ 36ನೇ ಓವರ್ನ 4ನೇ ಎಸೆತದ ಲಯ ಅಂದಾಜಿಸುವಲ್ಲಿ ಎಡವಿದ ವ್ಯಾನ್ ಡೆರ್ ಡಸೆನ್ ಬೌಲ್ಡ್ ಆದರು. ಬಳಿಕ ದಿನದಾಟದ ಅಂತ್ಯಕ್ಕೆ ಇನ್ನೂ ಒಂದು ಎಸೆತ ಬಾಕಿ ಇರುವಾಗ ಮಾರಕ ಯಾರ್ಕರ್ ಮೂಲಕ ನೈಟ್‌ವಾಚ್‌ಮನ್ ಕೇಶವ್ ಮಹಾರಾಜ್ ವಿಕೆಟ್ ಪಡೆದು ದ.ಆಫ್ರಿಕಾಗೆ ಬುಮ್ರಾ ಶಾಕ್ ನೀಡಿದರು.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಜಯ ಕಟ್ಟಿಟ್ಟ ಬುತ್ತಿ ಎನ್ನುತ್ತಿವೆ ಈ ಹಿಂದಿನ ದಾಖಲೆಗಳು!
ಸದ್ಯ ಸೆಂಚುರಿಯನ್ ಟೆಸ್ಟ್ ಪಂದ್ಯ ಗೆಲ್ಲಲು 305 ರನ್ ಗುರಿ ಪಡೆದಿರುವ ಹರಿಣಗಳು ನಾಲ್ಕನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ಗೆ 94 ರನ್ ಪೇರಿಸಿದ್ದಾರೆ. ಸರಣಿಯ ಆರಂಭಿಕ ಪಂದ್ಯದಲ್ಲೇ ಜಯಭೇರಿ ಬಾರಿಸಲು ಟೀಂ ಇಂಡಿಯಾಗೆ ಅಂತಿಮ ದಿನವಾದ ಇಂದು 6 ವಿಕೆಟ್ ಅಗತ್ಯವಿದೆ.
ಇದನ್ನೂ ಓದಿ: ಮುಂದುವರಿದ ವಿರಾಟ್ ವೈಫಲ್ಯ: ಸತತ 2ನೇ ವರ್ಷವೂ ಶತಕವಿಲ್ಲದೇ ಕೊನೆಗೊಳಿಸಿದ ಕೊಹ್ಲಿ