ETV Bharat / sports

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 1000 ವಿಕೆಟ್.. ಹೊಸ ದಾಖಲೆ ಬರೆದ ಜೇಮ್ಸ್ ಆ್ಯಂಡರ್ಸನ್ - 1000 ವಿಕೆಟ್

ಎಮಿರೇಟ್ಸ್​ ಓಲ್ಡ್ ಟ್ರ್ಯಾಫೋರ್ಡ್​ನಲ್ಲಿ ನಡೆದ ಕೌಂಟಿ ಕ್ರಿಕೆಟ್​ನಲ್ಲಿ ಕೆಂಟ್ ಪರ ಆಡುತ್ತಿದ್ದ ಹೀನೋ ಕುಹ್ನ್ ಅವರನ್ನು ಔಟ್​ ಮಾಡುವ ಮೂಲಕ ಆ್ಯಂಡರ್ಸನ್ 1000 ವಿಕೆಟ್ ದಾಖಲೆ ಪೂರೈಸಿದ್ದಾರೆ.

James Anderson registers 1000 scalps in first-class cricket
ದಾಖಲೆ ಬರೆದ ಜೇಮ್ಸ್ ಆ್ಯಂಡರ್ಸನ್
author img

By

Published : Jul 6, 2021, 10:41 AM IST

ಮ್ಯಾಂಚೆಸ್ಟರ್​: ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ 1000 ಸಾವಿರ ವಿಕೆಟ್​ ಪಡೆಯುವ ಮೂಲಕ ಅಪೂರ್ವ ದಾಖಲೆ ಮಾಡಿದ್ದಾರೆ. ಎಮಿರೇಟ್ಸ್​ ಓಲ್ಡ್ ಟ್ರ್ಯಾಫೋರ್ಡ್​ನಲ್ಲಿ ನಡೆದ ಕೌಂಟಿ ಕ್ರಿಕೆಟ್​ನಲ್ಲಿ ಲ್ಯಾನ್ಸೆಶೈರ್ ಪರ ಆಡಿದ್ದ ಆ್ಯಂಡರ್ಸನ್ ಕೆಂಟ್ ವಿರುದ್ಧ ಈ ಸಾಧನೆ ಮಾಡಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ಆ್ಯಂಡರ್ಸನ್ ಝ್ಯಾಕ್ ಕ್ರಾವ್ಲೆ, ಜೋರ್ಡಾನ್ ಕಾಕ್ಸ್, ಆಲಿವರ್ ರಾಬಿನ್ಸನ್, ಜ್ಯಾಕ್ ಲೀನಿಂಗ್, ಹೀನೋ ಕುಹ್ನ್, ಮ್ಯಾಟ್ ಮಿಲ್ನೆಸ್ ಮತ್ತು ಹ್ಯಾರಿ ಪೋಡ್‌ಮೋರ್‌ರನ್ನು ಔಟ್​ ಮಾಡಿದರು. ಈ ಮೂಲಕ ಕೆಂಟ್ 34 ರನ್​ಗೆ 8 ವಿಕೆಟ್ ಕಳೆದುಕೊಂಡಿತು. ಕೆಂಟ್ ಪರ ಆಡುತ್ತಿದ್ದ ಹೀನೋ ಕುಹ್ನ್ ಅವರನ್ನು ಔಟ್​ ಮಾಡುವ ಮೂಲಕ ಆ್ಯಂಡರ್ಸನ್ 1000 ವಿಕೆಟ್ ದಾಖಲೆ ಪೂರೈಸಿದರು.

ಓದಿ : 'IPL ಆಡಲು ನಾನು ರೆಡಿ'... ಯುಎಇಗೆ ಪ್ರಯಾಣ ಬೆಳೆಸಲಿದ್ದಾರೆ ಅಯ್ಯರ್​​

ಕಳೆದ ಜೂನ್​ನಲ್ಲಿ ಜೇಮ್ಸ್​ ಆ್ಯಂಡರ್ಸನ್​ ಇಂಗ್ಲೆಂಡ್ ತಂಡದ ಪರ ಗರಿಷ್ಠ ಟೆಸ್ಟ್​ ಪಂದ್ಯಗಳನ್ನಾಡಿದ ದಾಖಲೆಗೆ ಪಾತ್ರರಾಗಿದ್ದರು. ನ್ಯೂಜಿಲ್ಯಾಂಡ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯದಲ್ಲಿ 11ರ ಬಳಗದಲ್ಲಿ ಅವಕಾಶ ಪಡೆಯುವ ಮೂಲಕ ಲೆಜೆಂಡರಿ ಇಂಗ್ಲಿಷ್​ ಬ್ಯಾಟ್ಸ್​ಮನ್ ಅಲಸ್ಟೈರ್ ಕುಕ್​ ಅವರನ್ನು ಹಿಂದಿಕ್ಕಿದ್ದರು.

ಅಲಸ್ಟೈರ್ ಕುಕ್ ಇಂಗ್ಲೆಂಡ್ ಪರ 161 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. ಅವರು 33 ಶತಕಗಳ ಸಹಿತ 12,472 ರನ್ ಗಳಿಸಿದ್ದಾರೆ. ಜೇಮ್ಸ್​ ಆ್ಯಂಡರ್ಸನ್​ 162 ಪಂದ್ಯಗಳನ್ನಾಡುವ ಮೂಲಕ ಇಂಗ್ಲೆಂಡ್ ಪರ ಗರಿಷ್ಠ ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.