ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಪಂದ್ಯಾವಳಿಗೆ ಪ್ರಸ್ತುತ ಭಾರತ ಬೆಳೆಸಬೇಕಿರುವ ಆಟಗಾರನೆಂದರೆ, ಅದು ಇಶಾನ್ ಕಿಶನ್ ಮಾತ್ರ. ಹಾಗಾಗಿ ಟೀಮ್ ಮ್ಯಾನೇಜ್ಮೆಂಟ್ ಆತನಿಗೆ ಹೆಚ್ಚಿನ ಅವಕಾಶಗಳನ್ನು ನೀಡಿ, ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಬೇಕೆಂದು ಭಾರತ ತಂಡದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಝಾ ಅಭಿಪ್ರಾಯಪಟ್ಟಿದ್ದಾರೆ.
ಇಶಾನ್ ಕಿಶನ್ ಒಬ್ಬರೇ ನೀವು ವಿಶ್ವಕಪ್‌ಗೆ ವಾಸ್ತವಿಕವಾಗಿ ಬೆಳಸಬಹುದಾದ ಆಟಗಾರ. ಅವರನ್ನು ಬಿಟ್ಟರೆ ಪ್ರಸ್ತುತ ತಂಡದಲ್ಲಿ ಹೆಚ್ಚೇನು ಬದಲಾವಣೆ ಬಯಸುವುದಿಲ್ಲ. ಏಕೆಂದರೆ ಪ್ರಸ್ತುತ ಆಡುತ್ತಿರುವರೆಲ್ಲರೂ ಯುವಕರು ಮತ್ತು ಹೊಸಬರಾಗಿದ್ದಾರೆ. ಅಲ್ಲಿ ಯಾರೊಬ್ಬರು 40 - 50 ಪಂದ್ಯಗಳನ್ನಾಡಿದವರು ಅಥವಾ ಸಾಕಷ್ಟು ಕ್ರಿಕೆಟ್ ಆಡಿರುವುದರಿಂದ ವಿಶ್ರಾಂತಿ ನೀಡಬೇಕು ಎನ್ನುವವರು ಯಾರು ಇಲ್ಲ. ಎಲ್ಲವೂ ಉತ್ತಮವಾಗಿರುವವಾಗ ನೀವು ಹೆಚ್ಚಿನ ಅವಕಾಶ ನೀಡಬೇಕೆಂದು ಬಯಸುವ ಆಟಗಾರನೆಂದರೆ ಅದು ಇಶಾನ್ ಕಿಶನ್ ಮಾತ್ರ ಎಂದು ಓಝಾ ಕ್ರಿಕ್ಬಜ್ ಕಾರ್ಯಕ್ರಮದಲ್ಲಿ ಓಝಾ ಹೇಳಿದ್ದಾರೆ.
ಪ್ರಸ್ತುತ ಸರಣಿಯ ಬಗ್ಗೆ ಮಾತನಾಡಿ, ಭಾರತ ತಂಡ ಈಗಾಗಲೇ ಸರಣಿ ಗೆಲುವನ್ನು ಖಚಿತಪಡಿಸಿಕೊಂಡಿದ್ದಾರೆ. ಆದರೂ ನಾಳೆ ನಡೆಯುವ ಪಂದ್ಯದಲ್ಲಿ ಭಾರತ ತಂಡ ಹೆಚ್ಚು ಬದಲಾವಣೆ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ. ನಾಯಕ ರೋಹಿತ್ ಶರ್ಮಾ ಈಗಾಗಲೇ ಶಿಖರ್ ಧವನ್ ನಾಳಿನ ಪಂದ್ಯಕ್ಕೆ ಮರಳಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಆ ಒಂದು ಬದಲಾವಣೆ ಹೊರತಾಗಿ ತಂಡದಲ್ಲೂ ಹೆಚ್ಚಿನ ಬದಲಾವಣೆಗಳ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
"ಬ್ರೂಕ್ಸ್ ರನ್ ಗಳಿಸುತ್ತಿರುವ ಕಾರಣ ಪೂರನ್ ಮೇಲಿನ ಕ್ರಮಾಂಕದಲ್ಲಿ ಆಡಬೇಕೆಂದು ನಾನು ಭಾವಿಸುತ್ತೇನೆ. ಬ್ರೂಕ್ಸ್ ನಂ. 3 ರಲ್ಲಿ ಆಡುವುದರಿಂದ ಪೂರನ್ ನಾಲ್ಕರಲ್ಲಿ ಆಡಬೇಕು, ಹಿಂದಿನ ಪಂದ್ಯಗಳಲ್ಲಿ ನಂ.3 ರಲ್ಲಿ ಆಡುತ್ತಿದ್ದ ಡ್ಯಾರೆನ್ ಬ್ರಾವೋ ನಾಯಕ ಕೀರನ್ ಪೊಲಾರ್ಡ್ಗೆ ದಾರಿ ಮಾಡಿಕೊಡಬಹುದು. ಅದೊಂದೇ ಬದಲಾವಣೆ ಸಾಧ್ಯವೆಂದು ನನಗನ್ನಿಸುತ್ತಿದೆ "ಎಂದು ಓಝಾ ತಿಳಿಸಿದ್ದಾರೆ.
ಇದನ್ನೂ ಓದಿ:ಶಿಖರ್ ಧವನ್ ಕಮ್ಬ್ಯಾಕ್ ಬಲ, ಸರಣಿ ವೈಟ್ವಾಷ್ ಮಾಡುವತ್ತ ಕಣ್ಣಿಟ್ಟ ಭಾರತ