ETV Bharat / sports

ಸೋಲಿನ ಕಹಿ ಅರಗಿಸಿಕೊಳ್ಳಲು ಆಗುತ್ತಿಲ್ಲ: ತಂಡದ ಬ್ಯಾಟ್ಸ್‌ಮನ್‌ಗಳ ಬಗ್ಗೆ ವಾರ್ನರ್ ಬೇಸರ​

ಪಂದ್ಯದ ಕೊನೆಯಲ್ಲಿ ನಮಗೆ ಇಬ್ಬರು ಸೆಟ್ ಬ್ಯಾಟ್ಸ್‌ಮನ್​ಗಳ ಅಗತ್ಯವಿತ್ತು. ಆದರೆ, ನಾವು ಅದನ್ನು ಮಾಡಲು ವಿಫಲರಾದೆವು. ನಾವು ಜೊತೆಯಾಟ ಹಾಗೂ ಸರಿಯಾದ ಕ್ರಿಕೆಟ್ ಹೊಡೆತಗಳನ್ನು ಆಡಬೇಕಾಗಿತ್ತು ಎಂದು ಡೇವಿಡ್ ವಾರ್ನರ್ ಸೋಲಿನ ಪರಾಮರ್ಶೆ ಮಾಡಿದರು.

Warner
Warner
author img

By

Published : Apr 15, 2021, 10:07 AM IST

Updated : Apr 15, 2021, 10:33 AM IST

ಚೆನ್ನೈ: ಎಡಗೈ ಸ್ಪಿನ್ನರ್ ಶಹಬಾಜ್ ಅಹ್ಮದ್ ಎಸೆತಗಳ ವಿರುದ್ಧ ಕ್ರಾಸ್ ಬ್ಯಾಟ್ ಹೊಡೆತಗಳ ಮೊರೆ ಹೋಗಿದ್ದರಿಂದ ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು ಎಂದು ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಹೇಳಿದರು.

ನಿನ್ನೆ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಎಸ್​ಆರ್​ಎಚ್ 6 ರನ್​ಗಳಿಂದ ಸೋಲು ಅನುಭವಿಸಿತು. ನಂತರ ಮಾತನಾಡಿದ ವಾರ್ನರ್​, ನಮ್ಮ ತಂಡದಿಂದ ಜೊತೆಯಾಟದ ಪಾಲುದಾರಿಕೆ ಬರಲಿಲ್ಲ. ಶಹಬಾಜ್ ಅಹ್ಮದ್ ಎಸೆತಗಳ ವಿರುದ್ಧ ನಮ್ಮ ಬ್ಯಾಟ್ಸ್ ಮನ್​ಗಳು ತಡವರಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೊಂದು ನುಂಗಲು ಬಹಳ ದೊಡ್ಡದಾದ ಕಹಿ ಮಾತ್ರೆ. ಕೊನೆಯಲ್ಲಿ ನಮಗೆ ಇಬ್ಬರು ಸೆಟ್ ಬ್ಯಾಟ್ಸ್ ಮನ್​ಗಳ ಅಗತ್ಯವಿತ್ತು. ಆದರೆ, ನಾವು ಅದನ್ನು ಮಾಡಲು ವಿಫಲರಾದೆವು. ನಾವು ಜೊತೆಯಾಟ ಹಾಗೂ ಸರಿಯಾದ ಕ್ರಿಕೆಟ್ ಹೊಡೆತಗಳನ್ನು ಆಡಬೇಕಾಗಿತ್ತು ಎಂದು ಸೋಲಿನ ಪರಾಮರ್ಶೆಯ ಮಾತುಗಳನ್ನು ಆಡಿದರು.

ವಾರ್ನರ್ ಸ್ವತಃ 37 ಎಸೆತಗಳಲ್ಲಿ 54 ರನ್ ಗಳಿಸಿ ತಂಡವನ್ನು ಗೆಲುವಿನ ಹಾದಿಯಲ್ಲಿ ತಂದು ನಿಲ್ಲಿಸಿದರು. ಆದರೆ, ಮಧ್ಯಮ ಕ್ರಮಾಂಕ ಹಾಗೂ ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳು ಅದನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ವಿಫಲವಾದರು.

ಇದನ್ನೂ ಓದಿ: ಐಪಿಎಲ್​ 2021: ಕೊನೆಯ ಘಳಿಗೆಯಲ್ಲಿ ಶಹ್ಬಾಜ್​ ಕಮಾಲ್​... ಹೈದರಾಬಾದ್​ ವಿರುದ್ಧ ಆರ್​ಸಿಬಿಗೆ 6 ರನ್​ಗಳ ರೋಚಕ ಜಯ!

ಎಡಗೈ ಸ್ಪಿನ್ನರ್ ಶಹಬಾಜ್ ಅಹ್ಮದ್ ಎಸೆತಗಳಲ್ಲಿ ಚೆಂಡನ್ನು ಸಿಕ್ಸರ್ ಹೊಡೆಯಲು ಪ್ರಯತ್ನಿಸುತ್ತಿದ್ದಾಗ ಎಸ್​ಆರ್​ಎಚ್​ನ ಮೂವರು ಬಿಗ್​ ಹಿಟ್ಟರ್​ಗಳಾದ ಜಾನಿ ಬೈರ್‌ಸ್ಟೋವ್, ಮನೀಶ್ ಪಾಂಡೆ ಮತ್ತು ಅಬ್ದುಸ್ ಸಮದ್ 17ನೇ ಓವರ್‌ನಲ್ಲಿ ವಿಕೆಟ್​ ಒಪ್ಪಿಸಿದರು.

ಮುಂಬರುವ ಪಂದ್ಯಗಳನ್ನು ಹೇಗೆ ಆಡಬೇಕು ಎಂಬುದು ನಮಗೆ ತಿಳಿದಿದೆ. ನಮ್ಮಲ್ಲಿ ಇನ್ನೂ ಮೂರು ಪಂದ್ಯಗಳಿವೆ. ನಮ್ಮ ವಿಕೆಟ್‌ಗಳು ಉತ್ತಮಗೊಳ್ಳಲಿವೆ ಎಂದು ನಾನು ಭಾವಿಸುತ್ತೇನೆ. ಮೊದಲ ಆರು ಓವರ್‌ಗಳಲ್ಲಿ ನಾವು ಸಾಕಷ್ಟು ಸುಧಾರಿಸಬೇಕಿದೆ. ನಾವು ಈಗ ಸರಳ ಕ್ರಿಕೆಟ್ ಆಡಬೇಕು. ಸಾಧಾರಣ ಗುರಿಗಳನ್ನು ಬೆನ್ನಟ್ಟಲು ಹೆಣಗಾಡಿದರೂ ಚೆನ್ನೈನಲ್ಲಿ ನಡೆದ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಿದೆ ಎಂದರು.

Last Updated : Apr 15, 2021, 10:33 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.