ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಭಾನುವಾರ ತಮ್ಮ 7ನೇ ಐಪಿಎಲ್ ಶತಕ ಬಾರಿಸುವ ಮೂಲಕ ಹೊಸ ಮೈಲಿಗಲ್ಲು ತಲುಪಿದರು. ವಿಶ್ವದ ಶ್ರೀಮಂತ ದೇಶೀಯ ಚುಟುಕು ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿಯೇ ಈ ಸಾಧನೆ ತೋರಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯೂ ಅವರದ್ದಾಯಿತು.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಕ್ರಿಕೆಟ್ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು. 60 ಎಸೆತಗಳಲ್ಲಿ 100 ರನ್ ಕಲೆ ಹಾಕಿದ ಅವರ ಇನ್ನಿಂಗ್ಸ್‌ನಲ್ಲಿ 13 ಬೌಂಡರಿಗಳು ಮತ್ತು 1 ಸಿಕ್ಸರ್ ಸೇರಿದ್ದವು. ಇದೀಗ ಒಟ್ಟು 7 ಶತಕಗಳೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಬಾರಿ ಮೂರಂಕಿ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ, ಐಪಿಎಲ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ ಶತಕ ಬಾರಿಸಿದ ಆರ್ಸಿಬಿಯ ಮೊದಲ ಬ್ಯಾಟರ್ ಕೂಡ ಆಗಿದ್ದಾರೆ.
ಇದನ್ನೂ ಓದಿ : IPL 2023 : ಕ್ಯಾಮರೂನ್ ಗ್ರೀನ್ ಶತಕ, ರೋಹಿತ್ ಅರ್ಧಶತಕ.. ಮುಂಬೈಗೆ ಪ್ಲೇ ಆಫ್ ಆಸೆ ಜೀವಂತ
ಇನ್ನೊಂದೆಡೆ, ಪಂದ್ಯ ಸೋತ ಹಿನ್ನೆಲೆಯಲ್ಲಿ ಈ ವರ್ಷದ ಟೂರ್ನಿಯ ಪ್ಲೇ ಆಫ್ ರೇಸ್‌ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಧಿಕೃತವಾಗಿ ಹೊರಬಿತ್ತು. ಗುಜರಾತ್ ತಂಡದ ಪ್ರತಿಭಾನ್ವಿತ ಯುವ ಬ್ಯಾಟರ್ ಶುಭಮನ್ ಗಿಲ್ ಅವರ ಅಮೋಘ ಶತಕದಾಟದ ಫಲವಾಗಿ ಗುಜರಾತ್ ಗೆಲುವು ಸಾಧಿಸಿತು. ಈ ಮೂಲಕ ಫ್ಲೇ ಆಫ್ ಕನಸು ಕಂಡು ಛಲದಿಂದ ಬ್ಯಾಟಿಂಗ್ ವೈಭವ ಮೆರೆದ ವಿರಾಟ್ ಕೊಹ್ಲಿ ಕನಸು ಮತ್ತೆ ಕಮರಿತು. ಆರ್‌ಸಿಬಿ ಅಭಿಮಾನಿಗಳಿಗೆ ನಿರಾಶೆಯಾಯಿತು.
ಇದನ್ನೂ ಓದಿ : ಕಿಂಗ್ ಕೊಹ್ಲಿ ಶತಕ ವ್ಯರ್ಥ... ಗಿಲ್ ಸೆಂಚುರಿಗೆ ಒಲಿದ ಗೆಲುವು... ಐಪಿಎಲ್ನಿಂದ ಹೊರ ಬಿದ್ದ ಆರ್‌ಸಿಬಿ
ಇದಕ್ಕೂ ಮುನ್ನ, ಟಾಸ್ ಸೋತು ವಿರಾಟ್ ಕೊಹ್ಲಿ ಹಾಗು ನಾಯಕ ಫಾಫ್ ಡು ಪ್ಲೆಸಿಸ್ ಬ್ಯಾಟಿಂಗ್‌ಗಿಳಿದರು. ಫಾಫ್ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇವರ ಜಾಗಕ್ಕೆ ಬಂದ ಮಾಕ್ಸ್ವೆಲ್ ಕೂಡಾ ಹೆಚ್ಚು ಹೊತ್ತು ಕ್ರೀಸ್ ಕಚ್ಚಿ ನಿಲ್ಲಲಿಲ್ಲ. ಕೇವಲ 11 ರನ್ಗೆ ಪೆವಿಲಿಯನ್ ಸೇರಿದರು. ಬಳಿಕ ಬ್ಯಾಟಿಂಗ್ಗಿಳಿದ ಮಹಿಪಾಲ್ ಲೊಮ್ರೋರ್ ಕೇವಲ ಒಂದು ರನ್ ಗಳಿಸಿ ವಿಕೆಟ್ ನೀಡಿದರು. ಆಲ್ ರೌಂಡರ್ ಬ್ರೇಸ್ವೆಲ್ 26 ರನ್ ಕಾಣಿಕೆ ಕೊಟ್ಟರು. ದಿನೇಶ್ ಕಾರ್ತಿಕ್ ಈ ಆವೃತ್ತಿಯಲ್ಲಿ 4ನೇ ಬಾರಿಗೆ ಶೂನ್ಯಕ್ಕೆ ಔಟಾಗುವ ಮೂಲಕ ತಮ್ಮ ಕಳಪೆ ಆಟ ಮುಂದುವರೆಸಿದರು. ಅಂತಿಮವಾಗಿ ಯುವ ಆಟಗಾರ ಅನುಜ್ ರಾವತ್ ಅವರು ವಿರಾಟ್ ಜೊತೆ ಸೇರಿ ಉತ್ತಮ ಜೊತೆಯಾಟ ನೀಡಿದರು. ಕೊಹ್ಲಿ ಆರಂಭಿಕರಾಗಿ ಬಂದು ಅಜೇಯ 101 ರನ್ ಬಾರಿಸಿದರೆ, ಅನುಜ್ 23 ರನ್ ಪೇರಿಸಿದರು. 198 ರನ್ ಟಾರ್ಗೆಟ್ ಗುರಿ ಬೆನ್ನಟ್ಟಿದ್ದ ಗುಜರಾತ್ ತಂಡದ ಆಟಗಾರರು ಭರ್ಜರಿ ಬ್ಯಾಟಿಂಗ್ ಪ್ರರ್ದಶಿಸುವ ಮೂಲಕ ಜಯ ಗಳಿಸಿದರು. ಆರ್‌ಸಿಬಿ ಪಂದ್ಯ ಸೋತು ಪ್ಲೇಆಫ್ ಹಾಗು ಐಪಿಎಲ್ ಟೂರ್ನಿಯಿಂದಲೇ ಹೊರಬಿತ್ತು.
ಇದನ್ನೂ ಓದಿ : RCB vs GT : ಕಿಂಗ್ ಕೊಹ್ಲಿ ಭರ್ಜರಿ ಶತಕ.. ಗುಜರಾತ್ಗೆ 198ರನ್ಗಳ ಗುರಿ
ಪಂಜಾಬ್ ವಿರುದ್ಧ ರಾಜಸ್ಥಾನ ರಾಯಲ್ಸ್ಗೆ ಗೆಲುವು: ಸೋಲಿನೊಂದಿಗೆ ಐಪಿಎಲ್ನಿಂದ ಹೊರಬಿದ್ದ ಕಿಂಗ್ಸ್