ನವದೆಹಲಿ: ಭಾರತೀಯ ಕ್ರಿಕೆಟ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಜೆರ್ಸಿ ಸಂಖ್ಯೆ 18ರೊಂದಿಗೆ ವಿಶೇಷ ಮತ್ತು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ತಮ್ಮ ಜೆರ್ಸಿ ಸಂಖ್ಯೆ 18ರ ಬಗ್ಗೆ ಸ್ವತಃ ಕೊಹ್ಲಿ ಈ ಹಿಂದೆ ಮುಕ್ತವಾಗಿ ಮಾತನಾಡಿದ್ದು, ಇದರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕ್ರಿಕೆಟ್ ಮೈದಾನದಲ್ಲಿ ಜೆರ್ಸಿ ಸಂಖ್ಯೆ 18 ಕಂಡ ಕೂಡಲೇ ಥಟ್ಟನೇ ವಿರಾಟ್ ಕೊಹ್ಲಿ ನೆನಪಿಗೆ ಬರುತ್ತಾರೆ. ಜಗತ್ತಿನಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳಿಗೆ ಜೆರ್ಸಿ ನಂಬರ್ 18 ಕಿಂಗ್ ಕೊಹ್ಲಿ ಅವರದ್ದು ಎಂಬುವುದು ಗೊತ್ತಿದೆ. ಟೀಂ ಇಂಡಿಯಾ ಯಾವುದೇ ಮಾದರಿಯ ಪಂದ್ಯವಾಗಲಿ ಅಥವಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳನ್ನಾಡಿದಾಗಲೂ ಇದೇ ನಂಬರ್ನ ಜೆರ್ಸಿಯನ್ನೇ ವಿರಾಟ್ ತೊಡುತ್ತಾರೆ. ಹೀಗಾಗಿ, ಈ ಜೆರ್ಸಿ ಸಂಖ್ಯೆಯ ಹಿಂದಿನ ರಹಸ್ಯ ಬಗ್ಗೆ ಸಾಮಾನ್ಯವಾಗಿ ಅಭಿಮಾನಿಗಳಲ್ಲಿ ಕುತೂಹಲ ಅಂತೂ ಇದ್ದೆ ಇರುತ್ತದೆ.
ಕೊಹ್ಲಿ ಈ 18 ನಂಬರ್ಅನ್ನೇ ಏಕೆ ಇಷ್ಟ ಪಡುತ್ತಾರೆ ಎಂದು ಅಭಿಮಾನಿಗಳು ಕೂಡ ತಿಳಿದುಕೊಳ್ಳಲು ಬಯಸುತ್ತಾರೆ. ಈ ಜೆರ್ಸಿ ನಂಬರ್ ಬಗ್ಗೆ ಸಾಕಷ್ಟು ಚರ್ಚೆಗಳನ್ನೂ ನಡೆಸಿದ್ದಾರೆ. ಆದರೆ, ಕಿಂಗ್ ವಿರಾಟ್ ಕೊಹ್ಲಿ ಇದೇ ನಂಬರ್ ಜೆರ್ಸಿ ಧರಿಸುವುದರ ಹಿಂದೆ ಪ್ರಮುಖ ಕಾರಣಗಳು ಇವೆ. ಸ್ಮರಣೀಯ ಕ್ಷಣಗಳು ಈ ಸಂಖ್ಯೆಯೊಂದಿಗೆ ಸಂಬಂಧ ಹೊಂದಿವೆ. ವಿರಾಟ್ ಕೊಹ್ಲಿ ಈ ಹಿಂದೆ ತಮ್ಮ ಸಂದರ್ಶನವೊಂದರಲ್ಲಿ ಜೆರ್ಸಿಯ ನಂಬರ್ 18 ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಈ ಸಂಖ್ಯೆಗೆ ಸಂಬಂಧಿಸಿದ ಕೆಲವು ರಹಸ್ಯಗಳನ್ನು ಅವರು ಬಹಿರಂಗಪಡಿಸಿದ್ದಾರೆ.
-
Virat Kohli talking about his Jersey number story.
— Johns. (@CricCrazyJohns) May 18, 2023 " class="align-text-top noRightClick twitterSection" data="
A must watch interview of the King.pic.twitter.com/3dbCVR3bc2
">Virat Kohli talking about his Jersey number story.
— Johns. (@CricCrazyJohns) May 18, 2023
A must watch interview of the King.pic.twitter.com/3dbCVR3bc2Virat Kohli talking about his Jersey number story.
— Johns. (@CricCrazyJohns) May 18, 2023
A must watch interview of the King.pic.twitter.com/3dbCVR3bc2
ಭಾರತೀಯ ಅಂಡರ್-19 ತಂಡದ ಜೆರ್ಸಿಯನ್ನು ಕೊಹ್ಲಿ ಪಡೆದಾಗ, ಆ ಜೆರ್ಸಿಯ ಹಿಂಭಾಗದಲ್ಲಿ ಕೊಹ್ಲಿ ಹೆಸರೊಂದಿಗೆ ನಂಬರ್ 18 ಕೂಡ ಬರೆಯಲಾಗಿತ್ತು. ಆ ದಿನದ ನಂತರ ಈ 18 ಸಂಖ್ಯೆ ಅವರಿಗೆ ವಿಶೇಷವಾಗಿತ್ತು. ಕೊಹ್ಲಿ 2008ರ ಆಗಸ್ಟ್ 18ರಂದು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ವೃತ್ತಿಜೀವನಕ್ಕೆ ಪದಾರ್ಪಣೆ ಮಾಡಿದ್ದರು. ಆ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಿದ್ದರು. ಈ ಮೂಲಕ ಕೊಹ್ಲಿಗೆ 18 ಸಂಖ್ಯೆಯ ಅದೃಷ್ಟ ಒಲಿದಿತ್ತು. ಇದೇ ವೇಳೆ ಕೊಹ್ಲಿ ಸಂಖ್ಯೆ 18ರೊಂದಿಗೆ ಭಾವನಾತ್ಮಕ ಸಂಬಂಧವನ್ನೂ ಹೊಂದಿದ್ದಾರೆ.
ವಿರಾಟ್ ಕೊಹ್ಲಿಯ ತಂದೆ 2006ರ ಡಿಸೆಂಬರ್ 18ರಂದು ನಿಧನರಾಗಿದ್ದರು. ಹೀಗಾಗಿ ನಂಬರ್ 18 ಅನ್ನೋದು ಕೊಹ್ಲಿಗೆ ಭಾವನಾತ್ಮಕವಾದ ಸಂಖ್ಯೆ ಹೌದು. ಆದರೆ, ನಾನು ಈ ಜೆರ್ಸಿ ಸಂಖ್ಯೆಯನ್ನು ಕೇಳಿಯೇ ಇರಲಿಲ್ಲ ಎಂದು ಕೊಹ್ಲಿ ಹೇಳುತ್ತಾರೆ. 2008ರಿಂದಲೂ ಇದೇ ಸಂಖ್ಯೆ ಒಲಿದು ಬಂದಿದೆ. 2008ರಲ್ಲಿ ಅಂಡರ್-19 ವಿಶ್ವಕಪ್ ವಿಜೇತ ತಂಡದ ನಾಯಕ ಕೊಹ್ಲಿ, ಅಂದಿನಿಂದಲೂ ಇದೇ ನಂಬರ್ 18ರ ಜೆರ್ಸಿ ಧರಿಸುತ್ತಾ ಬಂದಿದ್ದಾರೆ. ಟೀಮ್ ಇಂಡಿಯಾಗೆ ಕೊಹ್ಲಿ ಹೆಜ್ಜೆ ಇಟ್ಟಾಗಲೂ 18ನೇ ಸಂಖ್ಯೆ ಜೆರ್ಸಿ ಖಾಲಿ ಇತ್ತು. ಐಪಿಎಲ್ನಲ್ಲೂ ಸಂಖ್ಯೆ 18ರ ಜೆರ್ಸಿ ಸಿಕ್ಕಿದೆ.
ಇದನ್ನೂ ಓದಿ: ಪ್ಲೇಆಫ್ ರೇಸಿಂದ ಹೊರಬಿದ್ದ ಪಂಜಾಬ್: ದೆಹಲಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಗೆಲುವು