ETV Bharat / sports

ಶ್ರೀಮಂತ ಕ್ರಿಕೆಟ್ ಟೂರ್ನಿ IPLಗೆ ಮತ್ತೆರಡು ತಂಡ ಸೇರ್ಪಡೆ..12 ಸಾವಿರ ಕೋಟಿ ರೂ. BCCI ಪಾಲು - ಸಿವಿಸಿ ಕ್ಯಾಪಿಟಲ್ ಪಾರ್ಟ್ನರ್ಸ್

ಮುಂಬರುವ ಐಪಿಎಲ್ ಸೀಸನ್-15ರಲ್ಲಿ ಒಟ್ಟು 10 ತಂಡಗಳು ಕಾಣಸಿಗಲಿವೆ. ಇಂದು ನಡೆದಿರುವ ಮತ್ತೆರಡು ಹೊಸ ತಂಡಗಳು ಬಿಡ್ ಮುಕ್ತಾಯಗೊಂಡು ಸಾವಿರಾರು ಕೋಟಿ ರೂಪಾಯಿಗೆ ಎರಡು ತಂಡ ಖರೀದಿಯಾಗಿದೆ.

two-new-teams-joined-for-upcoming-ipl-season
ಐಪಿಎಲ್​​​ಗೆ ಮತ್ತೆರಡು ಹೊಸ ತಂಡ ಸೇರ್ಪಡೆ.
author img

By

Published : Oct 25, 2021, 8:27 PM IST

Updated : Oct 27, 2021, 12:14 AM IST

ನವದೆಹಲಿ: ಮುಂಬರುವ ಐಪಿಎಲ್​​ ಸೀಸನ್​ನಲ್ಲಿ 10 ಟೀಮ್​ಗಳು ಕಣದಲ್ಲಿರಲಿದೆ. ಇಂದು ಮತ್ತೆರಡು ತಂಡಗಳು ಐಪಿಎಲ್ ಕುಟುಂಬ ಸೇರಿಕೊಂಡಿವೆ. ಅಹಮದಾಬಾದ್ ಹಾಗೂ ಲಖನೌ ತಂಡಗಳು ಐಪಿಎಲ್​​​ನಲ್ಲಿ 9 ಹಾಗೂ 10ನೇ ತಂಡವಾಗಿ ಸೇರಿಕೊಂಡಿವೆ.

ಇಂದು ದುಬೈನಲ್ಲಿರುವ ತಾಜ್ ಹೋಟೆಲ್​​​ನಲ್ಲಿ ನಡೆದ ಬಿಡ್ಡಿಂಗ್​ನಲ್ಲಿ ಸಾವಿರಾರು ಕೋಟಿ ರೂಪಾಯಿಗೆ ಈ ಎರಡು ತಂಡಗಳ ಖರೀದಿ ಯಶಸ್ವಿಯಾಗಿದೆ. ಆರ್ ಪಿ-ಸಂಜೀವ್ ಗೊಯೆಂಕಾ ಗ್ರೂಪ್ (ಆರ್​ಪಿಎಸ್​ಜಿ) (ಲಖನೌ) ಮತ್ತು ಸಿವಿಸಿ ಕ್ಯಾಪಿಟಲ್ ಪಾರ್ಟ್ನರ್ಸ್ (ಅಹಮದಾಬಾದ್) ಹೊಸ ಮಾಲೀಕರಾಗಿ ಐಪಿಎಲ್ ಸೇರಿಕೊಂಡಿದ್ದಾರೆ.

ಮೂಲಗಳ ಪ್ರಕಾರ ಲಖನೌ ತಂಡವನ್ನ ಎಸ್​​​ಪಿಎಸ್​​ಜಿ ಸಂಸ್ಥೆಯು 7 ಸಾವಿರ ಕೋಟಿ ರೂಪಾಯಿಗೆ ಬಿಡ್ ಮಾಡಿದ್ದರೆ, ಇತ್ತ ಅಹಮದಾಬಾದ್ ತಂಡವನ್ನ ಸಿವಿಸಿ ಸುಮಾರು 5,200 ಕೋಟಿ ರೂಪಾಯಿಗೆ ಬಿಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ 12,200 ಕೋಟಿ ರೂಪಾಯಿ ಬಿಸಿಸಿಐಗೆ ಹರಿದು ಬಂದಿದೆ.

ಎರಡೂ ತಂಡಗಳು ಮುಂದಿನ ಸೀಸನ್​​ನಲ್ಲಿ ಕಣಕ್ಕಿಳಿಯಲಿವೆ. ಹೀಗಾಗಿ ಎಲ್ಲ ತಂಡಗಳಿಗೂ ಲೀಗ್​ನಲ್ಲಿ ಪಂದ್ಯಗಳು ಹೆಚ್ಚಾಗಲಿದೆ. ಜೊತೆಗೆ ವೀಕ್ಷಕರ ಸಂಖ್ಯೆಯಲ್ಲೂ ಭಾರಿ ಏರಿಕೆಯಾಗುವ ನಿರೀಕ್ಷೆ ಹುಟ್ಟುಹಾಕಿದೆ.

ಇದನ್ನೂ ಓದಿ: ಅನಿರ್ದಿಷ್ಟಾವಧಿ ವಿರಾಮದ ಬಳಿಕ ಇಂಗ್ಲೆಂಡ್​ ತಂಡಕ್ಕೆ ಸ್ಟೋಕ್ಸ್ ಆಗಮನ: ಆಶಸ್ ಸರಣಿಗೆ ಬೆನ್​​​ ಲಭ್ಯ

Last Updated : Oct 27, 2021, 12:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.