ETV Bharat / sports

2ನೇ ಮಗುವಿನ ತಂದೆಯಾದ ಕೇನ್​ ವಿಲಿಯಮ್ಸನ್​​.. ಗಂಡು ಮಗುವಿಗೆ ಜನ್ಮ ನೀಡಿದ ಸಾರಾ - ಕೇನ್​ ವಿಲಿಯಮ್ಸನ್ ಪತ್ನಿ ಮಗುವಿಗೆ ಜನ್ಮ

ನ್ಯೂಜಿಲ್ಯಾಂಡ್ ಆಟಗಾರ ಕೇನ್​ ವಿಲಿಯಮ್ಸನ್​ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಕ್ರಿಕೆಟರ್ ಮಾಹಿತಿ ಹಂಚಿಕೊಂಡಿದ್ದಾರೆ.

kane williamson blessed with baby boy
kane williamson blessed with baby boy
author img

By

Published : May 23, 2022, 4:10 PM IST

ವೆಲ್ಲಿಂಗ್ಟನ್​​(ನ್ಯೂಜಿಲ್ಯಾಂಡ್​): ಸನ್​​ಸೈಸರ್ಸ್​ ಹೈದರಾಬಾದ್​ ತಂಡದ ಕ್ಯಾಪ್ಟನ್​​ ಕೇನ್​ ವಿಲಿಯಮ್ಸನ್ ಪತ್ನಿ ಸಾರಾ ರಹೀಮ್​ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಕೇನ್​ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪತ್ನಿ ಸಾರಾ ರಹೀಮ್​ ಹಾಗೂ ಮೊದಲ ಮಗಳೊಂದಿಗೆ ಈಗಷ್ಟೇ ಹುಟ್ಟಿರುವ ಮಗುವಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ. "Welcome to the whanau little man!'' ಎಂದು ಕೇನ್​ ಬರೆದುಕೊಂಡಿದ್ದು, ಮುದ್ದಾದ ಗಂಡು ಮಗುವನ್ನ ತಮ್ಮ ಕುಟುಂಬಕ್ಕೆ ಸ್ವಾಗತಿಸಿದ್ದಾರೆ.

ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಕಾರಣ ಕೇನ್​ ವಿಲಿಯಮ್ಸನ್​ ಮೇ. 22ರಂದು ಆಯೋಜನೆಗೊಂಡಿದ್ದ ಪಂಜಾಬ್ ಕಿಂಗ್ಸ್​ ವಿರುದ್ಧದ ಕೊನೆಯ ಲೀಗ್ ಪಂದ್ಯ ಆಡಿರಲಿಲ್ಲ. ಅದಕ್ಕೂ ಮುಂಚಿತವಾಗಿ ಅವರು ನ್ಯೂಜಿಲ್ಯಾಂಡ್​ಗೆ ಪ್ರಯಾಣ ಬೆಳೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಫ್ರಾಂಚೈಸಿ ಟ್ವೀಟ್ ಮಾಡಿ, ಮಾಹಿತಿ ಹಂಚಿಕೊಂಡಿತ್ತು. ಹೀಗಾಗಿ, ಕೊನೆಯ ಪಂದ್ಯವನ್ನ ವೇಗಿ ಭುವನೇಶ್ವರ್ ಕುಮಾರ್ ಮುನ್ನಡೆಸಿದ್ದರು.

ಇದನ್ನೂ ಓದಿ: IPLನಲ್ಲಿ ಹಲ್​​ಚಲ್ ಎಬ್ಬಿಸಿದ 'ಜಮ್ಮು ಎಕ್ಸ್​ಪ್ರೆಸ್​'.. 14 ಪಂದ್ಯದಲ್ಲೂ ಪ್ರಶಸ್ತಿ; ಹೊಸ ದಾಖಲೆ ಬರೆದ ಮಲಿಕ್​

ಕೇನ್​​ ಗಂಡು ಮಗುವಿನ ತಂದೆಯಾಗುತ್ತಿದ್ದಂತೆ ಡೇವಿಡ್​ ವಾರ್ನರ್​, ರಶೀದ್ ಖಾನ್​, ಜೇಸನ್ ಹೋಲ್ಡರ್ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ. 'ಅಭಿನಂದನೆಗಳು ಕೇನ್ ಮಾಮಾ' ಎಂದು ರಶೀದ್ ಖಾನ್​ ಟ್ವೀಟ್ ಮಾಡಿದ್ದಾರೆ. ಇನ್ನೂ ಸನ್​ರೈಸರ್ಸ್ ಹೈದರಾಬಾದ್​ ಫ್ರಾಂಚೈಸಿ ಕೂಡ ಟ್ವೀಟ್ ಮಾಡಿದ್ದು, ನಮ್ಮ ಕುಟುಂಬದಿಂದ ಶುಭಾಶಯಗಳು ಎಂದಿದೆ.

ನ್ಯೂಜಿಲ್ಯಾಂಡ್ ತಂಡ ಜೂನ್​ 2 ರಿಂದ ಇಂಗ್ಲೆಂಡ್​ ವಿರುದ್ಧ ಮೂರು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದ್ದು, ಅದರ ಮುಂದಾಳತ್ವವನ್ನ ಕೇನ್​ ವಿಲಿಯಮ್ಸನ್​ ವಹಿಸಿಕೊಳ್ಳಲಿದ್ದಾರೆ. ಪ್ರಸಕ್ತ ಸಾಲಿನ ಐಪಿಎಲ್​​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಕೇನ್​​, ತಾವು ಆಡಿರುವ 13 ಪಂದ್ಯಗಳಿಂದ ಕೇವಲ 216ರನ್​​ಗಳಿಕೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.