ETV Bharat / sports

Watch: ಆರ್​​ಸಿಬಿಗೆ ಪಂದ್ಯ ಗೆಲ್ಲಿಸಿಕೊಟ್ಟ ಶಹ್ಬಾಜ್ ಅಹ್ಮದ್ ಎಸೆದ 17ನೇ ಓವರ್ ಹೇಗಿತ್ತು ನೋಡಿ!

author img

By

Published : Apr 15, 2021, 6:16 PM IST

ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ ಆರ್​ಸಿಬಿ ಗೆಲುವಿಗೆ ಮುಖ್ಯ ಕಾರಣವಾಗಿದ್ದು ಶಹ್ಬಾಜ್​​ ಅಹ್ಮದ್​. ಅವರು ಎಸೆದ 17ನೇ ಓವರ್​ನಲ್ಲಿ ಎದುರಾಳಿ ತಂಡದ ಮೂರು ವಿಕೆಟ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರಿಂದಲೇ ಆರ್​ಸಿಬಿ ಗೆಲುವಿನ ನಗೆ ಬೀರಿದೆ.

Shahbaz ahmed
Shahbaz ahmed

ಚೆನ್ನೈ: ಆರ್​ಸಿಬಿ ಕೈತಪ್ಪಿ ಹೋಗಿದ್ದ ಪಂದ್ಯವನ್ನ ಮರಳಿ ಟ್ರ್ಯಾಕ್​​ಗೆ ತಂದಿದ್ದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಆಲ್​ರೌಂಡರ್​ ಶಹ್ಬಾಜ್​ ಅಹ್ಮದ್. ಬ್ಯಾಟಿಂಗ್​​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲು ವಿಫಲವಾದರೂ ಬೌಲಿಂಗ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ತಾವು ಎಸೆದ 2 ಓವರ್​ಗಳಲ್ಲಿ ಕೇವಲ 7 ರನ್​ ನೀಡಿ ಪ್ರಮುಖ ಮೂರು ವಿಕೆಟ್​ ಪಡೆದುಕೊಂಡಿರುವ ಶಹ್ಬಾಜ್​ ಇದೀಗ ತಂಡದ ಸ್ಟಾರ್​ ಆಗಿ ಹೊರಹೊಮ್ಮಿದ್ದಾರೆ. ಹೈದರಾಬಾದ್​ ತಂಡಕ್ಕೆ ಕೊನೆಯ 4 ಓವರ್​ಗಳಲ್ಲಿ ಬೇಕಾಗಿದ್ದು 35 ರನ್.​ ಈ ವೇಳೆ 17ನೇ ಓವರ್ ಮಾಡಲು ಕಣಕ್ಕಿಳಿದ ಶಹ್ಬಾಜ್​ ಅಹ್ಮದ್​ ಕೇವಲ 1 ರನ್​ ನೀಡಿ ಮೈದಾನದಲ್ಲಿ ಕಚ್ಚಿ ನಿಂತಿದ್ದ ಮನೀಷ್​ ಪಾಂಡೆ(38), ಬೈರ್​ಸ್ಟೋ(12) ಹಾಗೂ ಸಮದ್​(0) ವಿಕೆಟ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಹೀಗಾಗಿ ಆರ್​ಸಿಬಿ 6 ರನ್​ಗಳ ಗೆಲುವು ದಾಖಲು ಮಾಡಿತು.

ಇದನ್ನೂ ಓದಿ: ಥ್ರಿಲ್ಲಿಂಗ್​​ ಪಂದ್ಯದಲ್ಲಿ ಗೆದ್ದ ಆರ್​ಸಿಬಿ.. ಡ್ರೆಸ್ಸಿಂಗ್​ ರೂಂನಲ್ಲಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಕೊಹ್ಲಿ!

ಬೆಂಗಳೂರು ನೀಡಿದ್ದ 149 ರನ್​ಗಳ ಗುರಿ ಬೆನ್ನತ್ತಿದ್ದ ಹೈದರಾಬಾದ್​ ತಂಡ ಆರಂಭಿಕ ಆಘಾತದ ನಡುವೆ ಕೂಡ ವಾರ್ನರ್​ ಹಾಗೂ ಮನೀಷ್​ ಪಾಂಡೆ(38) ಹಾಗೂ ಡೇವಿಡ್​ ವಾರ್ನರ್​​(54) ರನ್​ ಗಳಿಕೆ ಮಾಡಿ ತಂಡಕ್ಕೆ ಗೆಲುವಿನ ಭರವಸೆ ನೀಡಿದ್ದರು. ಆದರೆ ವಾರ್ನರ್​ ವಿಕೆಟ್​ ಪಡೆದುಕೊಳ್ಳುವಲ್ಲಿ ಜೆಮಿಸ್ಸನ್​ ಯಶಸ್ವಿಯಾದರೆ, ಮನೀಷ್​ ಪಾಂಡೆ ಸೇರಿ ಉಳಿದ ಪ್ರಮುಖ ಮೂರು ವಿಕೆಟ್​ ಪಡೆದುಕೊಳ್ಳುವಲ್ಲಿ ಶಹ್ಬಾಜ್​ ಯಶಸ್ವಿಯಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.