ETV Bharat / sports

ಈ ಸಲವೂ ಅವಕಾಶ ವಂಚಿತನಾದ ಅರ್ಜುನ್​.. ಪುತ್ರನಿಗೆ ಸಚಿನ್ ತೆಂಡೂಲ್ಕರ್ ನೀಡಿರುವ ಸಲಹೆ ಏನು!? - ಸಚಿನ್ ತೆಂಡೂಲ್ಕರ್ ಪುತ್ರ

ಐಪಿಎಲ್​​ನಲ್ಲಿ ಬರೋಬ್ಬರಿ 28 ಪಂದ್ಯಗಳಲ್ಲೂ ಬೆಂಚ್​ ಕಾಯ್ದಿರುವ ಅರ್ಜುನ್ ತೆಂಡೂಲ್ಕರ್​ಗೆ ತಂದೆ ಸಚಿನ್ ತೆಂಡೂಲ್ಕರ್ ಮಹತ್ವದ ಕಿವಿಮಾತು ಹೇಳಿದ್ದಾರೆ.

Sachin Tendulkar advice to son arjun
Sachin Tendulkar advice to son arjun
author img

By

Published : May 24, 2022, 8:59 PM IST

ಮುಂಬೈ: ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಕಳೆದ ಎರಡು ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್​​ ತಂಡಕ್ಕೆ ಆಯ್ಕೆಯಾಗುತ್ತಿರುವ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಈ ಸಲವೂ ಆಡುವ 11ರ ಬಳಗದಿಂದ ಅವಕಾಶ ವಂಚಿತರಾಗಿದ್ದಾರೆ. ಮುಂಬೈ ತಂಡ ಆಡಿರುವ 14 ಪಂದ್ಯಗಳ ಪೈಕಿ ಯಾವುದೇ ಪಂದ್ಯದಲ್ಲೂ 11ರ ಬಳಗದಲ್ಲಿ ಚಾನ್ಸ್ ಪಡೆದುಕೊಳ್ಳಲಿಲ್ಲ. ಹೀಗಾಗಿ, ಅರ್ಜುನ್ ತೆಂಡೂಲ್ಕರ್​ ನೆಟ್​​ನಲ್ಲಿ ಅಭ್ಯಾಸ ನಡೆಸಿ, ಬೆಂಚ್​ ಕಾಯುವಂತಾಯಿತು. ಇದರಿಂದ ಮನನೊಂದಿರುವ ಅವರಿಗೆ ತಂದೆ ಸಚಿನ್​​ ಅತ್ಯುತ್ತಮ ಸಲಹೆ ನೀಡಿದ್ದಾರೆ.

ಮುಂಬೈ ಇಂಡಿಯನ್ಸ್​ ತಂಡದ ಮೆಂಟರ್​ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಚಿನ್ ತೆಂಡೂಲ್ಕರ್​​, ಪುತ್ರನಿಗೆ ಕೇವಲ ಆಟದ ಬಗ್ಗೆ ಗಮನ ಹರಿಸುವಂತೆ ಕಿವಿಮಾತು ಹೇಳಿದ್ದಾರೆ. ಆಡುವ 11ರ ಬಳಗದಲ್ಲಿ ಅವಕಾಶ ಪಡೆದುಕೊಳ್ಳುವುದು ತಂಡದ ಒಂದು ಭಾಗ. ಆಟದ ಬಗ್ಗೆ ಮಾತ್ರ ಗಮನ ಹರಿಸು, ಬದಲಾಗಿ ಆಯ್ಕೆಯಾಗುವುದರ ಬಗ್ಗೆ ಅಲ್ಲ ಎಂದು ತಿಳಿಸಿದ್ದಾರೆ.

ಅರ್ಜುನ್ ತೆಂಡೂಲ್ಕರ್​ ಲೆಫ್ಟ್​ ಆರ್ಮ್ ವೇಗದ ಬೌಲರ್​​ ಆಗಿದ್ದು, ಮೆಗಾ ಹರಾಜಿನಲ್ಲಿ 30 ಲಕ್ಷ ರೂಪಾಯಿ ನೀಡಿ, ಮುಂಬೈ ಫ್ರಾಂಚೈಸಿ ಇವರನ್ನ ಖರೀದಿ ಮಾಡಿತ್ತು. ಆದರೆ, ಆಡುವ 11ರ ಬಳಗದಲ್ಲಿ ಮಾತ್ರ ಅವಕಾಶ ಸಿಕ್ಕಿರಲಿಲ್ಲ. ಈ ಸಲ ರಾಜಸ್ಥಾನ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಬದಲಿ ಆಟಗಾರರಿಗೆ ರೋಹಿತ್ ಶರ್ಮಾ ಮಣೆ ಹಾಕಿದ್ದರು.

ಇದನ್ನೂ ಓದಿ: IPLನಲ್ಲಿಂದು GT vs RR ಮೊದಲ ಕ್ವಾಲಿಫೈಯರ್​​: ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಗುಜರಾತ್​​

ಪುತ್ರನ ಆಯ್ಕೆ ವಿಚಾರವಾಗಿ ಖುದ್ದಾಗಿ ವಿಡಿಯೋ ಹರಿಬಿಟ್ಟಿರುವ ಸಚಿನ್ ತೆಂಡೂಲ್ಕರ್​, ಅರ್ಜುನ್​ ಕೇವಲ ಆಟದ ಬಗ್ಗೆ ಗಮನ ಹರಿಸಬೇಕು. ಹೊರತಾಗಿ ಆಯ್ಕೆಯಾಗುವುದರ ಬಗ್ಗೆ ಅಲ್ಲ. ನಾನು ಆಯ್ಕೆ ಸಮಿತಿಯ ವಿಚಾರದಲ್ಲಿ ಭಾಗಿಯಾಗಲು ಇಷ್ಟಪಡಲ್ಲ. ಅದು ಮ್ಯಾನೇಜ್​ಮೆಂಟ್​​ಗೆ ಬಿಟ್ಟಿರುವ ವಿಚಾರ ಎಂದು ಹೇಳಿದ್ದಾರೆ. ಪ್ರಸಕ್ತ ಸಾಲಿನ ಐಪಿಎಲ್​ನಲ್ಲಿ ಐದು ಸಲದ ಚಾಂಪಿಯನ್ ಮುಂಬೈ ಇಂಡಿಯನ್ಸ್​ ಆಡಿರುವ 14 ಪಂದ್ಯಗಳಿಂದ ಕೇವಲ 4ರಲ್ಲಿ ಗೆಲುವು ದಾಖಲು ಮಾಡಿ, 8 ಪಾಯಿಂಟ್ ಗಳಿಕೆ ಮಾಡಿ, ಅಭಿಯಾನ ಮುಗಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.