ETV Bharat / sports

ಹಸರಂಗ ಬೌಲಿಂಗ್​ಗೆ ಬೆಚ್ಚಿದ ಹೈದರಾಬಾದ್​.. ಆರ್​ಸಿಬಿಗೆ 67 ರನ್​ಗಳ ಭರ್ಜರಿ ಗೆಲುವು - ಸನ್​ರೈಸರ್ಸ್​ ವಿರುದ್ಧ ಆರ್​ಸಿಬಿಗೆ ಗೆಲುವು

ಆರ್​ಸಿಬಿ ಮತ್ತು ಸನ್​ರೈಸರ್ಸ್ ಹೈದರಾಬಾದ್​ ಮಧ್ಯೆ ನಡೆದ ಪಂದ್ಯದಲ್ಲಿ ಆರ್​ಸಿಬಿ 67 ರನ್​ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಕಳೆದ ಪಂದ್ಯದಲ್ಲಿ 68 ರನ್​ಗಳಿಗೆ ಕುಸಿತ ಕಂಡು 9 ವಿಕೆಟ್​ಗಳ ಸೋಲಿಗೆ ಸೇಡು ತೀರಿಸಿಕೊಂಡಿತು.

royal-challengers
ಆರ್​ಸಿಬಿಗೆ 67 ರನ್​ಗಳ ಗೆಲುವು
author img

By

Published : May 8, 2022, 8:14 PM IST

ನವಿ ಮುಂಬೈ: ವನಿದು ಹಸರಂಗ ಎಂಬ ಸ್ಪಿನ್​ ಮಾಂತ್ರಿಕನ ಬಲೆಗೆ ಬಿದ್ದ ಸನ್​ರೈಸರ್ಸ್​ ಹೈದರಾಬಾದ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಮಂಡಿಯೂರಿದೆ. ಆರ್​ಸಿಬಿ ನೀಡಿದ 192 ರನ್​ಗಳ ಬೃಹತ್​ ಮೊತ್ತ ಬೆನ್ನಟ್ಟುವಲ್ಲಿ ವಿಫಲವಾದ ಸನ್​ರೈಸರ್ಸ್​ 20 ಓವರ್​ಗಳಲ್ಲಿ 125 ರನ್​ ಗಳಿಸಿ ಆಲೌಟ್​ ಆಯಿತು. 67 ರನ್​ಗಳ ಗೆಲುವು ಸಾಧಿಸುವ ಮೂಲಕ ಆರ್​ಸಿಬಿ ಕಳೆದ ಪಂದ್ಯಕ್ಕೆ ಸೋಲಿಗೆ ಮುಯ್ಯಿ ತೀರಿಸಿಕೊಂಡಿತು.

ಡು ಪ್ಲೆಸಿಸ್​ ಹೋರಾಟ: ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ ತಂಡವನ್ನು ನಾಯಕ ಡು ಪ್ಲೆಸಿಸ್​ ಬೃಹತ್​ ಮೊತ್ತದತ್ತ ಕೊಂಡೊಯ್ದರು. 50 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್​ ಸಮೇತ 73 ರನ್​ (ಔಟಾಗದೇ) ಗಳಿಸಿ ಮಿಂಚಿದರು. ನಾಯಕನಿಗೆ ಉತ್ತಮ ಸಾಥ್​ ನೀಡಿದ ಯುವ ಆಟಗಾರ ರಜತ್​ ಪಾಟೀದಾರ್​ ಅರ್ಧಶತಕ ಬಾರಿಸುವ ಅಂಚಿನಲ್ಲಿ ಔಟಾದರೂ ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು. 38 ಎಸೆತಗಳಲ್ಲಿ 48 ರನ್​ ಬಾರಿಸಿದ ಪಾಟೀದಾರ್​, 4 ಬೌಂಡರಿ, 2 ಸಿಕ್ಸರ್​ ಸಿಡಿಸಿದರು.

ಮಿಂಚು ಹರಿಸಿದ ಮ್ಯಾಕ್ಸಿ, ಕಾರ್ತಿಕ್​: ಪಾಟೀದಾರ್​ ಔಟಾದ ಬಳಿಕ ಮೈದಾನಕ್ಕೆ ಬಂದ ಗ್ಲೆನ್​ ಮ್ಯಾಕ್ಸವೆಲ್​ ಮೊದಲ ಎಸೆತದಿಂದಲೇ ದಂಡಿಸಲು ಶುರು ಮಾಡಿದರು. 3 ಬೌಂಡರಿ, 2 ಸಿಕ್ಸರ್​ ನೆರವಿನಿಂದ 33 ರನ್​ ಗಳಿಸಿ ಕಾರ್ತಿಕ್​ ತ್ಯಾಗಿಗೆ ವಿಕೆಟ್​ ಒಪ್ಪಿಸಿದರು. ಬಳಿಕ ನಡೆದಿದ್ದೇ ದಿನೇಶ್​ ಕಾರ್ತಿಕ್​ ಆಟ.

ಇನ್ನಿಂಗ್ಸ್​ನ 2 ಓವರ್​ ಬಾಕಿ ಇದ್ದಾಗ ಅಂಗಳಕ್ಕಿಳಿದ ದಿನೇಶ್​ ಕಾರ್ತಿಕ್​ ಕೇವಲ 8 ಎಸೆತಗಳಲ್ಲಿ 4 ಸಿಕ್ಸರ್​ 1 ಬೌಂಡರಿ ಬಾರಿಸಿ 30 ರನ್​ಗಳನ್ನು ಚಚ್ಚಿದರು. ಇದು ತಂಡ ಕೊನೆಯ ಓವರ್​ಗಳಲ್ಲಿ ಬೃಹತ್​ ಮೊತ್ತ ಪೇರಿಸಲು ಸಾಧ್ಯವಾಯಿತು.

ಸೊನ್ನೆಗೆ ಔಟಾಗಿ ರ್ನಿಮಿಸಿದ ವಿರಾಟ್​ ಕೊಹ್ಲಿ
ಸೊನ್ನೆಗೆ ಔಟಾಗಿ ರ್ನಿಮಿಸಿದ ವಿರಾಟ್​ ಕೊಹ್ಲಿ

3ನೇ ಬಾರಿ ಸೊನ್ನೆ ಸುತ್ತಿದ ಕೊಹ್ಲಿ: ಇನ್ನು ಸತತವಾಗಿ ಬ್ಯಾಟಿಂಗ್​ ವೈಫಲ್ಯ ಅನುಭವಿಸುತ್ತಿರುವ ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ ತಮ್ಮ ಹೆಸರಿಗೆ ತಕ್ಕಂತೆ ಆಟವಾಡುವಲ್ಲಿ ಮತ್ತೊಮ್ಮೆ ವಿಫಲವಾದರು. ಇನ್ನಿಂಗ್ಸ್​ನ ಮೊದಲ ಓವರ್​ ಎಸೆದ ಜಗದೀಶನ್​ ಸುಚಿತ್​ರ ಮೊದಲ ಎಸೆತದಲ್ಲೇ ಕೇನ್​ ವಿಲಿಯಮ್ಸನ್​ಗೆ ಕ್ಯಾಚ್​ ನೀಡಿದರು. ಈ ಸೀಸನ್​ನಲ್ಲಿ ಕೊಹ್ಲಿ 3 ನೇ ಬಾರಿಗೆ ಸೊನ್ನೆ ಸುತ್ತಿದರು.

ಬ್ಯಾಟಿಂಗ್​ ವೈಫಲ್ಯ: 192 ರನ್​ಗಳ ಬೃಹತ್​ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್​ ತಂಡ ಆರಂಭಿಕ ಆಘಾತ ಅನುಭವಿಸಿತು. 1 ರನ್​ ಗಳಿಸುವಷ್ಟರಲ್ಲಿ ಅಭಿಷೇಕ್​ ಶರ್ಮಾ, ನಾಯಕ ಕೇನ್​ ವಿಲಿಯಮ್ಸನ್​ ವಿಕೆಟ್​ ಒಪ್ಪಿಸಿದರು. ರಾಹುಲ್​ ತ್ರಿಪಾಠಿ 58, ಆ್ಯಡನ್ ಮಾರ್ಕ್ರಮ್​ 21, ನಿಕೋಲಸ್​ ಪೂರನ್​ 19 ರನ್​ ಗಳಿಸಿದ್ದು ಬಿಟ್ಟರೆ, ಉಳಿದ 8 ಬ್ಯಾಟ್ಸಮನ್​ಗಳು ಎರಡಂಕಿ ಮೊತ್ತ ದಾಟುವಲ್ಲಿ ವಿಫಲರಾದರು.

ಐದು ವಿಕೆಟ್​ ಕಿತ್ತ ಸಂಭ್ರಮದಲ್ಲಿ ವನಿಂದು ಹಸರಂಗ

ಹಸರಂಗ 'ಸನ್​'ಸ್ಟ್ರೋಕ್​: ಹೈದರಾಬಾದ್​ ತಂಡಕ್ಕೆ ಸನ್​ಸ್ಟ್ರೋಕ್​ ನೀಡಿದ್ದು ಆರ್​ಸಿಬಿಯ ವನಿಂದು ಹಸರಂಗ. ತಂಡವನ್ನು ಇನ್ನಿಲ್ಲದಂತೆ ಕಾಡಿದ ಹಸರಂಗ 4 ಓವರ್​ಗಳಲ್ಲಿ 5 ವಿಕೆಟ್​ ಕಿತ್ತು ಬ್ಯಾಟಿಂಗ್​ ಬೆನ್ನೆಲುಬು ಮುರಿದರು.

ಓದಿ: ದಿಢೀರ್‌ ಸ್ವದೇಶಕ್ಕೆ ತೆರಳಿದ ರಾಜಸ್ಥಾನ್ ತಂಡದ ಶಿಮ್ರಾನ್ ಹೆಟ್ಮೆಯರ್: ಇಲ್ಲಿದೆ ಕಾರಣ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.