ETV Bharat / sports

ನನ್ನ ತಂದೆ 2-3 ದಿನ ಊಟ ಮಾಡಿರಲಿಲ್ಲ: ಕಷ್ಟದ ದಿನ ಸ್ಮರಿಸಿ, ಸೋಲಿನ ಬಳಿಕ ಕಣ್ಣೀರಿಟ್ಟ ರಿಂಕು ಸಿಂಗ್​! - ಇಂಡಿಯನ್ ಪ್ರೀಮಿಯರ್ ಲೀಗ್

ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚು ಹರಿಸಿರುವ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದ ರಿಂಕು ಸಿಂಗ್ ಇದೀಗ ಕ್ರಿಕೆಟ್ ಪ್ರಿಯರ ಮನ ಗೆದ್ದಿದ್ದಾರೆ.

Rinku Singh IPL
Rinku Singh IPL
author img

By

Published : May 19, 2022, 4:24 PM IST

ಮುಂಬೈ: ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಲಖನೌ ಸೂಪರ್ ಜೈಂಟ್ಸ್​​ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ರಿಂಕು ಸಿಂಗ್​ ತಂಡವನ್ನ ಯಶಸ್ವಿನ ದಡ ಸೇರಿಸುವಲ್ಲಿ ವಿಫಲರಾದರು. ಆದರೂ, ಇವರ ಬ್ಯಾಟಿಂಗ್​​ ವೈಖರಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ತಾವು ಎದುರಿಸಿದ ಕೇವಲ 15 ಎಸೆತಗಳಲ್ಲಿ ಬರೋಬ್ಬರಿ 40 ರನ್​ಗಳಿಕೆ ಮಾಡಿದ ರಿಂಕು ಸಿಂಗ್​, ಕೊನೆ ಓವರ್​​ನಲ್ಲಿ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು.

ಮೂಲತಃ ಉತ್ತರ ಪ್ರದೇಶದ ರಿಂಕು ಸಿಂಗ್​ ಅನೇಕರಿಗೆ ಸ್ಫೂರ್ತಿ. ಇವರ ತಂದೆ ಮನೆಯಿಂದ ಮನೆಗೆ ಗ್ಯಾಸ್​​ ತಲುಪಿಸುವ ಕೆಲಸ ಮಾಡಿದರೆ, ಸಹೋದರ ಆಟೋ ರಿಕ್ಷಾ ಓಡಿಸುತ್ತಾರೆ. ಭಾರತೀಯ ಕ್ರಿಕೆಟ್ ಮಂಡಳಿ ಇವರ ಮೇಲೆ ಮೂರು ತಿಂಗಳ ಕಾಲ ನಿಷೇಧ ಸಹ ಹೇರಿತ್ತು.

ರಾತ್ರೋರಾತ್ರಿ ಹಿರೋ ಆದ ರಿಂಕು ಸಿಂಗ್​: ಲಖನೌ ಸೂಪರ್ ಜೈಂಟ್ಸ್​ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ತಾವು ಎದುರಿಸಿದ 15 ಎಸೆತಗಳಲ್ಲಿ 40 ರನ್​​ಗಳಿಸುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದಾರೆ. 2019ರಲ್ಲಿ ಅಬುಧಾಬಿಯಲ್ಲಿ ನಡೆದ ಟಿ- 20 ಕ್ರಿಕೆಟ್​​ನಲ್ಲಿ ಭಾಗಿಯಾಗಿದ್ದ ಇವರ ಮೇಲೆ ಬಿಸಿಸಿಐ ಮೂರು ತಿಂಗಳ ಅಮಾನತು ಹೇರಿತ್ತು. ಇದರ ಮಧ್ಯೆ ಸುಮಾರು 6 - 7 ತಿಂಗಳ ಕಾಲ ಗಾಯದ ಸಮಸ್ಯೆ ಎದುರಿಸುವಂತಾಯಿತು.

  • Agony for Rinku Singh and KKR. Tried their best in the final game, but couldn't cross the line. pic.twitter.com/S2u8VF1dJp

    — Mufaddal Vohra (@mufaddal_vohra) May 18, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಕಪ್​ ಗೆದ್ದಷ್ಟೇ ಖುಷಿ: ಲಖನೌ ಗೆಲ್ಲುತ್ತಿದ್ದಂತೆ ಡಗೌಟ್​​ನಲ್ಲಿ ಗೌತಮ್ ಗಂಭೀರ್​ ಸಖತ್ ಸಂಭ್ರಮಾಚರಣೆ

ಕಳೆದ ಐದು ವರ್ಷಗಳ ಕಾಲ ಇವರ ವೃತ್ತಿ ಬದುಕು ತುಂಬಾ ಸವಾಲಿನಿಂದ ಕೂಡಿದ್ದು, ಈ ಹಿಂದೆ ಗಾಯಗೊಂಡಿದ್ದ ಸಂದರ್ಭದಲ್ಲಿ ಇವರ ತಂದೆ 2-3 ದಿನ ಊಟ ಸಹ ಮಾಡಿರಲಿಲ್ವಂತೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವಿಡಿಯೋ ತುಣುಕನ್ನ ಕೆಕೆಆರ್​ ಇದೀಗ ಅಧಿಕೃತ ಟ್ವಿಟರ್​​​​​ ಪೇಜ್​​ನಲ್ಲಿ ಹಾಕಿಕೊಂಡಿದೆ. 2017ರಲ್ಲಿ ಪಂಜಾಬ್​ ತಂಡದ ಪರ ಆಯ್ಕೆಯಾದ ಇವರಿಗೆ ಯಾವುದೇ ರೀತಿಯ ಅವಕಾಶ ಸಿಗಲಿಲ್ಲ, 2018ರ ಹರಾಜಿನಲ್ಲಿ ಕೆಕೆಆರ್ 80 ಲಕ್ಷ ರೂ. ನೀಡಿ ಖರೀದಿ ಮಾಡಿತ್ತು. 2021ರವರೆಗೆ ಕೆಕೆಆರ್ ತಂಡದಲ್ಲಿದ್ದರೂ, ಯಾವುದೇ ಪಂದ್ಯ ಆಡಿರಲಿಲ್ಲ. ಇದರ ಮಧ್ಯೆ ಮೊಣಕಾಲು ಗಾಯದಿಂದಾಗಿ ಐಪಿಎಲ್​ನೊಂದ ಹೊರಬಿದ್ದರು. ಇವರ ಸ್ಥಾನಕ್ಕೆ ಗುರುಕೀರತ್​ ಸಿಂಗ್ ನೇಮಕಗೊಂಡಿದ್ದರು.

2022ರ ಮೆಗಾ ಹರಾಜಿನಲ್ಲಿ ಈ ಪ್ಲೇಯರ್​ಗೆ ಕೆಕೆಆರ್​ ಮತ್ತೊಮ್ಮೆ ಮಣೆ ಹಾಕಿ ಖರೀದಿ ಮಾಡಿತ್ತು. ಕ್ಯಾಪ್ಟನ್‌ ಶ್ರೇಯಸ್‌ ಅಯ್ಯರ್‌ ತಂಡದ ಪ್ರತಿಭಾನ್ವಿತ ಆಟಗಾರನಿಗೆ ಅಗತ್ಯ ಅವಕಾಶ ನೀಡಿತು. ಅದರ ಸದುಪಯೋಗ ಪಡೆಸಿಕೊಂಡ ಪ್ಲೇಯರ್ ನಿನ್ನೆಯ ಪಂದ್ಯದಲ್ಲಿ ಮಿಂಚಿನ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಕೆಕೆಆರ್‌ ವೀರೋಚಿತ ಸೋಲುಂಡರೂ ರಿಂಕು ಸಿಂಗ್‌ ಹೋರಾಟ ಕ್ರಿಕೆಟ್‌ ಪ್ರಿಯರ ಮನ ಗೆದ್ದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.