ETV Bharat / sports

ಜೂ.ಪಾಂಟಿಂಗ್​ ಬ್ಯಾಟಿಂಗ್​: ಡೆಲ್ಲಿಯ ಮುಂದಿನ ಆಟಗಾರ ಎಂದ ಪಂತ್​

author img

By

Published : Apr 14, 2023, 6:52 PM IST

ರಿಕ್ಕಿ ಪಾಂಟಿಂಗ್​ ಮಗ ಫ್ಲೆಚರ್ ವಿಲಿಯಂ ಪಾಂಟಿಂಗ್ ನೆಟ್ಸ್​ನಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ricky ponting son batting practice
ಜೂನಿಯರ್​ ಪಾಂಟಿಂಗ್​ ಬ್ಯಾಟಿಂಗ್​: ಡೆಲ್ಲಿಯ ಮುಂದಿನ ಆಟಗಾರ ಎಂದ ಪಂತ್​

ಬೆಂಗಳೂರು: ಕ್ರೀಡೆ ಮತ್ತು ಕಲೆ ಹೆಚ್ಚಾಗಿ ವಂಶಪಾರಂಪರ್ಯವಾಗಿ ಮುಂದುವರೆಯುತ್ತದೆ. ಅದಕ್ಕೆ ಕಾರಣ ಮನೆಯಲ್ಲಿ ಮಕ್ಕಳ ಬೆಳವಣಿಗೆ ಇರುವ ಪೂರಕ ಪರಿಸರ. ಪೋಷಕರ ವೃತ್ತಿಯೂ ಹೆಚ್ಚಾಗಿ ಮಕ್ಕಳ ಮೇಲೆ ಗಾಢ ಪರಿಣಾಮ ಬೀರಿರುತ್ತದೆ. ಸಿನಿಮಾ ನಟರ ಮಕ್ಕಳು ಅದೇ ರಂಗಕ್ಕೆ ಪ್ರವೇಶಿಸುವುದು, ಕ್ರೀಡಾಪಟುಗಳ ಮಕ್ಕಳು ಪೋಷಕರನ್ನು ಅನುಸರಿಸುವುದು ಸಾಮಾನ್ಯವಾಗಿದೆ.

ಇದೀಗ, ಡೆಲ್ಲಿ ಕ್ಯಾಪಿಟಲ್ಸ್​ ಕೋಚ್​ ರಿಕ್ಕಿ ಪಾಂಟಿಂಗ್​ ಮಗ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬ್ಯಾಟಿಂಗ್​ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಇನ್​ಸ್ಟಾಗ್ರಾಂ ಮತ್ತು ಟ್ವಿಟರ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಹಂಚಿಕೊಂಡಿದೆ. ಇದಕ್ಕೆ ಭರ್ಜರಿ ಕಾಮೆಂಟ್​ಗಳು ಬರುತ್ತಿವೆ. ಅದರಲ್ಲಿ ವಿಶೇಷವಾಗಿ ಡೆಲ್ಲಿಯ ಮಾಜಿ ನಾಯಕ ರಿಷಬ್​ ಪಂತ್​ ಕಾಮೆಂಟ್​ ಮಾಡಿದ್ದಾರೆ.

"ಹಹ್ಹಹ್ಹ.. ಬಾಲಕನನ್ನು ತಂಡಕ್ಕೆ ಆಯ್ಕೆ ಮಾಡುತ್ತಿದ್ದೀರಿ ರಿಕ್ಕಿ. ಒಂದು ದಿನ ಅವನು ಬಂದು ಡೆಲ್ಲಿ ತಂಡಕ್ಕಾಗಿ ಆಡಬಹುದು" ಎಂದು ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಸ್​ನಲ್ಲಿ ಪಾಂಟಿಂಗ್​ ಮಗ ಪ್ಯಾಡ್​, ಗ್ಲೌಸ್​ ಹಾಕಿಕೊಂಡು ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ತಂದೆಯೇ ಮಗನಿಗೆ ಬೌಲಿಂಗ್​ ಮಾಡುತ್ತಿದ್ದು, ಸಲಹೆ ನೀಡುತ್ತಿದ್ದಾರೆ. ಮುಂದೊಂದು ದಿನ ತಂಡವನ್ನು ಪ್ರತಿನಿಧಿಸಿದರೆ ಅಚ್ಚರಿಯೂ ಅಲ್ಲ.

ರಿಕ್ಕಿ ಪಾಂಟಿಂಗ್​ ಅವರ ಮಗನಿಗೆ ಅವರದೇ ಕಿಟ್​ ಬ್ಯಾಗ್​ ಇದೆ. ಅದನ್ನು ಅವರೇ ಪ್ರಯಾಣದ ವೇಳೆ ತೆಗೆದುಕೊಂಡು ಹೋಗುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು. ತಂದೆಯೇ ಮಗನಿಗೆ ಪ್ಯಾಡ್​ ಮತ್ತು ಶೂಗಳನ್ನು ಕಟ್ಟಿ ಅಭ್ಯಾಸಕ್ಕೆ ತಯಾರಿ ಮಾಡುತ್ತಾರೆ. ನಂತರ ತಂದೆಯ ಬೌಲ್​ಗೆ ಫ್ಲೆಚರ್ ವಿಲಿಯಂ ಪಾಂಟಿಂಗ್ ಭರ್ಜರಿ ಬ್ಯಾಟಿಂಗ್​ ಮಾಡಿದ್ದಾರೆ.

ವಿರಾಟ್​ ಭೇಟಿಯಾದ ಜೂ. ಪಾಂಟಿಂಗ್​: ನಾಳೆ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಆರ್​ಸಿಬಿ ಪಂದ್ಯ ಇದ್ದು, ಡೆಲ್ಲಿ ಸಿಲಿಕಾನ್​ ಸಿಟಿಗೆ ಬಂದಿದೆ. ಈ ವೇಳೆ ವಿರಾಟ್​ ಅವರನ್ನು ರಿಕ್ಕಿ ಪಾಂಟಿಂಗ್​ ಭೇಟಿಯಾಗಿ ಕೆಲ ಮಾತುಕತೆ ನಡೆಸಿದ್ದಾರೆ. ಫ್ಲೆಚರ್ ವಿಲಿಯಂ ಪಾಂಟಿಂಗ್ ಸಹ ಇದ್ದು, ವಿರಾಟ್​ ಅವರು ಫ್ಲೆಚರ್ ವಿಲಿಯಂ ಅವರನ್ನು ಮಾತನಾಡಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ ವಿಡಿಯೋವನ್ನು ಹಂಚಿಕೊಂಡಿದೆ.

ಪಾಂಟಿಂಗ್​ ದಾಖಲೆ ಮುರಿದ ವಿರಾಟ್​: ಡಿಸೆಂಬರ್ 2022 ರಲ್ಲಿ ಚಟ್ಟೋಗ್ರಾಮ್‌ನಲ್ಲಿ ಬಾಂಗ್ಲಾದೇಶದ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್​ ಶತಕ ದಾಖಲಿಸುವ ಮೂಲಕ ಪಾಂಟಿಂಗ್​ ದಾಖಲೆ ಮುರಿದರು. ಏಕದಿನ ಮಾದರಿಯಲ್ಲಿ ಅದು ವಿರಾಟ್​ ಅವರ 44ನೇ ಶತಕವಾಗಿತ್ತು. ಸಚಿನ್​ ನಂತರ ಈಗ ಹೆಚ್ಚು ಶತಕ ದಾಖಲಿಸಿದ ಪಟ್ಟಿಯಲ್ಲಿ ವಿರಾಟ್​ ಇದ್ದಾರೆ.

ಕಳೆದ ಎರಡು ವರ್ಷಗಳಿಂದ ಬ್ಯಾಟಿಂಗ್​ ವೈಫಲ್ಯ ಕಾಣುತ್ತಿದ್ದ ವಿರಾಟ್​ 2022ರ ಡಿಸೆಂಬರ್​ನಲ್ಲಿ ಫಾರ್ಮ್​ಗೆ ಮರಳಿದರು. ನಂತರ ಏಕದಿನ, ಟಿ20 ಮತ್ತು ಟೆಸ್ಟ್​ ಮಾದರಿಯಲ್ಲಿ ಶತಕ ದಾಖಲಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲೂ ಉತ್ತಮ ಬ್ಯಾಟಿಂಗ್​ ಮಾಡುತ್ತಿದ್ದು, ಮೂರು ಪಂದ್ಯದಲ್ಲಿ ಎರಡು ಅರ್ಧಶತಕ ಸಹಿತ 164 ರನ್​ ಗಳಿಸಿದ್ದಾರೆ.

ಇದನ್ನೂ ಓದಿ: ಬೆಟ್ಟಿಂಗ್​ ಸಂಸ್ಥೆಯ ರಾಯಭಾರಿಯಾಗಿ ವಿವಾದದಲ್ಲಿ ಸಿಲುಕಿದ ಬ್ರೆಂಡನ್‌ ಮೆಕಲಮ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.