ETV Bharat / sports

CSK - RCB ಪಂದ್ಯದ ವೇಳೆ ಅಪರೂಪದ ಘಟನೆ​.. ಆರ್​ಸಿಬಿ ಜೆರ್ಸಿ ತೊಟ್ಟು ಲವ್​ ಪ್ರಪೋಸ್ ಮಾಡಿದ ಯುವತಿ! - ಗೆಳೆಯನಿಗೆ ಪ್ರಪೋಸ್ ಮಾಡಿದ ಗೆಳತಿ

ಪುಣೆಯ ಮೈದಾನದಲ್ಲಿ ಚೆನ್ನೈ-ಬೆಂಗಳೂರು ತಂಡಗಳ ನಡುವಿನ ಪಂದ್ಯ ಅಪರೂಪದ ಘಟನೆವೊಂದಕ್ಕೆ ಸಾಕ್ಷಿಯಾಗಿದ್ದು, ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

ಆರ್​ಸಿಬಿ ಜೆರ್ಸಿ ತೊಟ್ಟು ಲವ್​ ಪ್ರಪೋಸ್
ಆರ್​ಸಿಬಿ ಜೆರ್ಸಿ ತೊಟ್ಟು ಲವ್​ ಪ್ರಪೋಸ್
author img

By

Published : May 5, 2022, 4:24 PM IST

ಹೈದರಾಬಾದ್​: ಇಂಡಿಯನ್​ ಪ್ರೀಮಿಯರ್ ಲೀಗ್​ನ ನಿನ್ನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಗೆಲುವಿನ ನಗೆ ಬೀರುವ ಮೂಲಕ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಲಗ್ಗೆ ಹಾಕಿ, ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. ಆದರೆ, ಪಂದ್ಯದ ವೇಳೆ ನಡೆದ ಅಪರೂಪದ ಘಟನೆವೊಂದು ಪಂದ್ಯ ನೋಡಲು ಸೇರಿದ್ದ ಅನೇಕರಲ್ಲಿ ಹರ್ಷೋದ್ಗಾರಕ್ಕೆ ಕಾರಣವಾಗಿದೆ. ಅವರ ವಿಡಿಯೋ ತುಣುಕು ಇದೀಗ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​ ಮೈದಾನದಲ್ಲಿ ನಡೆದ ಪಂದ್ಯದ ವೇಳೆ ಪ್ರೇಮ ನಿವೇದನೆ ಪ್ರಕರಣವೊಂದು ನಡೆದಿದೆ. ವಿಶೇಷವೆಂದರೆ ಸ್ಟೇಡಿಯಂನಲ್ಲಿ ಯುವತಿಯೊಬ್ಬಳು ತಮ್ಮ ಗೆಳೆಯನಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ.

ಆರ್​​ಸಿಬಿ ಜೆರ್ಸಿ ತೊಟ್ಟು ಪಂದ್ಯ ವೀಕ್ಷಣೆ ಮಾಡ್ತಿದ್ದ ಯುವಕನಿಗೆ ಪ್ರೇಮ ನಿವೇದನೆ ಮಾಡಿರುವ ಯುವತಿ ರಿಂಗ್ ಸಹ ತೊಡಿಸಿದ್ದಾರೆ. ಈ ವೇಳೆ, ಆಕೆಯ ಪ್ರೀತಿ ಒಪ್ಪಿಕೊಂಡಿರುವ ಯುವಕ ಪ್ರೀತಿಯಿಂದ ಅಪ್ಪಿಕೊಂಡಿದ್ದಾನೆ. ಈ ಸುಂದರ ಕ್ಷಣದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​​ ಆಗ್ತಿದೆ.

ಇದನ್ನೂ ಓದಿ: ಕೊಹ್ಲಿ ವಿಕೆಟ್​ ಪಡೆಯುವುದು ಎಲ್ಲಾ ಬೌಲರ್​ಗಳಿಗೂ ಸುಲಭವಾಗುತ್ತಿರುವುದು ಕಳವಳಕಾರಿ: ಬಿಷಪ್

ವಾಸೀಂ ಜಾಫರ್ ಟ್ವೀಟ್: ಈ ಘಟನೆಗೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಕೂಡ ಟ್ವೀಟ್ ಮಾಡಿದ್ದು, ಬುದ್ಧಿವಂತ ಹುಡುಗಿ ಆರ್​ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿದ್ದಾಳೆ. ಆತ ಆರ್​ಸಿಬಿಗೆ ನಿಷ್ಠನಾಗಿರುವ ರೀತಿಯಲ್ಲೇ ಜೊತೆಗಾರ್ತಿ ಜೊತೆ ಇರಲಿದ್ದಾನೆ. ಒಳ್ಳೆಯ ನಿರ್ಧಾರ. ಶುಭವಾಗಲಿ ಎಂದಿದ್ದಾರೆ.

ವಿಶೇಷವೆಂದರೆ ಕಳೆದ ವರ್ಷ ನಡೆದ ಐಪಿಎಲ್​ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ದೀಪಕ್ ಚಹಾರ್​ ಪಂದ್ಯ ಮುಗಿದ ಬೆನ್ನಲ್ಲೇ ತಮ್ಮ ಗೆಳತಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಇದರ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.