ETV Bharat / sports

ಆಸೀಸ್​ ತಂಡದ ಜವಾಬ್ದಾರಿಯನ್ನು RCBಯಲ್ಲೂ ನಿರ್ವಹಿಸುತ್ತಿದ್ದೇನೆ: ಮ್ಯಾಕ್ಸ್‌ವೆಲ್

author img

By

Published : Apr 15, 2021, 10:43 AM IST

ಇದೊಂದು ಒಳ್ಳೆಯ ಆರಂಭ. ನನಗೆ ಹೊಸ ಫ್ರ್ಯಾಂಚೈಸ್ ನಿರ್ದಿಷ್ಟ ಪಾತ್ರ ನೀಡಿದ್ದಾರೆ. ಈ ರೀತಿಯಾಗಿ ಆಟ ಪ್ರಾರಂಭಿಸುವುದು ನನಗೆ ನಿಜವಾಗಿಯೂ ಸಂತೋಷ ತರುತ್ತದೆ. ನಿಮ್ಮ ಹಿಂದೆ ಅತ್ಯುತ್ತಮ ಬ್ಯಾಟ್ಸ್​ಮನ್​ಗಳು ಇರುವುದು ಇನ್ನೂ ಸಂತೋಷದಾಯಕ. ಎಬಿ ಜೊತೆ ಆಡಲು ಸ್ವಾತಂತ್ರ್ಯವಿದೆ. ಇದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ನಾನು ಹೊಂದಿರುವ ಜವಾಬ್ದಾರಿಯೂ ಹೌದು ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

ಗ್ಲೆನ್ ಮ್ಯಾಕ್ಸ್ ವೆಲ್
ಗ್ಲೆನ್ ಮ್ಯಾಕ್ಸ್ ವೆಲ್

ಚೆನ್ನೈ: ಕಳೆದ ಮೂರು ಐಪಿಎಲ್​ ಋತುಗಳಲ್ಲಿ ವೈಫಲ್ಯ ಅನುಭವಿಸಿದ ಬಳಿಕ ಬುಧವಾರ ತಮ್ಮ ಮೊದಲ ಐಪಿಎಲ್ ಅರ್ಧಶತಕ ದಾಖಲಿಸಿದ ಗ್ಲೆನ್ ಮ್ಯಾಕ್ಸ್‌ವೆಲ್, ಹೊಸ ಫ್ರ್ಯಾಂಚೈಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನೊಂದಿಗೆ ಹೊಸದಾಗಿ ಕಂಡುಕೊಂಡ ಫಾರ್ಮ್​ ಮತ್ತು ಆತ್ಮವಿಶ್ವಾಸವನ್ನು ಮೆಲುಕು ಹಾಕಿ, ಆಸ್ಟ್ರೇಲಿಯಾ ಪರ ತಾನು ವಹಿಸುವ ಪಾತ್ರಕ್ಕೆ ಹೋಲಿಸಿಕೊಂಡರು.

ಐಪಿಎಲ್ 2020ರಲ್ಲಿ ಕೇವಲ 15 ರನ್​ಗಳ ಸರಾಸರಿಯಲ್ಲಿ 13 ಪಂದ್ಯಗಳಲ್ಲಿ 108 ಮೊತ್ತ ಕಲೆಹಾಕಿದ್ದರು ಮ್ಯಾಕ್ಸ್‌ವೆಲ್. ಇದರಿಂದಾಗಿ ಈ ಋತುವಿಗೂ ಮುನ್ನ ಪಂಜಾಬ್ ಫ್ರ್ಯಾಂಚೈಸ್‌ ಅವರನ್ನು ಕೈಬಿಟ್ಟಿದ್ದರು. ತಕ್ಷಣವೇ ಆರ್‌ಸಿಬಿ ಮಧ್ಯಮ ಕ್ರಮಾಂಕದ 4ನೇ ಬ್ಯಾಟಿಂಗ್ ಸ್ಲಾಟ್‌ಗೆ ಅವರನ್ನು ಆಯ್ದುಕೊಂಡಿತ್ತು.

ನಿನ್ನೆ ಹೈದ್ರಾಬಾದ್‌ ವಿರುದ್ಧ ನಡೆದ ಪಂದ್ಯದಲ್ಲಿ ಮ್ಯಾಕ್ಸ್​ವೆಲ್​ 41 ಎಸೆತಗಳಲ್ಲಿ 59 ರನ್ ಬಾರಿಸಿ, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: ಸೋಲಿನ ಕಹಿ ಕರಗಿಸಿಕೊಳ್ಳಲು ಆಗುತ್ತಿಲ್ಲ: ತಂಡದ ಬ್ಯಾಟ್ಸ್‌ಮನ್‌ಗಳ ಬಗ್ಗೆ ವಾರ್ನರ್ ಬೇಸರ​

ಮ್ಯಾಕ್ಸ್‌ವೆಲ್‌ ಮೊದಲ ಪಂದ್ಯದಲ್ಲಿ ಆರ್​ಸಿಬಿ ಪರ 39 ರನ್ ಬಾರಿಸಿ ತಂಡದ ಗೆಲುವಿಗೆ ನೆರವಾದರು. ತಾನು ಆಡಿದ ಎರಡನೇ ಪಂದ್ಯದಲ್ಲಿ 41 ಎಸೆತಗಳಲ್ಲಿ 59 ರನ್ ಗಳಿಸಿ ತಂಡದ ಅಗ್ರ ಸ್ಕೋರರ್‌​ ಆಗಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಎರಡು ಸಿಕ್ಸರ್‌ಗಳನ್ನು ಹೊಡೆದರೆ, ಬುಧವಾರ ರಾತ್ರಿ ಮೂರು ಸಿಕ್ಸರ್‌ ಸಿಡಿಸಿದರು. 2020ರ ಋತುವಿನಲ್ಲಿ, ಇವರಿಗೆ ಒಂದೇ ಒಂದು ಸಿಕ್ಸರ್ ಹೊಡೆಯಲು ಸಾಧ್ಯವಾಗಿರಲಿಲ್ಲ.

ಕೊನೆಯ ಬಾರಿಗೆ ಮ್ಯಾಕ್ಸ್‌ವೆಲ್ ಅರ್ಧಶತಕವನ್ನು ಹೊಡೆದದ್ದು 2016ರಲ್ಲಿ. ಅಂದಿನಿಂದ ಅವರ 2017 ಹಾಗೂ 2018ರಲ್ಲಿ ಗರಿಷ್ಠ ತಲಾ 47 ಮತ್ತು 2020ರಲ್ಲಿ 32 ಆಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.