ETV Bharat / sports

2023ರ ಐಪಿಎಲ್​​ನಲ್ಲಿ ಧೋನಿ ಆಡ್ತಾರಾ?.. ಕೊನೆ ಪಂದ್ಯದಲ್ಲಿ ಗುಟ್ಟು ರಟ್ಟು ಮಾಡಿದ ಸಿಎಸ್​ಕೆ ಕ್ಯಾಪ್ಟನ್​! - ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್

2023ರ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮಹೇಂದ್ರ ಸಿಂಗ್ ಧೋನಿ ಭಾಗಿಯಾಗುವುದರ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಗುಡ್​ನ್ಯೂಸ್ ನೀಡಿದ್ದಾರೆ..

MS Dhoni talk on 2023 IPL season
MS Dhoni talk on 2023 IPL season
author img

By

Published : May 20, 2022, 7:47 PM IST

ಮುಂಬೈ : 2022ರ ಐಪಿಎಲ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇಂದು ತನ್ನ ಕೊನೆಯ ಲೀಗ್​​​ ಪಂದ್ಯವನ್ನ ಆಡ್ತಿದೆ. ಈ ವೇಳೆ ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತಾವು 2023ರ ಐಪಿಎಲ್​​ನಲ್ಲಿ ಚೆನ್ನೈ ತಂಡದ ಪರ ಆಡುವುದರ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಮಾಡಲು ಕಣಕ್ಕಿಳಿದ ಮಹೇಂದ್ರ ಸಿಂಗ್​ ಧೋನಿ, ಮುಂದಿನ ಸೀಸನ್​​ಗಾಗಿ ಮತ್ತಷ್ಟು ಶ್ರಮ ವಹಿಸುವುದಾಗಿ ಹೇಳಿಕೊಂಡಿದ್ದಾರೆ.

2023ರ ಐಪಿಎಲ್​​ನಲ್ಲಿ ನಿಮ್ಮನ್ನ ಯಲ್ಲೋ ಜರ್ಸಿಯಲ್ಲಿ ನೋಡಬಹುದೇ? ಎಂದು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಧೋನಿ, ಖಂಡಿತವಾಗಿ, ಚೆನ್ನೈ ಪರ ಆಡದೇ ಧನ್ಯವಾದ ಹೇಳಿದರೆ ಅದು ಅನ್ಯಾಯ ಮಾಡಿದಂತಾಗುತ್ತದೆ. ಮುಂಬೈನಲ್ಲಿ ಬಹಳಷ್ಟು ಪ್ರೀತಿ ಪಡೆದುಕೊಂಡಿದ್ದೇನೆ. ಮುಂದಿನ ವರ್ಷ ತಂಡ ವಿವಿಧ ಸ್ಥಳಗಳಲ್ಲಿ ಪಂದ್ಯಗಳನ್ನ ಆಡಲಿರುವ ಕಾರಣ ಎಲ್ಲ ಸ್ಥಳಗಳಲ್ಲಿ ಪಂದ್ಯ ಆಡುವುದರ ಜೊತೆಗೆ ಅಭಿಮಾನಿಗಳಿಗೆ ಧನ್ಯವಾದ ಹೇಳಿದಂತೆ ಇರುತ್ತದೆ ಎಂದರು.

ಇದು ನನ್ನ ಕೊನೆಯ ವರ್ಷವೇ ಅಥವಾ ಅಲ್ಲವೋ ಎಂಬುದು ದೊಡ್ಡ ಪ್ರಶ್ನೆ. ಆದರೆ, ಮುಂದಿನ ವರ್ಷ ಮತ್ತಷ್ಟು ಬಲಿಷ್ಠನಾಗಿ ಕಮ್​​ಬ್ಯಾಕ್​ ಮಾಡಲು ಶ್ರಮಿಸುತ್ತಿದ್ದೇನೆ ಎಂದರು. ಜೊತೆಗೆ ತಂಡದ ನಾಯಕತ್ವ ಜವಾಬ್ದಾರಿ ನಿರ್ವಹಿಸುವುದಾಗಿ ಸಹ ಹೇಳಿಕೊಂಡಿದ್ದಾರೆ. ಈ ಮೂಲಕ ಮುಂದಿನ ವರ್ಷ ಸಿಎಸ್​ಕೆ ಪರ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂಬ ಉತ್ತರ ನೀಡಿದ್ದಾರೆ. 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಧೋನಿ ವಿದಾಯ ಘೋಷಣೆ ಮಾಡಿದ್ದು, ತದನಂತರ ಐಪಿಎಲ್​​ನಲ್ಲಿ ಮಾತ್ರ ಆಡ್ತಿದ್ದಾರೆ. ಜೊತೆಗೆ ಕಳೆದ ವರ್ಷ ತಂಡವನ್ನ ಚಾಂಪಿಯನ್​​ ಪಟ್ಟಕ್ಕೇರಿಸಿದ್ದರು. ಇದಕ್ಕೂ ಮುಂಚೆ ತಂಡದ ನಾಯಕನಾಗಿ ಮೂರು ಸಲ ಪ್ರಶಸ್ತಿ ಗೆದ್ದಿದ್ದಾರೆ.

ಇದನ್ನೂ ಓದಿ: IPLನ ಸತತ 13 ಆವೃತ್ತಿಗಳಲ್ಲಿ 300+ ರನ್.. ಈ ದಾಖಲೆ ಬರೆದ ಏಕೈಕ ಬ್ಯಾಟರ್​ ವಿರಾಟ್​​

ಪ್ರಸಕ್ತ ಸಾಲಿನ ಐಪಿಎಲ್ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ನಾಯಕತ್ವವನ್ನ ಜಡೇಜಾಗೆ ಬಿಟ್ಟುಕೊಟ್ಟಿದ್ದ ಧೋನಿ, ತದನಂತರ ಮತ್ತೊಮ್ಮೆ ನಾಯಕನಾಗಿ ತಂಡವನ್ನ ಮುನ್ನಡೆಸುತ್ತಿದ್ದಾರೆ. ಈ ಸಲದ ಐಪಿಎಲ್​ನಲ್ಲಿ ತಂಡ ಈಗಾಗಲೇ ಪ್ಲೇ-ಆಫ್​ ರೇಸ್​ನಿಂದ ಹೊರಬಿದ್ದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.