ಚೆನ್ನೈ (ತಮಿಳುನಾಡು): ಧೋನಿ ನಾಯಕತ್ವವೇ ಒಂದು ರೀತಿ ವೈಶಿಷ್ಟ್ಯವಾಗಿ ಕಾಣುತ್ತದೆ ಎಂದರೆ ತಪ್ಪಾಗದು. ಪ್ರತೀ ಪಂದ್ಯದ ವೇಳೆ ಅವರು ಮಾಡುವ ನಿರ್ಣಯಗಳು ಮತ್ತು ಅವರ ನಡೆ ನೋಡುಗನಿಗೆ ಹೊಸತು ಹಾಗೇ ಕುತೂಹಲಕಾರಿಯಾಗಿರುತ್ತದೆ. ಧೋನಿ ಮೈದಾನದಲ್ಲಿ ಮ್ಯಾಜಿಕ್ ಮಾಡುತ್ತಾರೆ ಎಂಬ ನಂಬಿಕೆ ಬಹುತೇಕರಲ್ಲಿದೆ. ಇದಕ್ಕೆ ಕಾರಣ ಎದುರಾಳಿ ಬ್ಯಾಟರ್ಗಳನ್ನು ಅವರು ಬೌಲರ್ಗಳನ್ನು ಬಳಸಿ ಕಟ್ಟಿಹಾಕುವ ರೀತಿಯಿಂದ. ಕಳೆದ ಪಂದ್ಯದಲ್ಲೂ ಚೆನ್ನೈ ತಂಡ ಡೆಲ್ಲಿಯ ವಿರುದ್ಧ 27 ರನ್‌ಗಳ ಗೆಲುವು ಸಾಧಿಸಿತು.
"ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 27 ರನ್‌ಗಳ ಗೆಲುವು ಸಾಧಿಸಿದ ಎಂಎಸ್ ಧೋನಿ ಮತ್ತೊಮ್ಮೆ ತಮ್ಮ ಅತ್ಯುತ್ತಮ ಪ್ರದರ್ಶನ ಕಂಡುಕೊಂಡಿದ್ದಾರೆ, ಆ ಮೂಲಕ 2023 ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ಸ್ಥಾನವನ್ನು ಗಟ್ಟಿಗೊಳಿಸುವತ್ತ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ" ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಸಮತೋಲಿತ ಬ್ಯಾಟಿಂಗ್: ಬುಧವಾರ ಧೋನಿ (9ಬಾಲ್, 1x4, 2x6) ಅವರ ಬಿರುಸಿನ 20 ಸೇರಿದಂತೆ ಆರು ಆಟಗಾರರು 20 ರನ್ನ ಕೊಪಡುಗೆಯಿಂದ ಚೆನ್ನೈ ತಂಡ 167 ರನ್ ಗಳಿಸಿತು. ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶಿವಂ ದುಬೆ, ಅಂಬಟಿ ರಾಯುಡು ಮತ್ತು ರವೀಂದ್ರ ಜಡೇಜಾ ಅವರು ಮತ್ತು ಧೋನಿ 20 ರನ್ ಗಳಿಸಿದರು. ದುಬೆ ಅವರು ಗಳಿಸಿದ 25 ರನ್ ಒಬ್ಬ ಬ್ಯಾಟರ್ನ ಹೆಚ್ಚಿನ ಮೊತ್ತವಾಗಿತ್ತು.
ಡೆಲ್ಲಿ ಕಳಪೆ ಆರಂಭ ಪಡೆಯಿತು, ಕೇವಲ 25 ರನ್‌ಗಳಿಗೆ ಡೆಲ್ಲಿಯ ಮೂರು ವಿಕೆಟ್ ನಷ್ಟವಾಗಿತ್ತು. ರಿಲೀ ರೊಸೊವ್ ಅವರು ಆಡಿದ ಏಕಾಂಗಿ ಆಟ ತಂಡಕ್ಕೆ ಆಸರೆಯಾಗಲಿಲ್ಲ. ಅವರು ಏಕಾಂಗಿಯಾಗಿ 37 ಬಾಲ್ ಎದುರಿಸಿ 2 ಬೌಂಡರಿ ಮತ್ತು 1 ಸಿಕ್ಸ್ನ ಸಹಾಯದಿಂದ 35 ರನ್ ಗಳಿಸಿದರು. ಆದರೆ ಇವರ ಈ ಆಟ ಡೆಲ್ಲಿಯ ಗೆಲುವಿಗೆ ಕೊಡುಗೆಯಾಗಲಿಲ್ಲ. ಧೋನಿ ಹೋದ ಮೈದಾನದಲ್ಲೆಲ್ಲಾ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಪಡೆಯುತ್ತಾರೆ, ಇನ್ನು ತವರು ಮೈದಾನದಲ್ಲಿ ಅಭಿಮಾನಿಗಳಿಂದ ಅಬ್ಬರದ ಸ್ವಾಗತವೇ ಸಿಕ್ಕಿತು. ಎಂಎಸ್ಡಿ ಕೇವಲ 9 ಎಸೆತಗಳಲ್ಲಿ 20 ರನ್ ಕಲೆಹಾಕಿದರು.
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್,"ಅವರು ಬ್ಯಾಟಿಂಗ್‌ಗೆ ಹೋದಾಗಲೆಲ್ಲಾ ಅವರ ಮೇಲೆ ಒತ್ತಡವು ಅಗಾಧವಾಗಿರುತ್ತದೆ. ಅವರು ಪ್ರತಿ ಬಾರಿ ಸ್ಟ್ರೈಕ್‌ಗೆ ಬಂದಾಗಲೂ ದೊಡ್ಡ ಹೊಡೆತಗಳ ಅಗತ್ಯವಿರುತ್ತದೆ. ಇದನ್ನು ವೀಕ್ಷಿಸಲು ನಂಬಲಾಗದಂತಿದೆ. ಈ ಆವೃತ್ತಿಯಲ್ಲಿ, ಅವರು ಮತ್ತೆ ತಮ್ಮ ಅತ್ಯುತ್ತಮತೆಯನ್ನು ಬ್ಯಾಟಿಂಗ್ ಕಂಡುಕೊಂಡಿದ್ದಾರೆ" ಎಂದು ಹೇಳಿದ್ದಾರೆ.
ಡೆಲ್ಲಿಗೆ ಪ್ಲೇ ಆಫ್ ಅವಕಾಶ ಕಷ್ಟ ಎಂದು ಸ್ಮಿತ್ ಹೇಳುತ್ತಾರೆ, "ಡೆಲ್ಲಿ ಕ್ಯಾಪಿಟಲ್ಸ್ 11 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವುಗಳೊಂದಿಗೆ ಐಪಿಎಲ್ನ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿದೆ. ಅವರು ಪ್ಲೇ ಆಫ್ನಿಂದ ಹೋಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಈ ವರ್ಷದ ಡೆಲ್ಲಿ ಪ್ರಯಾಣ ಅಭಿಮಾನಿಗಳಿಗೆ ಬೇಸರ ತರುವಂತಿದೆ" ಎಂದಿದ್ದಾರೆ.
ಇದನ್ನೂಓದಿ:IPLನಲ್ಲಿ ಇಂದು: ತವರಿನಲ್ಲಿ ಮುಂಬೈಗೆ ಗುಜರಾತ್ ಸವಾಲು, ಪ್ಲೇ ಆಫ್ ಪ್ರವೇಶಕ್ಕೆ ಜಿಟಿಗೆ ಒಂದೇ ಹೆಜ್ಜೆ