ಚೆನ್ನೈ: ಎಮ್‌ಎ ಚಿದಂಬರಂ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2023 ರ ಪಂದ್ಯದಲ್ಲಿ ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಮತ್ತೊಂದು ದಾಖಲೆ ನಿರ್ಮಿಸಿದರು. ಇಂಡಿಯನ್ ಪ್ರೀಮಿಯರ್ ಟೀಗ್ ಟಿ20 ಯಲ್ಲಿ 5000 ರನ್ ಗಡಿ ತಲುಪಿದ ಆಟಗಾರ ಎಂಬ ಖ್ಯಾತಿಗೆ ಒಳಗಾದರು. ಈ ರನ್ ಮಾಡಿದ ಐದನೇ ಭಾರತೀಯ ಬ್ಯಾಟರ್ ಆಗಿದ್ದಾರೆ ಮಹೇಂದ್ರ ಸಿಂಗ್ ಧೋನಿ.
-
🚨 Milestone Alert 🚨
— IndianPremierLeague (@IPL) April 3, 2023 " class="align-text-top noRightClick twitterSection" data="
5️⃣0️⃣0️⃣0️⃣ runs in #TATAIPL for magnificent MSD! 🫡🫡
Follow the match ▶️ https://t.co/buNrPs0BHn#TATAIPL | #CSKvLSG | @msdhoni pic.twitter.com/InAuRN5oNu
">🚨 Milestone Alert 🚨
— IndianPremierLeague (@IPL) April 3, 2023
5️⃣0️⃣0️⃣0️⃣ runs in #TATAIPL for magnificent MSD! 🫡🫡
Follow the match ▶️ https://t.co/buNrPs0BHn#TATAIPL | #CSKvLSG | @msdhoni pic.twitter.com/InAuRN5oNu🚨 Milestone Alert 🚨
— IndianPremierLeague (@IPL) April 3, 2023
5️⃣0️⃣0️⃣0️⃣ runs in #TATAIPL for magnificent MSD! 🫡🫡
Follow the match ▶️ https://t.co/buNrPs0BHn#TATAIPL | #CSKvLSG | @msdhoni pic.twitter.com/InAuRN5oNu
ಸಿಎಸ್‌ಕೆ ನಾಯಕ ಧೋನಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ಸುರೇಶ್ ರೈನಾ ನಂತರ ಟಿ20 ಪಂದ್ಯಾವಳಿಯಲ್ಲಿ 5,000 ರನ್ ಪೂರೈಸಿದ ಐದನೇ ಭಾರತೀಯ ಆಟಗಾರರಾದರು. ತವರು ನೆಲದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಮಾಡಿತು. 20ನೇ ಓವರ್ನ ಮೊದಲನೇ ಬಾಲ್ಗೆ ಜಡೇಜಾ ವಿಕೆಟ್ ಒಪ್ಪಿಸಿದರು. ನಂತರ 7ನೇ ವಿಕೆಟ್ ಆಗಿ ಬಂದ ಧೋನಿ ಮೂರು ಬಾಲ್ಗೆ 12 ರನ್ ಗಳಿಸಿ ಔಟ್ ಆದರು. ಬಂದ ತಕ್ಷಣ ಎರಡು ಬಾಲ್ಗಳನ್ನು ಸಿಕ್ಸರ್ಗೆ ಅಟ್ಟಿದರು. ಮೂರನೇ ಬಾಲ್ ಸಹ ಸಿಕ್ಸಗೆ ಕಳುಹಿಸಲು ಪ್ರಯತ್ನಿಸಿದರು. ಆದರೆ ಕ್ಯಾಚ್ ಆಗಿ ಪರಿಣಮಿಸಿದ ಕಾರಣ ಔಟ್ ಆದರು.
ಆರ್‌ಸಿಬಿ ಸ್ಟಾರ್ ಕೊಹ್ಲಿ 224 ಐಪಿಎಲ್ ಪಂದ್ಯಗಳಲ್ಲಿ 6706 ರನ್ ಗಳಿಸಿ ಪ್ರಸ್ತುತ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸ್ಕೋರರ್ ಆಗಿದ್ದಾರೆ. ಶಿಖರ್ ಧವನ್ 199 ಐಪಿಎಲ್ ಪಂದ್ಯಗಳಲ್ಲಿ 6086, ರೋಹಿತ್ 221 ಐಪಿಎಲ್ ಪಂದ್ಯಗಳಲ್ಲಿ 5764 ರನ್, ಡೇವಿಡ್ ವಾರ್ನರ್ 155 ಐಪಿಎಲ್‌ನಲ್ಲಿ ಮ್ಯಾಚ್ನಿಂದ 5668 ರನ್, ರೈನಾ 205 ಐಪಿಎಲ್ ಪಂದ್ಯಗಳಲ್ಲಿ 5528 ರನ್ ಮತ್ತು ಎಬಿ ಡಿವಿಲಿಯರ್ಸ್ 184 ಐಪಿಎಲ್ ಪಂದ್ಯಗಳಲ್ಲಿ 5162 ರನ್ ಗಳಿಸಿದ್ದಾರೆ.
-
A treat for the Chennai crowd! 😍@msdhoni is BACK in Chennai & how 💥#TATAIPL | #CSKvLSG
— IndianPremierLeague (@IPL) April 3, 2023 " class="align-text-top noRightClick twitterSection" data="
WATCH his incredible two sixes 🔽 pic.twitter.com/YFkOGqsFVT
">A treat for the Chennai crowd! 😍@msdhoni is BACK in Chennai & how 💥#TATAIPL | #CSKvLSG
— IndianPremierLeague (@IPL) April 3, 2023
WATCH his incredible two sixes 🔽 pic.twitter.com/YFkOGqsFVTA treat for the Chennai crowd! 😍@msdhoni is BACK in Chennai & how 💥#TATAIPL | #CSKvLSG
— IndianPremierLeague (@IPL) April 3, 2023
WATCH his incredible two sixes 🔽 pic.twitter.com/YFkOGqsFVT
ಇದನ್ನೂ ಓದಿ: IPL 2023: ತಡವಾಗಿ ಬೆಳಕಿಗೆ ಬಂದ ವಿರಾಟ್ ಹೊಸ ದಾಖಲೆ.. ಹೇಳಿದ್ದನ್ನು ಮಾಡಿ ತೋರಿದ ಕಿಂಗ್ ಕೊಹ್ಲಿ
ಲಕ್ನೋ ಸೂಪರ್ ಜೈಂಟ್ಸ್ ಪಂದ್ಯಕ್ಕೂ ಮೊದಲು ಧೋನಿ 236 ಐಪಿಎಲ್ ಪಂದ್ಯಗಳಿಂದ 39ರ ಸರಾಸರಿಯಲ್ಲಿ ಮತ್ತು 135 ರ ಸ್ಟ್ರೈಕ್ ರೇಟ್‌ನಲ್ಲಿ 4992 ರನ್ ಗಳಿಸಿದ್ದು, 24 ಅರ್ಧ ಶತಕ ಒಳಗೊಂಡಿತ್ತು. ಧೋನಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಐಪಿಎಲ್‌ನ 5000 ರನ್ ಕ್ಲಬ್‌ಗೆ ಸೇರಿದ್ದಾರೆ. ಇಂದಿನ ಪಂದ್ಯದಲ್ಲಿ 12 ರನ್ ಗಳಿಸಿದರ ಅವರು ಒಟ್ಟಾರೆ ಈಗ 5004 ರನ್ ಮಾಡಿದ್ದಾರೆ.
ಧೋನಿ ಈಗಾಗಲೇ 170 ಔಟ್ ಮಾಡಿರುವ ದಾಖಲೆ ಬರೆದಿದ್ದಾರೆ. ಅವರು 131 ಕ್ಯಾಚ್‌ಗಳು ಮತ್ತು 39 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ. ಐಪಿಎಲ್‌ನಲ್ಲಿ ವಿಕೆಟ್-ಕೀಪರ್‌ನಿಂದ ಅತಿ ಹೆಚ್ಚು ಔಟ್ ಮಾಡಿದ ದಾಖಲೆಯನ್ನು ಹೊಂದಿದ್ದಾರೆ. ದಿನೇಶ್ ಕಾರ್ತಿಕ್ ಈ ಪಟ್ಟಿಯಲ್ಲಿ 159 ಔಟ್ಗಳನ್ನು ಮಾಡಿ ಎರಡನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: IPL 2023: ಆರಂಭಿಕರ ಶತಕದ ಜೊತೆಯಾಟ.. ಲಕ್ನೊಗೆ ಬೃಹತ್ 218 ರನ್ನ ಗುರಿ