ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಕೊನೆಯ ವಾರದ ಡಬಲ್ ಹೆಡರ್ ಪಂದ್ಯದಲ್ಲಿ ಸೂಪರ್ ಶನಿವಾರದ ಎರಡನೇ ಮ್ಯಾಚ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಎದುರಾಗುತ್ತಿವೆ. ಪಂದ್ಯ ಇಲ್ಲಿನ ಈಡೆನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ನಿತೀಶ್ ರಾಣಾ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿದ್ದಾರೆ.
-
🚨 Toss Update 🚨@KKRiders win the toss and elect to field first against @LucknowIPL.
— IndianPremierLeague (@IPL) May 20, 2023 " class="align-text-top noRightClick twitterSection" data="
Follow the match ▶️ https://t.co/7X1uv1mCyL #TATAIPL | #KKRvLSG pic.twitter.com/LjSVaag8LX
">🚨 Toss Update 🚨@KKRiders win the toss and elect to field first against @LucknowIPL.
— IndianPremierLeague (@IPL) May 20, 2023
Follow the match ▶️ https://t.co/7X1uv1mCyL #TATAIPL | #KKRvLSG pic.twitter.com/LjSVaag8LX🚨 Toss Update 🚨@KKRiders win the toss and elect to field first against @LucknowIPL.
— IndianPremierLeague (@IPL) May 20, 2023
Follow the match ▶️ https://t.co/7X1uv1mCyL #TATAIPL | #KKRvLSG pic.twitter.com/LjSVaag8LX
ಇಂದಿನ ಪಂದ್ಯದ ಗೆಲುವು ಲಕ್ನೋ ಸೂಪರ್ ಜೈಂಟ್ಸ್ಗೆ ಪ್ಲೇ- ಆಫ್ ಪ್ರವೇಶವನ್ನು ಖಚಿತ ಪಡಿಸಲಿದೆ. 13 ಪಂದ್ಯಗಳನ್ನು ಆಡಿರುವ ಲಕ್ನೋ 7 ಪಂದ್ಯದಲ್ಲಿ ಗೆದ್ದಿದ್ದು, ಒಂದು ಪಂದ್ಯ ರದ್ದಾಗಿದೆ. ಹೀಗಾಗಿ 15 ಅಂಕದಿಂದ ಪಾಯಿಂಟ್ ಪಟ್ಟಿಯ 3ನೇ ಸ್ಥಾನದಲ್ಲಿದೆ. ಅತ್ತ ಕೋಲ್ಕತ್ತಾ 13 ರಲ್ಲಿ 6 ಗೆದ್ದು 12 ಅಂಕದಿಂದ 7ನೇ ಸ್ಥಾನದಲ್ಲಿದೆ. ಇಂದು ಬೃಹತ್ ಅಂತರದಲ್ಲಿ ಹೆಚ್ಚಿನ ರನ್ ರೇಟ್ನಿಂದ ಲಕ್ನೋವನ್ನು ಮಣಿಸಿದರೆ, ಕೋಲ್ಕತ್ತಾಗೂ ನಾಲ್ಕನೇ ಸ್ಥಾನ ಪಡೆಯುವ ಅವಕಾಶ ಇದೆ. ಆದರೆ, ಇದಕ್ಕೆ ನಾಳೆ ನಡೆಯುವ ಪಂದ್ಯದಲ್ಲಿ ಮುಂಬೈ ಮತ್ತು ಆರ್ಸಿಬಿ ಕಳಪೆ ಸೋಲು ಕಾಣಬೇಕಾಗಿದೆ.
ಇದನ್ನೂ ಓದಿ: ಪಂಜಾಬ್ ವಿರುದ್ಧ ರಾಜಸ್ಥಾನ ರಾಯಲ್ಸ್ಗೆ ಗೆಲುವು: ಸೋಲಿನೊಂದಿಗೆ ಐಪಿಎಲ್ನಿಂದ ಹೊರಬಿದ್ದ ಕಿಂಗ್ಸ್
ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ನ್ನು ಎದುರಿಸಿದ್ದ ಎಲ್ಎಸ್ಜಿ 5 ರನ್ನ ರೋಚಕ ಗೆಲುವು ದಾಖಲಿಸಿತ್ತು. ಇದೇ ಆತ್ಮ ವಿಶ್ವಾಸದಲ್ಲಿ ಕೃನಾಲ್ ಪಡೆ ಇಂದು ಮತ್ತೆ ಕ್ರೀಸ್ಗೆ ಇಳಿಯುತ್ತಿದೆ. ಮುಂಬೈ ವಿರುದ್ಧ ಲಕ್ನೋ 177 ರನ್ ಸಾಧಾರಣ ಗುರಿಯನ್ನು ನೀಡಿತ್ತು. ನೋವಿನ ನಡುವೆಯೂ ನಾಯಕ ಕೃನಾಲ್ ಪಾಂಡ್ಯರ ಇನ್ನಿಂಗ್ಸ್ ಹಾಗೇ ಮಾರ್ಕಸ್ ಸ್ಟೋಯ್ನಿಸ್ ಅವರ 89 ರನ್ನ ಅಮೂಲ್ಯ ಆಟ ಮುಂಬೈಗೆ 178 ರನ್ನ ಗುರಿ ನೀಡಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ಇಶಾನ್ ಕಿಶನ್ ಅರ್ಧಶತಕದ ಏಕಾಂಗಿ ಹೋರಾಟದಿಂದ ಮುಂಬೈಗೆ ಗೆಲುವು ಸಿಗಲಿಲ್ಲ. ಎಲ್ಎಸ್ಜಿ ಬೌಲರ್ಗಳು ಮಿಕ್ಕ ಆಟಗಾರರನ್ನು ಬೇಗ ಪೆವಿಲಿಯನ್ಗೆ ಅಟ್ಟಿದ್ದು, ಗೆಲುವಿಗೆ ಕಾರಣವಾಗಿತ್ತು.
ತಂಡಗಳು ಇಂತಿವೆ..: ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಕರಣ್ ಶರ್ಮಾ, ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ(ನಾಯಕ), ಆಯುಷ್ ಬಡೋನಿ, ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಮೊಹ್ಸಿನ್ ಖಾನ್
ಕೋಲ್ಕತ್ತಾ ನೈಟ್ ರೈಡರ್ಸ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ
ಇದನ್ನೂ ಓದಿ: ಆರಂಭಿಕ ಜೋಡಿಯ ಭರ್ಜರಿ ಜೊತೆಯಾಟ: ಮಹತ್ವದ ಪಂದ್ಯದಲ್ಲಿ ಡೆಲ್ಲಿಗೆ 224 ರನ್ಗಳ ಬೃಹತ್ ಗುರಿ ನೀಡಿದ ಚೆನ್ನೈ