ನವದೆಹಲಿ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾಗಿಂತಲೂ ಕನ್ನಡಿಗ ಕೆ.ಎಲ್ ರಾಹುಲ್ ಬಳಿ ಹೆಚ್ಚಿನ ಸಾಮರ್ಥ್ಯವಿದೆ ಎಂದು ಮಾಜಿ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿರುವ ಕೆ.ಎಲ್ ರಾಹುಲ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಏಕಾಂಗಿಯಾಗಿ ಕೇವಲ 42 ಎಸೆತಗಳಲ್ಲಿ ಅಜೇಯ 98ರನ್ಗಳಿಕೆ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಇದರ ಬಗ್ಗೆ ಮಾತನಾಡಿರುವ ಗೌತಮ್ ಗಂಭೀರ್, 29 ವರ್ಷದ ರಾಹುಲ್, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗಿಂತಲೂ ಹೆಚ್ಚಿನ ಸಾಮರ್ಥ್ಯ ಹೊಂದಿದ್ದಾರೆ. ಐಪಿಎಲ್ ಅಭಿಯಾನದ ಉದ್ದಕ್ಕೂ ಅವರ ಬ್ಯಾಟಿಂಗ್ ಪ್ರದರ್ಶನ ಉತ್ತಮವಾಗಿದ್ದು, ಅವರಲ್ಲಿ ಇತರರಿಗಿಂತಲೂ ಹೆಚ್ಚಿನ ಹೊಡೆತ ಹೊಂದಿದ್ದಾರೆಂದು ಹೇಳಿಕೊಂಡಿದ್ದಾರೆ.ಅನೇಕ ಪಂದ್ಯಗಳಲ್ಲಿ ಅದನ್ನ ಕನ್ನಡಿಗ ರಾಹುಲ್ ಸಾಬೀತುಪಡಿಸಿದ್ದಾರೆಂದು ತಿಳಿಸಿದ್ದಾರೆ.
ಆಟವಾಡಿ, ಭಾರತದಲ್ಲಿ ಮಾತ್ರವಲ್ಲ, ನಿಮ್ಮ ಸಾಮರ್ಥ್ಯವನ್ನ ಇಡೀ ಪ್ರಪಂಚಕ್ಕೆ ತೋರಿಸಿ. ಜನರು ರೋಹಿತ್, ವಿರಾಟ್ ಬಗ್ಗೆ ಮಾತನಾಡುವಾಗ ಖಂಡಿತವಾಗಿ ನಿಮ್ಮ ಹೆಸರು ತೆಗೆದುಕೊಳ್ಳುತ್ತಾರೆ. ಇದಕ್ಕೆ ಕಾರಣವಾಗಿದ್ದು, ನಿಮ್ಮ ಬ್ಯಾಟಿಂಗ್ ಸಾಮರ್ಥ್ಯ ಎಂದು ಗಂಭೀರ್ ಹೇಳಿದ್ದಾರೆ.
ಇದನ್ನೂ ಓದಿರಿ: T20 ವಿಶ್ವಕಪ್: ಹಾರ್ದಿಕ್ - ವರುಣ್ ಗಾಯದ ಸಮಸ್ಯೆ: ಮಾರ್ಗದರ್ಶಕ ಧೋನಿ ಮೇಲೆ ಎಲ್ಲರ ಕಣ್ಣು!
14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಂಜಾಬ್ ತಂಡ 14 ಪಂದ್ಯಗಳಿಂದ 12 ಅಂಕಗಳಿಕೆ ಮಾಡಿದ್ದು, ಪ್ಲೇ-ಆಫ್ ಪ್ರವೇಶ ಮಾಡುವಲ್ಲಿ ವಿಫಲಗೊಂಡಿದೆ. ಆದರೆ, ರಾಹುಲ್ 13 ಪಂದ್ಯಗಳಿಂದ 626ರನ್ಗಳಿಕೆ ಮಾಡಿ ಮಿಂಚಿದ್ದಾರೆ. ಕೆಲವೊಂದು ಪಂದ್ಯಗಳಲ್ಲಿ ಆಕ್ರಮಣಕಾರಿ ಪ್ರದರ್ಶನ ತೋರುವಲ್ಲಿ ರಾಹುಲ್ ವಿಫಲಗೊಂಡಿರುವ ಕಾರಣ, ಪ್ಲೇ-ಆಫ್ ಹಂತಕ್ಕೆ ಹೋಗುವಲ್ಲಿ ಎಡವಿದೆ ಎಂದು ಇದೇ ವೇಳೆ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.