ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಕೆಕೆಆರ್ ಮತ್ತು ರಾಜಸ್ಥಾನ್ ನಡುವೆ ನಿನ್ನೆ ನಡೆದ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು. ರಾಜಸ್ಥಾನದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿ ದಾಖಲೆ ಸೃಷ್ಟಿಸಿದರೆ, ಬೌಲಿಂಗ್ನಲ್ಲಿ ಚಹಾಲ್ ಮಿಂಚಿದರು.
ರಾಜಸ್ಥಾನದ ಈ ಇಬ್ಬರು ಆಟಗಾರರು ಪಂದ್ಯದಲ್ಲಿ ಅಬ್ಬರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಐಪಿಎಲ್ ಇತಿಹಾಸದಲ್ಲಿಯೂ ತಮ್ಮ ಹೆಸರುಗಳಲ್ಲಿ ಹೊಸ ರೆಕಾರ್ಡ್ ಕ್ರಿಯೆಟ್ ಮಾಡಿದ್ದಾರೆ. ಯಶಸ್ವಿ ಜೈಸ್ವಾಲ್ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಐಪಿಎಲ್‌ನಲ್ಲಿ ವೇಗದ ಅರ್ಧಶತಕದ ದಾಖಲೆ ಹೊಂದಿದ್ದ ಕೆ.ಎಲ್.ರಾಹುಲ್ ಅವರನ್ನು ಹಿಂದಿಕ್ಕಿದರು. ಜೈಸ್ವಾನ್ ಇನಿಂಗ್ಸ್‌ನಲ್ಲಿ 13 ಬೌಂಡರಿ, 5 ಸಿಕ್ಸರ್ ಒಳಗೊಂಡಿತ್ತು. ಬೌಲರ್ ಯಜುವೇಂದ್ರ ಚಹಾಲ್ 4 ವಿಕೆಟ್ ಪಡೆದು ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂದೆನಿಸಿಕೊಂಡರು. ಇದೇ ವೇಳೆ, ಪ್ರಸಕ್ತ ಐಪಿಎಲ್‌ನಲ್ಲಿ ಮೊದಲ ಓವರ್‌ನಲ್ಲಿ ಹೆಚ್ಚು ರನ್ ನೀಡಿದ ತಂಡಗಳ ಕಳಪೆ ಪ್ರದರ್ಶನದ ಪಟ್ಟಿಗೆ ಕೆಕೆಆರ್ ಸೇರಿದೆ.
ಐಪಿಎಲ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದವರು:
- 13 (ಅರ್ಧಶತಕ) - ಯಶಸ್ವಿ ಜೈಸ್ವಾಲ್ (ರಾಜಸ್ಥಾನ್ ರಾಯಲ್ಸ್) ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್, 2023
- 14- ಕೆ.ಎಲ್.ರಾಹುಲ್ (ಪಂಜಾಬ್ ಕಿಂಗ್ಸ್) vs ಡೆಲ್ಲಿ ಕ್ಯಾಪಿಟಲ್ಸ್, ಮೊಹಾಲಿ, 2018
- 14- ಕೆ.ಎಲ್.ರಾಹುಲ್, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್, 2018
- 14- ಪ್ಯಾಟ್ ಕಮ್ಮಿನ್ಸ್ (ಕೋಲ್ಕತ್ತಾ ನೈಟ್ ರೈಡರ್ಸ್) vs ಮುಂಬೈ ಇಂಡಿಯನ್ಸ್, ಪುಣೆ, 2022
- 15- ಯೂಸುಫ್ ಪಠಾಣ್, KKR vs ಸನ್ ರೈಸರ್ಸ್ ಹೈದರಾಬಾದ್, 2014
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದವರು:
- ಯುವರಾಜ್ ಸಿಂಗ್ 12 ಎಸೆತ, ಭಾರತ vs ಇಂಗ್ಲೆಂಡ್, 2007
- ಕ್ರಿಸ್ ಗೇಲ್ 12 ಎಸೆತ, ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧ ಅಡಿಲೇಡ್ ಸ್ಟ್ರೈಕರ್ಸ್, 2016
- ಹಜರತುಲ್ಲಾ ಝಜೈ 12, ಕಾಬೂಲ್ ಜವಾನ್ಸ್ vs ಬಲ್ಕ್ ಲೆಜೆಂಡ್ಸ್, 2018
- ಮಾರ್ಕಸ್ ಟ್ರೆಸ್ಕೋಥಿಕ್ 13 ಎಸೆತ, ಸೋಮರ್‌ಸೆಟ್ ವಿ ಹ್ಯಾಂಪ್‌ಶೈರ್, 2010
- ಮಿರ್ಜಾ ಅಹ್ಸನ್ 13 ಎಸೆತ, ಆಸ್ಟ್ರಿಯಾ ವಿರುದ್ಧ ಲಕ್ಸೆಂಬರ್ಗ್, 2019
- ಸುನಿಲ್ ನರೈನ್ 13 ಎಸೆತ, ಕೊಮಿಲ್ಲಾ ವಿರುದ್ಧ ಚಿತ್ತಗಾಂಗ್, 2022
- ಯಶಸ್ವಿ ಜೈಸ್ವಾಲ್ 13 ಎಸೆತ, ರಾಜಸ್ಥಾನ ರಾಯಲ್ಸ್ ವಿರುದ್ಧ ಕೆಕೆಆರ್, 2023
ಐಪಿಎಲ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳು:
- ಯಜುವೇಂದ್ರ ಚಹಾಲ್ - 143* ಪಂದ್ಯಗಳಲ್ಲಿ 184
- ಡ್ವೇನ್ ಬ್ರಾವೋ - 161 ಪಂದ್ಯಗಳಲ್ಲಿ 183
- ಪಿಯೂಷ್ ಚಾವ್ಲಾ - 176 ಪಂದ್ಯಗಳಲ್ಲಿ 174
- ಅಮಿತ್ ಮಿಶ್ರಾ - 160 ಪಂದ್ಯಗಳಲ್ಲಿ 172
- ಆರ್ ಅಶ್ವಿನ್ - 196* ಪಂದ್ಯಗಳಲ್ಲಿ 171
- ಲಸಿತ್ ಮಾಲಿಂಗ - 122 ಪಂದ್ಯಗಳಲ್ಲಿ 170
ಐಪಿಎಲ್ನ ಮೊದಲ ಓವರ್‌ನಲ್ಲಿ ಹೆಚ್ಚು ರನ್ ದಾಖಲಿಸಿದ ತಂಡಗಳು:
27/0 - RCB ವಿರುದ್ಧ MI, ಚೆನ್ನೈ, 2011
26/0- ರಾಜಸ್ಥಾನ್ ರಾಯಲ್ಸ್ ವಿರುದ್ಧ KKR, ಕೋಲ್ಕತ್ತಾ, 2023
26/0 - KKR vs ಮುಂಬೈ ಇಂಡಿಯನ್ಸ್, ಕೋಲ್ಕತ್ತಾ, 2013
25/0 - ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಕೆಕೆಆರ್, ಅಹಮದಾಬಾದ್, 2021
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಯುವ ಆಟಗಾರರ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಇದನ್ನೂ ಓದಿ: ಕೆಕೆಆರ್ ಮಣಿಸುವಲ್ಲಿ ರಾಜಸ್ಥಾನ 'ಯಶಸ್ವಿ': ಫೋಟೋಗಳಲ್ಲಿ ಮ್ಯಾಚ್ ಆನಂದಿಸಿ