ETV Bharat / sports

ಬ್ಯಾಟಿಂಗ್‌ನಲ್ಲಿ ಕೆಕೆಆರ್‌ ವೆಂಕಿ ಬೆಂಕಿ: ಇರ್ಫಾನ್, ಹೇಡನ್‌ ಹೇಳಿದ್ದೇನು?

ಕೋಲ್ಕತ್ತಾ ನೈಟ್​ ರೈಡರ್ಸ್ ತಂಡದ ಯಂಗ್ ಬ್ಯಾಟರ್​​ ವೆಂಕಟೇಶ್ ಅಯ್ಯರ್​​ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಟೀಂ ಇಂಡಿಯಾ ಮಾಜಿ ಪ್ಲೇಯರ್​​ ಇರ್ಫಾನ್ ಪಠಾಣ್ ಹಾಗೂ ಪಾಕ್​ ತಂಡಕ್ಕೆ ಕೋಚ್​ ಆಗಿ ನೇಮಕಗೊಂಡಿರುವ ಮ್ಯಾಥ್ಯೂ ಹೆಡನ್​ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Venkatesh Iyer
Venkatesh Iyer
author img

By

Published : Sep 24, 2021, 3:44 PM IST

ಹೈದರಾಬಾದ್​: ಬಲಿಷ್ಠ ಮುಂಬೈ ಇಂಡಿಯನ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಆರಂಭಿಕ ಬ್ಯಾಟರ್​​ ವೆಂಕಟೇಶ್​ ಅಯ್ಯರ್​ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

Venkatesh Iyer
ಅದ್ಭುತ ಪ್ರದರ್ಶನ ನೀಡಿದ ವೆಂಕಟೇಶ್ ಅಯ್ಯರ್​

ಮುಂಬೈ ನೀಡಿದ್ದ 156 ರನ್​ಗಳ ಗುರಿ ಬೆನ್ನತ್ತಿದ್ದ ಕೆಕೆಆರ್​​ ಆರಂಭಿಕ ಬ್ಯಾಟರ್​​ ವೆಂಕಟೇಶ್​ ಅಯ್ಯರ್​​​ ಆಕರ್ಷಕ 53 ರನ್​ (ಕೇವಲ 30 ಎಸೆತಗಳಲ್ಲಿ 3 ಸಿಕ್ಸರ್​​​​, 4ಬೌಂಡರಿ)ಗಳ ಸಹಾಯದಿಂದ ತಂಡ ಗೆಲುವಿನ ನಗೆ ಬೀರಿತು.

ಇವರ ಬ್ಯಾಟಿಂಗ್​​ ವೈಖರಿಯನ್ನು ಟೀಂ ಇಂಡಿಯಾ ಮಾಜಿ ಆಟಗಾರ ಇರ್ಫಾನ್ ಪಠಾಣ್​ ಹಾಗೂ ಆಸ್ಟ್ರೇಲಿಯಾ ಆಲ್​ರೌಂಡರ್ ಮ್ಯಾಥ್ಯೂ ಹೆಡನ್​ ಗುಣಗಾನ ಮಾಡಿದ್ದಾರೆ.

Irfan Pathan
ಟೀಂ ಇಂಡಿಯಾ ಆಲ್​ರೌಂಡರ್​ ಇರ್ಫಾನ್ ಪಠಾಣ್​

ಆರ್​​ಸಿಬಿ ವಿರುದ್ಧದ ಪಂದ್ಯದಲ್ಲೂ ಗಮನಾರ್ಹ ಬ್ಯಾಟಿಂಗ್ ಮಾಡಿರುವ ವೆಂಕಟೇಶ್​​, ಮುಂಬೈ ವಿರುದ್ಧದ ಪಂದ್ಯದಲ್ಲೂ ಅದೇ ರೀತಿಯ ಮನಸ್ಥಿತಿಯಿಂದ ಬ್ಯಾಟ್​ ಬೀಸಿದ್ದರು. ಜಸ್​ಪ್ರೀತ್​ ಬುಮ್ರಾರಂತಹ ಬೌಲರ್​ ವಿರುದ್ಧ ಅದ್ಭುತವಾಗಿ ಬ್ಯಾಟಿಂಗ್ ಮಾಡಿರುವ ವೆಂಕಟೇಶ್ ಸುಲಭವಾಗಿ ರನ್​ಗಳಿಕೆ ಮಾಡಿದ್ದಾರೆ ಎಂದು ಪಠಾಣ್ ಹೇಳಿದ್ದಾರೆ.

Matthew Hayden
ಪಾಕ್ ತಂಡದ ನೂತನ ಕೋಚ್​ ಮ್ಯಾಥ್ಯೂ ಹೆಡನ್​​

ಬ್ಯಾಟಿಂಗ್ ವೇಳೆ ವೆಂಕಟೇಶ್ ಅವರ ಕೆಲವು ಹೊಡೆತ, ಕವರ್​ ಡ್ರೈವ್‌ಗಳು​ ಅದ್ಭುತವಾಗಿದ್ದವು. ವಿಶ್ವದರ್ಜೆಯ ಬೌಲರ್​ಗಳಾದ ಬುಮ್ರಾ ಹಾಗೂ ಬೌಲ್ಟ್​ ವಿರುದ್ಧ ಅಯ್ಯರ್​ ಬ್ಯಾಟಿಂಗ್​ ನಿಜಕ್ಕೂ ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಆಟಗಾರ ಹೆಡನ್​ ಕೂಡ ವೆಂಕಟೇಶ್​ ಬ್ಯಾಟಿಂಗ್​ ಪ್ರದರ್ಶನಕ್ಕೆ ಪ್ರಭಾವಿತರಾಗಿದ್ದು, ಅವರ ಬ್ಯಾಟಿಂಗ್​​ ನಿಜಕ್ಕೂ ಅದ್ಭುತವಾಗಿತ್ತು ಎಂದಿದ್ದಾರೆ.

ಕೆಕೆಆರ್ ಪರ ಮತ್ತೋರ್ವ ಆಟಗಾರ ರಾಹುಲ್ ತ್ರಿಪಾಠಿ 42 ಎಸೆತಗಳಲ್ಲಿ 3 ಸಿಕ್ಸರ್​, 8 ಬೌಂಡರಿ ಸೇರಿದಂತೆ ಅಜೇಯ 74ರನ್​ಗಳಿಕೆ ಮಾಡಿದ್ದರು.

ಇದನ್ನೂ ಓದಿ: ದೆಹಲಿ ರೋಹಿಣಿ ಕೋರ್ಟ್​ ಆವರಣದಲ್ಲೇ ಶೂಟೌಟ್​; ಗ್ಯಾಂಗ್​​ಸ್ಟರ್ ಸೇರಿ ಮೂವರು ಸಾವು

ಕೋಲ್ಕತ್ತಾ ನೈಟ್​ ರೈಡರ್ಸ್​ ಮುಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಸೆಣಸಾಟ ನಡೆಸಲಿದೆ. ಸೆಪ್ಟೆಂಬರ್​​ 26ರಂದು ಪಂದ್ಯ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.