ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀನ್ನ 15ನೇ ಆವೃತ್ತಿಗಾಗಿ ಈಗಿನಿಂದಲೇ ಭರ್ಜರಿ ತಯಾರಿ ಆರಂಭಗೊಂಡಿದ್ದು, ಎರಡು ತಂಡಗಳು ಸೇರ್ಪಡೆ ಮಾಡಿಕೊಳ್ಳಲು ಈಗಾಗಲೇ ಬಿಡ್ ಖರೀದಿ ಕೂಡ ಮುಗಿದಿದೆ. ಇದರ ಬೆನ್ನಲ್ಲೇ ಮತ್ತೊಂದು ಮಹತ್ವದ ಮಾಹಿತಿ ಹೊರಬಿದ್ದಿದೆ.
ಮುಂದಿನ ಆವೃತ್ತಿ ಐಪಿಎಲ್ಗಾಗಿ ಡಿಸೆಂಬರ್ ತಿಂಗಳಲ್ಲಿ ದೊಡ್ಡ ಮಟ್ಟದ ಹರಾಜು ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಈಗಾಗಲೇ 8 ಫ್ರಾಂಚೈಸಿಗಳು ಕೇವಲ ನಾಲ್ವರು ಆಟಗಾರರಿಗೆ ಉಳಿಸಿಕೊಳ್ಳಲು ಅವಕಾಶ ನೀಡಿದೆ. ಆದರೆ, ಆರ್ಟಿಎಂಗೆ ಯಾವುದೇ ರೀತಿಯ ಅವಕಾಶವಿಲ್ಲ ಎಂದಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಇಬ್ಬರು ಭಾರತೀಯರು, ಇಬ್ಬರು ವಿದೇಶಿ ಆಟಗಾರರು ಅಥವಾ ಮೂವರು ಭಾರತೀಯ ಪ್ಲೇಯರ್ಸ್, ಓರ್ವ ವಿದೇಶಿ ಆಟಗಾರನಿಗೆ ತಂಡದಲ್ಲಿ ಉಳಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿರಿ: ಐಪಿಎಲ್ ಹೊಸ ತಂಡಗಳ ಹರಾಜು ಪ್ರಕ್ರಿಯೆಗೆ ದಿನಗಣನೆ: ಅಹಮದಾಬಾದ್, ಲಖನೌ ಹೊಸ ಫ್ರಾಂಚೈಸಿ?
ಆದರೆ, ಈ ಹಿಂದೆ ಮೂವರು ಸ್ವದೇಶಿ ಹಾಗೂ ಇಬ್ಬರು ವಿದೇಶಿ ಪ್ಲೇಯರ್ಸ್ಗೆ ಉಳಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಆರ್ಟಿಎಂ( Right to match card) ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಲಾಗಿತ್ತು. ಆದರೆ, ಇದೀಗ ಅದಕ್ಕೆ ಅವಕಾಶವಿಲ್ಲ ಎಂದು ವರದಿಯಾಗಿದೆ.
ಮುಂದಿನ ವರ್ಷದ ಐಪಿಎಲ್ನಲ್ಲಿ 10 ತಂಡಗಳು ಕಣಕ್ಕಿಳಿಯಲಿದ್ದು, ಅದಕ್ಕಾಗಿ ಬಿಡ್ ಖರೀದಿ ಸಮಯವಕಾಶ ಈಗಾಗಲೇ ಮುಕ್ತಾಯಗೊಂಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಅಹಮದಾಬಾದ್ ಹಾಗೂ ಲಖನೌ ಹೊಸ ಫ್ರಾಂಚೈಸಿಗಳಾಗಿ ಕಾಣಿಸಿಕೊಳ್ಳಬಹುದು ಎನ್ನಲಾಗ್ತಿದೆ. ಐಪಿಎಲ್‌ನ ಎರಡು ಹೊಸ ತಂಡಗಳ ಹರಾಜು ಪ್ರಕ್ರಿಯೆ ಅಕ್ಟೋಬರ್ 25 ರಂದು ನಡೆಯುವ ಸಾಧ್ಯತೆ ಇದೆ.