ಅಹಮದಾಬಾದ್: ಗುಜರಾತ್ ಟೈಟಾನ್ಸ್ ವಿರುದ್ಧ 15 ಓವರ್‌ಗಳ ನಂತರ ರಾಜಸ್ಥಾನ್ ರಾಯಲ್ಸ್ ಆರಂಭಿಕ ಸ್ಥಿರ ಆಟದ ನಂತರ ವಿಕೆಟ್ ಪತನದತ್ತ ಸಾಗಿದೆ. 98ಕ್ಕೆ 6 ವಿಕೆಟ್ಗಳನ್ನು ಕಳೆದುಕೊಂಡಿರುವ ರಾಜಸ್ಥಾನ್ ಉತ್ತಮ ಆಧಾರ ಸಿಗದೇ ಗಟ್ಟಿ ಮೊತ್ತ ಕಲೆ ಹಾಕುವಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (16 ಎಸೆತಗಳಲ್ಲಿ 22) ಬಿರುಸಿನ ಆಟ ಪ್ರದರ್ಶಿಸಿ ಬೇಗ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕ ಸಂಜು ಸ್ಯಾಮ್ಸನ್ (11 ಎಸೆತಗಳಲ್ಲಿ 14 ರನ್) ಮಾತ್ರ ಗಳಿಸಿದರು.
ಗುಜರಾತ್ ಟೈಟಾನ್ಸ್ ಪರ ಯಶ್ ದಯಾಳ್ ಜೈಸ್ವಾಲ್ ಅವರ ವಿಕೆಟ್ ಪಡೆದರು. ಸ್ಯಾಮ್ಸನ್ ಅವರ ವಿಕೆಟ್ಅನ್ನು ನಾಯಕ ಹಾರ್ದಿಕ್ ಪಾಂಡ್ಯ ಪಡೆದರು. ಹಾರ್ದಿಕ್ ಪಾಂಡ್ಯಗೆ 3 ವಿಕೆಟ್ ಪಡೆಯುವ ಮೂಲಕ 4 ಓವರ್‌ಗಳಲ್ಲಿ 17ರನ್ ಮಾತ್ರ ಬಿಟ್ಟು ಕೊಟ್ಟರು.
ಮೊದಲ 15 ಓವರ್‌ಗಳಲ್ಲಿ ಮೊಹಮ್ಮದ್ ಶಮಿ, ರಶೀದ್ ಖಾನ್, ಇತರರು ಬಿಗಿಯಾದ ಲೈನ್ ಮತ್ತು ಲೆಂತ್ ಬೌಲಿಂಗ್ ಮಾಡಿದರೂ ಆರ್‌ಆರ್ ಆಕ್ರಮಣಕಾರಿ ಆಟಕ್ಕೆ ಆವಕಾಶ ನೀಡಲಿಲ್ಲ. ಜೋಸ್ ಬಟ್ಲರ್ (29 ಎಸೆತಗಳಲ್ಲಿ 34 ರನ್), ದೇವದತ್ ಪಡಿಕ್ಕಲ್ (10ಎಸೆತಗಳಲ್ಲಿ 2ರನ್), ಶಿಮ್ರಾನ್ ಹೆಟ್ಮೆಯರ್(12 ಎಸೆತಗಳಲ್ಲಿ 11ರನ್), ರವಿಚಂದ್ರನ್ ಅಶ್ವಿನ್,(9 ಎಸೆತಗಳಲ್ಲಿ 6ರನ್) ಟ್ರೆಂಟ್ ಬೌಲ್ಟ್, (7 ಎಸೆತಗಳಲ್ಲಿ 11ರನ್) ವಿಕೆಟ್ ಒಪ್ಪಿಸಿದ್ದಾರೆ. ರಿಯಾನ್ ಪರಾಗ್ ಮತ್ತು ಓಬೇದ್ ಮೆಕಾಯ್ ಪ್ರಸ್ತುತ ಕ್ರೀಸ್‌ನಲ್ಲಿದ್ದಾರೆ.