ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ಮೂಲಕ ರಿಷಭ್ ಪಂತ್ ಬಳಗ ಮುಂದಿನ ಹಂತಕ್ಕೆ ಲಗ್ಗೆ ಹಾಕುವ ಕನಸು ಕಾಣುತ್ತಿದ್ದರೆ, ಕೊನೆಯ ಪಂದ್ಯದಲ್ಲಿ ಗೆಲುವು ದಾಖಲಿಸಿ ಅಭಿಯಾನ ಮುಗಿಸುವ ಇರಾದೆ ರೋಹಿತ್ ಬಳಗ ಹೊಂದಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಹತ್ವದಾಗಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ದಾಖಲು ಮಾಡಿದರೆ, ಆರ್ಸಿಬಿ 4ನೇ ತಂಡವಾಗಿ ಪ್ಲೇ - ಆಫ್ ಪ್ರವೇಶ ಪಡೆದುಕೊಳ್ಳಲಿದೆ. ರೋಹಿತ್ ಬಳಗ ಈಗಾಗಲೇ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿದ್ದು, ಇಂದಿನ ಪಂದ್ಯದಲ್ಲಿ ಗೆಲುವು ದಾಖಲಿಸುವ ಇರಾದೆ ಹೊಂದಿದೆ. ಇನ್ನು ಈ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ಗೆ ಕ್ವಾರ್ಟರ್ ಫೈನಲ್ ಆಗಿದ್ದು, ಗೆದ್ದರೆ ಪ್ಲೇ-ಆಫ್ ಪ್ರವೇಶ ಪಡೆದುಕೊಳ್ಳಲಿದೆ.
ಇದನ್ನೂ ಓದಿ: ಮುಂಬೈ.. ಮುಂಬೈ: ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ರೋಹಿತ್ ಬಳಗಕ್ಕೆ ಕೊಹ್ಲಿ, ಡುಪ್ಲೆಸಿಸ್ ಬೆಂಬಲ
ಅರ್ಜುನ್ ತೆಂಡೂಲ್ಕರ್ಗೆ ಅವಕಾಶ?: ಕಳೆದ ಎರಡು ಆವೃತ್ತಿಗಳಿಂದಲೂ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ದಿಗ್ಗಜ ಕ್ರಿಕೆಟಿಗ ಅರ್ಜುನ್ ತೆಂಡೂಲ್ಕರ್ಗೆ ಇಂದಿನ ಪಂದ್ಯದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. ಈ ಹಿಂದಿನ ಪಂದ್ಯದಲ್ಲೇ ಕೆಲವೊಂದು ಯುವ ಪ್ರತಿಭೆಗಳಿಗೆ ಅವಕಾಶ ನೀಡುವುದಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ ಹೇಳಿರುವ ಕಾರಣ, ಇಂದಿನ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಚಾನ್ಸ್ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಐಪಿಎಲ್ನಲ್ಲಿ ಉಭಯ ತಂಡಗಳು ಇಲ್ಲಿಯವರೆಗೆ 29 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಮುಂಬೈ ಇಂಡಿಯನ್ಸ್ 16 ಪಂದ್ಯ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ 15 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿವೆ.
ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್(ವಿ,ಕೀ), ರೋಹಿತ್ ಶರ್ಮಾ, ಬ್ರೇವಿಸ್, ತಿಲಕ್ ವರ್ಮಾ, ಸ್ಟುಬ್ಸ್, ಟಿಮ್ ಡೇವಿಡ್, ರಮಣದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ. ಕುಮಾರ್ ಕಾರ್ತಿಕೇಯ್, ಜಯದೇವ್ ಉನ್ಕಾದತ್/ಅರ್ಜುನ್ ತೆಂಡೂಲ್ಕರ್, ಮರ್ಡಿತ್
ಡೆಲ್ಲಿ ಕ್ಯಾಪಿಟಲ್ಸ್: ಸರ್ಫರಾಜ್ ಖಾನ್, ಡೇವಿಡ್ ವಾರ್ನರ್, ಮಿಚಲ್ ಮಾರ್ಷ್, ರಿಷಭ್ ಪಂತ್(ವಿ.ಕೀ, ಕ್ಯಾಪ್ಟನ್), ಲಲಿತ್ ಯಾದವ್, ಪೊವೆಲ್, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ನೊರ್ಡ್ಜೆ, ಖಲೀಲ್ ಅಹ್ಮದ್
-
Found this in archives 🤞😛#MIvDC pic.twitter.com/laTOcFAeDM
— DK (@DineshKarthik) May 21, 2022 " class="align-text-top noRightClick twitterSection" data="
">Found this in archives 🤞😛#MIvDC pic.twitter.com/laTOcFAeDM
— DK (@DineshKarthik) May 21, 2022Found this in archives 🤞😛#MIvDC pic.twitter.com/laTOcFAeDM
— DK (@DineshKarthik) May 21, 2022
ಮುಂಬೈ - ಡೆಲ್ಲಿ ಪಂದ್ಯ ಹಿನ್ನೆಲೆಯಲ್ಲಿ ಆರ್ಸಿಬಿ ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ತಮ್ಮ ಟ್ವೀಟರ್ ಅಕೌಂಟ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದ ಸಮಯದಲ್ಲಿನ ಜೆರ್ಸಿ ತೊಟ್ಟಿರುವ ಫೋಟೋ ಶೇರ್ ಮಾಡಿದ್ದಾರೆ.