ETV Bharat / sports

IPLನಲ್ಲಿ ಮತ್ತೊಂದು ಕಳಪೆ ಸ್ಕೋರ್ ಮಾಡಿದ ಸಿಎಸ್​​​ಕೆ.. ಈ ಪಂದ್ಯದಲ್ಲೂ ಧೋನಿ ರೆಕಾರ್ಡ್​!

ಇಂಡಿಯನ್​ ಪ್ರೀಮಿಯರ್​ ಲೀಗ್​ನ 2022ರ ಆವೃತ್ತಿಯಲ್ಲಿ ಸಿಎಸ್​​ಕೆ ತಂಡ ಮುಂಬೈ ಇಂಡಿಯನ್ಸ್​ ವಿರುದ್ಧ ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದು, ಕೇವಲ 97ರನ್​​​ಗಳಿಗೆ ಆಲೌಟ್​​ ಆಗಿದೆ.

CSK's lowest totals In IPL
CSK's lowest totals In IPL
author img

By

Published : May 12, 2022, 10:26 PM IST

ಮುಂಬೈ: ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್​​​ ಹಣೆಬರಹ ಸರಿ ಇರುವ ಹಾಗೇ ಕಾಣಿಸ್ತಿಲ್ಲ. ಈಗಾಗಲೇ ಪ್ಲೇ-ಆಫ್​​ ರೇಸ್​​​ನಿಂದ ಬಹುತೇಕ ಹೊರಬಿದ್ದಿರುವ ತಂಡ ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ಕಳಪೆ ದಾಖಲೆಗೆ ಪಾತ್ರವಾಯಿತು. ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಸಂಪೂರ್ಣವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಸಿಎಸ್​​​ಕೆ ಕೇವಲ 97ರನ್​​​ಗಳಿಗೆ ಆಲೌಟ್​ ಆಯಿತು. ಈ ಮೂಲಕ ಮತ್ತೊಮ್ಮೆ ಕಡಿಮೆ ಸ್ಕೋರ್​​ಗಳಿಸಿರುವ ಕೆಟ್ಟ ದಾಖಲೆ ಬರೆಯಿತು.

ಐಪಿಎಲ್​​ನಲ್ಲಿ ಸಿಎಸ್​​ಕೆ 2008ರಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ 109ರನ್​​, 2013ರಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ 79ರನ್​​ ಹಾಗೂ 2019ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಕೇವಲ 109ರನ್​​​ಗಳಿಗೆ ಆಲೌಟ್​ ಆಗುವ ಮೂಲಕ ಅತಿ ಕಡಿಮೆ ಸ್ಕೋರ್​ಗಳಿಕೆ ಮಾಡಿರುವ ತಂಡವಾಗಿತ್ತು. ಇದೀಗ 2022ರಲ್ಲೂ ಮುಂಬೈ ಇಂಡಿಯನ್ಸ್​ ವಿರುದ್ಧ ವಾಂಖೆಡೆ ಮೈದಾನದಲ್ಲಿ ಕೇವಲ 97ರನ್​​ಗಳಿಗೆ ಆಲೌಟ್​ ಆಗಿದೆ.

ಇದನ್ನೂ ಓದಿ: MI vs CSK ಪಂದ್ಯದಲ್ಲೊಂದು ಅಚ್ಚರಿ ಘಟನೆ.. ಸ್ಟೇಡಿಯಂನಲ್ಲಿ ಪವರ್​ಕಟ್​​ ಲಾಭ ಪಡೆದ ಮುಂಬೈ!

ಧೋನಿ ರೆಕಾರ್ಡ್​: ಅತಿ ಕಡಿಮೆ ಸ್ಕೋರ್ ಮಾಡಿರುವ ಈ ಪಂದ್ಯದಲ್ಲೂ ಧೋನಿ ರೆಕಾರ್ಡ್​ ಬರೆದಿದ್ದು, ತಂಡದ ಪರ 21ನೇ ಸಲ ಅತಿ ಹೆಚ್ಚು ವೈಯಕ್ತಿಕ ಸ್ಕೋರ್​ ಗಳಿಕೆ ಮಾಡಿರುವ ಪ್ಲೇಯರ್​ ಆಗಿ ಹೊರಹೊಮ್ಮಿದ್ದಾರೆ. ಇಂದಿನ ಪಂದ್ಯದಲ್ಲಿ ಧೋನಿ 36ರನ್​​​ಗಳಿಕೆ ಮಾಡಿದರು. ಮುಂಬೈ ವಿರುದ್ಧದ ಪಂದ್ಯದಲ್ಲಿ ಸಿಎಸ್​​ಕೆ ತಂಡದ ಮೂವರು ಪ್ಲೇಯರ್ಸ್​ ಶೂನ್ಯಕ್ಕೆ ಔಟಾದರೆ,ನಾಲ್ವರು ಬ್ಯಾಟರ್ ಒಂದಕ್ಕಿ ಹಾಗೂ ಧೋನಿ, ಶಿವಂ ದುಬೆ ಸೇರಿದಂತೆ ನಾಲ್ವರು ಎರಡಕ್ಕಿ ರನ್​ಗಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.